ಷರೀಫರ ನಾಡು ಉಳಿವಿಗಾಗಿ ಶಿಗ್ಗಾಂವಿಯಲ್ಲಿ ಬಿಜೆಪಿಯನ್ನು ಸೋಲಿಸಿ : ಎದ್ದೆಳು ಕರ್ನಾಟಕ

Most read

ಸಂವಿಧಾನ ಉಳಿವಿಗಾಗಿ ಇಲ್ಲಿ ಮುಕ್ತವಾಗಿ ಒಗ್ಗೂಡಿ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಬೇಕು ಯಾಕೆಂದರೆ, ಈ ನೆಲದಲ್ಲಿ ಸಂತ ಶಿಶುನಾಳ ಷರೀಫರ ನಾಡು ಸೌಹಾರ್ದತೆಗೆ ಹೆಸರುವಾಸಿಯಾದ ನಾಡಲ್ಲಿ ಕೋಮುಧ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂದು ಮತದಾರರರಿಗೆ ವಕೀಲರಾದ ಅನೀಶ್ ಪಾಷಾ ಡಾವಣಗೇರೆ ಅವರು ಕರೆ ಕೊಟ್ಟಿದ್ದಾರೆ.

ಶಿಗ್ಗಾಂವ ಉಪಚುನಾವಣೆ ಹಿನ್ನಲೆ ಎದ್ದೆಳು ಕರ್ನಾಟಕ, ಜಾಗೃತ ಕರ್ನಾಟಕ, ಮುಸ್ಲಿಂ ಬಾಂಧವ್ಯ ವೇದಿಕೆ ಹಾಗೂ ಜೀವಿಕ ಸಂಘಟನೆಗಳಿಂದ ಶಿಗ್ಗಾಂವ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸ ಮಾತನಾಡಿದ ಅವರು, ಇಲ್ಲಿ ಜನರಿಗೆ ಬೇಕಾದಂತ ಯಾವುದೇ ಮೂಲ ಸೌಲಭ್ಯಗಳನ್ನು ಬಿಜೆಪಿ ನೀಡಿಲ್ಲ. ಕೇವಲ ತಳಸಮುದಾಯಗಳ ಮೇಲೆ ಮತ್ತು ಅಲ್ಪಸಂಖ್ಯಾತರ ಮೇಲೆ ಶೋಷಣೆ ಮತ್ತು ಕೋಮು ಬೆಂಕಿ ಹಚ್ಚುತ್ತಾ ಬಂದಿದೆ. ಹಲಾಲ, ಹಿಜಾಬ, ಆಜಾನ್, ಹುಬ್ಬಳ್ಳಿ ದರ್ಗಾ ಸ್ಥಳಾಂತರಿಸಿ ಹುಬ್ಬಳ್ಳಿ ಕೋಮುಗಲಬೆಗೆ ಹೀಗೆ ಅನೇಕ ಘಟನೆಗಳು ಬಿಜೆಪಿ ಹಾಗೂ ಸಂಘಪರಿವಾರದವರು ಸೇರಿ ನಡೆಸಿದ್ದಾರೆ. ಇವುಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದರು.

ಸೋಹೆಲ್ ಅಹ್ಮದ್ ಮಾತನಾಡಿ ಸಂವಿಧಾನ ಉಳಿವಿಗಾಗಿ ನಾನು ಡಿವೈಎಸ್ಪಿ ಹುದ್ದೆಗೆ ರಾಜಿನಾಮೆ ನೀಡಿ ಜಾಗೃತ ಕರ್ನಾಟಕ ರಾಜಕೀಯ ಮುಮೆಂಟ್‌ನಲ್ಲಿ ತೊಡಗಿದ್ದೆನೆ. ಇಂದಿನ ಯುವಕರು ಧರ್ಮ, ರಾಜಕೀಯ ಧ್ವೇಷದ ದಳ್ಳೂರಿಗೆ ಸಿಲುಕಿ ಹಾದಿ ತಪ್ಪಿದ್ದಾರೆ ತಪ್ಪುತ್ತಿದ್ದಾರೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸಮಾನತಯೇ ಸಂವಿಧಾನದ ಆಶಯವಾಗಿದೆ. ಆದರಾ, ವ್ಯವಸ್ಥಿತವಾಗಿ ಪ್ರಜಾಪ್ರಭುತ್ವವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ದೇಸದ ನೆಲದಲ್ಲಿ ಸೌಹಾರ್ದತೆ ಇದೆ ಶಿಗ್ಗಾಂವ ಸಂತರ ನಾಡು ಕೋಮುದ್ವೇಷದಲ್ಲಿ ಇರುವುದು ಆತಂಕಕಾರಿಯಾಗಿದೆ. ರೈತರು ದೆಹಲಿ ಗಡಿಗಳಲ್ಲಿ ಪ್ರಾಣ ಕಳೆದುಕೊಂಡರು ನಾಡಿಗೆ, ದೇಶಕ್ಕೆ ಅನ್ನಕೊಡುವ ರೈತರನ್ನು ‘ಗಂಜಿಕೊಡುವ ಗಿರಾಕಿ’ ಎಂದು ಲೇವಡಿ ಮಾಡಿದರು. ಧ್ವೇಷ ರಾಜಕೀಯ ಮಾಡುವ ಬಿಜೆಪಿ ಪಕ್ಷ ಸರಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಜನಪರ ಆಡಳಿತ ನಡೆಸುತ್ತದೆ ಎಂದರು.

ಎದ್ದೆಳು ಕರ್ನಾಟಕ ಸಂಘಟನೆಯ ಚೆನ್ನಮ್ಮ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ನೀಡಿ ಸಭಲರಾಗಿ ಬದುಕಲು ಸಹಾಯ ಮಾಡಿದೆ. ಹಾಗಾಗಿ ನಾವೆಲ್ಲರೂ ಈ ಉಪಚುನಾವಣೆಯಲ್ಲಿ ಬೆಂಬಲ ನೀಡಿ ಕಾಂಗ್ರೆಸ್ ಗಲ್ಲಿಸೋಣ ಎಂದರು.

More articles

Latest article