ಲೋಕಸಭಾ ಚುನಾವಣೆ | ತಮಿಳುನಾಡಿನಿಂದ ಶಶಿಕಾಂತ್ ಸೆಂಥಿಲ್ ಕಣಕ್ಕಿಳಿಸಿದ ಕಾಂಗ್ರೆಸ್

Most read

ಕರ್ನಾಟಕ-ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಮತ್ತು ಕಾಂಗ್ರೆಸ್ ಚುನಾವಣಾ ವಾರ್ ರೂಮ್ ಮುಖ್ಯಸ್ಥ ಎಸ್ ಶಶಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಹೌದು, ಈ ಮೂಲಕ ಅವರು ಚುನಾವಣಾ ಅಖಾಡಕ್ಕೆ ಪಾದಾರ್ಪಣೆ ಮಾಡಿದ್ದಾರೆ‌.

ಏಪ್ರಿಲ್ 19ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಒಕ್ಕೂಟದ (ಎಸ್‌ಪಿಎ) ಭಾಗವಾಗಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿರುವ ಒಂಬತ್ತು ಸ್ಥಾನಗಳ ಪೈಕಿ ಏಳು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷವು ಐದು ಹಾಲಿ ಸಂಸದರನ್ನು ಮತ್ತೆ ಕಣಕ್ಕಿಳಿಸಿದೆ. ಇಬ್ಬರು ಹೊಸ ಮುಖಗಳಿಗೆ ಟಿಕೆಟ್ ನೀಡಿದೆ, ಆದರೆ ತಿರುನಲ್ವೇಲಿ ಮತ್ತು ಮೈಲಾಡುತುರೈ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಹೆಸರು ಫೈನಲ್ ಆಗದ ಕಾರಣ ಹೆಸರು ಘೋಷಿಸಲಾಗಿಲ್ಲ.

ಶಶಿಕಾಂತ್ ಸೆಂಥಿಲ್ ಅವರಿಗೆ ತಮಿಳುನಾಡು ಕೃಷ್ಣಗಿರಿಯಿಂದ ಸ್ಪರ್ಧಿಸಲು ಪಕ್ಷ ತೋರಿದ್ದರೂ ಅವರು ತನ್ನ ತಾಯಿ ಹುಟ್ಟೂರಾದ ತಿರುವಳ್ಳೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಕಡೆ ಕ್ಷಣದಲ್ಲಿ ಅವರಿಗೆ ತಿರುವಳ್ಳೂರು ಕ್ಷೇತ್ರದಿಂದ ಟಿಕೆಟ್ ದೊರೆತಿದೆ.

ಚೆನ್ನೈನಲ್ಲಿ ಜನಿಸಿದ ಸೆಂಥಿಲ್ ತಿರುಚಿರಾಪಳ್ಳಿಯ ಆಗಿನ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದರು. ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಒಂದು ವರ್ಷ ಕೆಲಸ ಮಾಡಿದಿನ ನಂತರ 2009ರ ಕರ್ನಾಟಕ-ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ (ನಾಗರಿಕ ಸೇವೆ) ಸೇರಿಕೊಂಡರು.

ಕರ್ನಾಟಕದಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸಿದ ಅವರಿಗೆ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆ, ಸಂವಿಧಾನ ವಿರೋಧಿ ನಡೆಗಳನ್ನು ಗಮನಿಸಿದ ಅವರು 2019ರಲ್ಲಿ ನಾಗರಿಕ ಸೇವೆಗೆ ರಾಜಿನಾಮೆ ನೀಡಿ. ಜನಚಳುವಳಿಗಳ ಜೊತೆ ಸೇರಿಕೊಂಡರು.

2020ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಸೆಂಥಿಲ್ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ವಾರ್ ರೂಂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ವಿಧಾನಸಭೆ ಚುನಾವಣೆ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದರು ಎಂದರೆ ತಪ್ಪಾಗಲಾರದು.

ವಿಧಾನಸಭಾ ಚುನಾವಣೆಯ ನಂತರ ತಮಿಳುನಾಡಿನಲ್ಲಿ ಕೆಲಸ ಮಾಡಲು ಇಚ್ಚಿಸಿದ ಸೆಂಥಿಲ್ ಅವರಿಗೆ ರಾಜಸ್ಥಾನದ ಚುನಾವಣಾ ಜವಾಬ್ದಾರಿ ವಹಿಸಿದ್ದರು. ನಂತರ ದೆಹಲಿ ವಾರ್ ರೂಂ ಮುಖ್ಯಸ್ಥರಾಗಿ ಪಕ್ಷ ನೇಮಿಸಿತ್ತು. ಈಗ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ.

ವಸಂತ್ ಅಂಡ್ ಕೋ ಖ್ಯಾತಿಯ ದಿವಂಗತ ಎಚ್ ವಸಂತಕುಮಾರ್ ಅವರ ಪುತ್ರ ವಿಜಯ್ ವಸಂತ್ ಅವರನ್ನು ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಟಿಎನ್‌ಸಿಸಿ ಮಾಜಿ ಮುಖ್ಯಸ್ಥ ಎಂ ಕೃಷ್ಣಸ್ವಾಮಿ ಅವರ ಪುತ್ರ ಎಂಕೆ ವಿಷ್ಣುಪ್ರಸಾದ್ ಅವರನ್ನು ಆರಾಣಿಯಿಂದ ಕಡಲೂರು ಲೋಕಸಭೆಗೆ ಸ್ಥಳಾಂತರಿಸಲಾಗಿದೆ.

ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿಗೆ ಶಿವಗಂಗಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಪಶ್ಚಿಮ ಪ್ರದೇಶದ ಕರೂರ್‌ನಿಂದ ಜೋತಿಮಣಿ ಮತ್ತು ವಿರುದುನಗರದಿಂದ ಲೋಕಸಭೆಯಲ್ಲಿ ಕಾಂಗ್ರೆಸ್‌ನ ವಿಪ್ ಟ್ಯಾಗೋರ್ ಮರುಚುನಾವಣೆ ಬಯಸುತ್ತಾರೆ.

More articles

Latest article