Thursday, December 12, 2024

ಅಂಗವಿಕಲ ಸರ್ಕಾರಿ ನೌಕರರ ಸಮಸ್ಯೆ ಪರಿಹಾರ: ಶಾಲಿನಿ ರಜನೀಶ್ ಭರವಸೆ

Most read

ಬೆಂಗಳೂರು: ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವಾಗ ಅಂಗವಿಕಲ ನೌಕರರಿಗೆ ಮೀಸಲಾತಿ ನೀಡಲು ತುರ್ತಾಗಿ ಕ್ರಮಕೈಗೊಳ್ಳಲಾಗುವುದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.


ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಗೌರವಾಧ್ಯಕ್ಷ ರೇಣುಕಾರಾಧ್ಯ, ರಾಜ್ಯಾಧ್ಯಕ್ಷ ಇಂದ್ರೇಶ್ ಆರ್., ಕಾರ್ಯದರ್ಶಿಗಳಾದ ಸದಾನಂದ ಆಚಾರ್ಯ, ಡಾ. ರಾಮಣ್ಣ, ಹೆಗಡೆ ಹಾಗೂ ಸಂಘದ ಪದಾಧಿಕಾರಿಗಳ ನಿಯೋಗವು ಮಂಗಳವಾರ ಮುಖ್ಯಕಾರ್ಯದರ್ಶಿಯವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಹಲವಾರು ಬೇಡಿಕೆಗಳ ಕುರಿತು ಸಲ್ಲಿಸಿದ ಮನವಿ ಸ್ವೀಕರಿಸಿ ಈ ಭರವಸೆ ನೀಡಿದರು..


ಸುಪ್ರೀಂ ಕೋರ್ಟ್ ಆದೇಶದಂತೆ ಅಂಗವಿಕಲ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ವಿಧಾನಸೌಧ/ವಿಕಾಸಸೌಧ/ಬಹುಮಹಡಿ ಕಟ್ಟಡಗಳಲ್ಲಿ ವಿಕಲಾಂಗ ವ್ಯಕ್ತಿ ಸ್ನೇಹಿ ವಾತಾವರಣ ಕಲ್ಪಿಸಿರುವುದು ಹಾಗೂ ವಿಕಲಾಂಗ ಸ್ನೇಹಿ ಶೌಚಗೃಹಗಳನ್ನು ನಿರ್ಮಿಸಿರುವ ಬಗ್ಗೆ ಶೀಘ್ರ ವರದಿ ಸಲ್ಲಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯಕಾರಿ ವಿಭಾಗಕ್ಕೆ ದೂರವಾಣಿ ಸೂಚಿಸಿದ್ದರಲ್ಲದೇ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಹ ಹೇಳಿದರು.


ತಕ್ಷಣವೇ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿ ಅವರು, ಸಂಘದ ಇತರೆ ಬೇಡಿಕೆಗಳನ್ನು ಸಹ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು..
ಇದೇವೇಳೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ. 6 ಪ್ರಯಾಣ ಭತ್ಯೆ ನೀಡಲು ಹಾಗೂ ಇತರೆ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಸಕರಾತ್ಮಕವಾಗಿ ತಿಳಿಸಿದರು.
ಇದೇ ವೇಳೆ ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್ ಹಾಗೂ ಮುಖ್ಯಮಂತ್ರಿಯವರ ಆಪ್ತಕಾರ್ಯದರ್ಶಿ ಡಾ. ವೆಂಕಟೇಶಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

More articles

Latest article