ಕೋಲಾರ : ರಾಷ್ಟ್ರೀಯ ಹೆದ್ದಾರಿ 75ರ ಮಡೇರಹಳ್ಳಿ ಸಮೀಪ ಇಂದು ಮಧ್ಯಾಹ್ನ ನಡೆದ ಸರಣಿ ರಸ್ತೆ ಅಪಘಾತದಲ್ಲಿ ಹತ್ತು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಧ್ಯಾಹ್ನ ಸುಮಾರು ಒಂದು ಮೂವತ್ತರಲ್ಲಿ ಬೆಂಗಳೂರಿನಿಂದ ಕೋಲಾರ ರಸ್ತೆ ಮಾರ್ಗದ ಮೂಲಕ ಹೊರಟಿದ್ದ ಈಚೆರ್ ವಾಹನ ಡಿವೈಡರ್ ಮೇಲೆ ಹತ್ತಿಸಿಕೊಂಡು ಕೋಲಾರ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ನೂರು ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಮತ್ತೊಂದು ಈಚರ ವಾಹನಕ್ಕೆ ಅಪ್ಪಳಿಸಿದೆ
ಇದೇ ಸಂದರ್ಭದಲ್ಲಿ ಚೆಲುವನಹಳ್ಳಿ ನಿವಾಸಿ ಶಿವಣ್ಣ ಎಂಬಾತನು ತನ್ನ ದ್ವಿಚಕ್ರ ವಾಹನದಲ್ಲಿ ತನ್ನ ಹತ್ತು ವರ್ಷದ ಮಗ ಲಿಖಿತ್ ಗೌಡ ಎಂಬಾತನನ್ನು ಕರೆದುಕೊಂಡು ಮಡೇರಹಳ್ಳಿಯಲ್ಲಿ ಹೇರ್ ಕಟ್ ಮಾಡಿಸಿಕೊಂಡು ವಾಪಸ್ ಮನೆಯತ್ತ ಹೋಗುತ್ತಿದ್ದಾಗ ಈಚರ್ ವಾಹನವು ಹಿಂಬದಿಂದ ಡಿಕ್ಕಿ ಹೊಡೆದಿದ್ದರ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಆತನ ಮಗ 10 ವರ್ಷದ ಲಿಖಿತ್ ಗೌಡ ನಿಗೆ ತೀರಾ ಸ್ವರೂಪದ ಗಾಯಗಳಾಗಿ ಗಾಯಗಳಾಗಿ ಸಮೀಪದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

