ಕೀಳು ಅಭಿರುಚಿಯ ಕೇಡಿನ ಹಾಡು ‘ಸೆರಗು ಸರ್ಸೆ”

ಸೆನ್ಸಾರ್ ಮಂಡಳಿಯವರಿಗೆ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಕನಿಷ್ಟ ಕಾಳಜಿ ಇದ್ದಿದ್ದೇ ಆದರೆ, ಮಹಿಳೆಯರ ಘನತೆಯ ಬಗ್ಗೆ ಸ್ವಲ್ಪವಾದರೂ ಕಳಕಳಿ ಇದ್ದಿದ್ದೇ ಆದರೆ ಮೊದಲು ಈ ಕೀಳು ದರ್ಜೆಯ ‘ಸೆರಗು ಸರ್ಸೆ’ ಹಾಡನ್ನು ಸಿನೆಮಾದಿಂದ ಅಷ್ಟೇ ಯಾಕೆ ಸಾಮಾಜಿಕ ಜಾಲತಾಣದಿಂದಲೇ ತೆಗೆದು ಹಾಕಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದೇ ಹೋದರೆ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಶಶಿಕಾಂತ ಯಡಹಳ್ಳಿ, ರಂಗಕರ್ಮಿ.

ಸಿನೆಮಾಗಳಲ್ಲಿ ಡಬಲ್ ಮೀನಿಂಗ್ ಹಾಡುಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಹೀಗೆ ಡೈರೆಕ್ಟ್ ಸಿಂಗಲ್ ಮೀನಿಂಗ್ ಸುರತದ ಹಾಡು ಬಹುಷಃ ಕನ್ನಡ ಚಲನಚಿತ್ರದಲ್ಲೇ ಮೊದಲನೆಯದಾಗಿದೆ.

ಪಡ್ಡೆ ಹುಡುಗರ ಚೆಡ್ಡಿ ಬಿಸಿಯಾಗಿಸುವ ಅತೀ ಅಗ್ಗದ ಶಬ್ದ ಸಾಹಿತ್ಯವನ್ನು ಕೆಡಿ: ದಿ ಡೆವಿಲ್ (‘KD: The Devil’) ಎನ್ನುವ ಬಹುಭಾಷಾ ಸಿನೆಮಾದಲ್ಲಿ ಅದರ ನಿರ್ದೇಶಕರಾದ ಪ್ರೇಮ್ ಬರೆದಿದ್ದು ಮಾರ್ಚ್ 14 ರಂದು ಯುಟ್ಯೂಬಲ್ಲಿ ಬಿಡುಗಡೆಯಾಗಿ ವಿವಾದವನ್ನೇ ಹುಟ್ಟುಹಾಕಿದೆ.

ಎಲ್ಲಾ ಕಲಾತ್ಮಕ ಪ್ರಕಾರಗಳಿಗೂ ಅಗೋಚರ ಸೌಜನ್ಯದ ಚೌಕಟ್ಟುಗಳಿರುತ್ತವೆ, ಇರಬೇಕು. ಯಾವಾಗ ಸಾಮಾಜಿಕ ಒಪ್ಪಿತ ಮೌಲ್ಯಗಳನ್ನು ಕಡೆಗಣಿಸಿ ಅಶ್ಲೀಲತೆಯನ್ನು ವೈಭವೀಕರಿಸಿ ಪ್ರಚೋದನೆ ಮಾಡಲಾಗುತ್ತದೆಯೋ ಆಗ ವಿರೋಧ ವ್ಯಕ್ತವಾಗುತ್ತದೆ.

ಈ ಪ್ರೇಮ್ ಎನ್ನುವ ನಿರ್ದೇಶಕ ಇತ್ತೀಚೆಗೆ ಸೃಷ್ಟಿಸಿದ್ದೆಲ್ಲಾ ತೋಪು ಸಿನೆಮಾಗಳೇ. ಮೊದಲಿನಿಂದಲೂ ಕೇವಲ ಗಿಮಿಕ್ ಗಳಿಂದಲೇ ತಮ್ಮ ಸಿನೆಮಾ ಗೆಲ್ಲಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಹಿಂದೆ ಪ್ರೇಮ್ ಅಡ್ಡಾ ಅಂತಾ ಒಂದು ಪ್ಲಾಪ್ ಸಿನೆಮಾ ಮಾಡಿದ್ದರು. ಅದರಲ್ಲೂ ಸಹ “ಇವಳು ದೇವರು ಕೊಟ್ಟ ವರದಾನ, ಮೈಯೇ ಒಂದು ಮೈದಾನ, ಆಡ್ಕಳ್ಳಿ ಆಡ್ಕಳ್ಳಿ ಅಂತಾಳೆ” ಎನ್ನುವ ಲಿರಿಕ್ಸ್ ಬರೆದು ಯುವಕರನ್ನು ಪ್ರಚೋದಿಸುವ ಕೆಲಸ ಮಾಡಿದ್ದರು. ಸಿನೆಮಾ ಏನೋ ಅಡ್ಡಡ್ಡಾ ಮಲಗಿ ಸೋತು ಅಡ್ಡಾ ಸೇರಿತು, ಆದರೆ ಆ ಅನಪೇಕ್ಷಿತ  ಹಾಡು ಪಡ್ಡೆ ಹುಡುಗರ ಬಾಯಲ್ಲಿ ಇಂದಿಗೂ ಹರಿದಾಡುತ್ತಿದೆ.

ಈಗ ದ್ರುವ ಸರ್ಜಾ ಅವರನ್ನು ನಾಯಕನನ್ನಾಗಿಸಿ ‘ಕೆಡಿ: ದಿ ಡೆವಿಲ್’ ಎನ್ನುವ ಪ್ಯಾನ್ ಇಂಡಿಯಾ ಸಿನೆಮಾವನ್ನು ನಿರ್ದೇಶಿಸಿದ ಪ್ರೇಮ್ ನೋರಾ ಫತೇಹಿ ಎನ್ನುವ ಐಟಂ ಸಾಂಗ್ ನರ್ತಕಿ ಕಮ್ ನಟಿಯನ್ನು ಕರೆಸಿ ಅರೆಬೆತ್ತಲೆ ಕುಣಿಸಿದ್ದಾರೆ. ಅದಕ್ಕೆ ಪೂರಕವಾಗಿ ‘ಸರಸೆ ಸರಸೇ ಸೆರಗ ಸರ್ಸೆ’ ಎನ್ನುವ ಸುರತದ ಐಟಂ ಹಾಡಿಗೆ ಲಿರಿಕ್ಸ್ ಬರೆದು ಶಬ್ದಗಳಲ್ಲಿ ರತಿಕ್ರೀಡೆಯನ್ನು ವೈಭವೀಕರಿಸಿದ್ದಾರೆ.

ರಸಿಕತೆ ಹಾಗೂ ಅಶ್ಲೀಲತೆ ನಡುವೆ ಅಂತರವಿದೆ. ಹಂಸಲೇಖ, ಯೋಗರಾಜ್ ಭಟ್ ರವರು ಬರೆದ ಕೆಲವಾರು ಡಬಲ್ ಮೀನಿಂಗ್ ಮಾದರಿ ಹಾಡುಗಳಲ್ಲಿ ರಸಿಕತೆ ಎದ್ದು ಕಾಣುತ್ತಿತ್ತೇ ಹೊರತು ಲೈಂಗಿಕತೆಯಲ್ಲ. ಹಂಸಲೇಖರವರ “ನಿಂಬೆಹಣ್ಣಿನಂತ ಹುಡುಗಿ, ಈ ಬಾಲು ಹೊಸ ಬಾಲು” ಎನ್ನುವಂತಹ ಮುಜುಗರದ ಹಾಡುಗಳೂ ಒಂದಿಷ್ಟು ತುಂಟತನದ ಜೊತೆಗೆ ಸಹನೀಯವಾಗಿದ್ದವು. “ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ” ಎಂದು ಯೋಗರಾಜ ಭಟ್ ರವರು ಬರೆದ ಹಾಡಲ್ಲಿ ಶೃಂಗಾರವಿತ್ತೆ ಹೊರತು ಅಶ್ಲೀಲತೆ ಇರಲಿಲ್ಲ.  ‘ಚೋಲಿಕೆ ಪಿಚೆ ಕ್ಯಾ ಹೈ’ ಎನ್ನುವಂತಹ ಹಿಂದಿ ಹಾಡಿನ ಸಾಲು ಸಭ್ಯತೆಯ ಮೇರೆ ಮೀರಿದಂತೆ ಅನ್ನಿಸಿದರೂ ‘ಚೋಲಿಕೆ ಪೀಚೆ ದಿಲ್ ಹೈ’ ಎನ್ನುತ್ತಾ ಬ್ಯಾಲೆನ್ಸ್ ಮಾಡಿತ್ತು. ಆದರೆ ಈ ಸೆರಗು ಸರ್ಸೆ ಎನ್ನುವ ಹಾಡು ಅತ್ಯಂತ ಕೀಳು ಮಟ್ಟದ್ದಾಗಿದ್ದು ಕೇಳಲು ಅಸಹ್ಯಕರವಾಗಿದೆ. 

ಹೀಗಾಗಿ ಈ ಕೀಳು ಅಭಿರುಚಿಯ ಹಾಡಿನ ಕುರಿತು ಈಗ ವಿವಾದ ಭುಗಿಲೆದ್ದಿದೆ. ಪ್ರಜ್ಞಾವಂತ ಮಹಿಳಾ ಸಂಘಟನೆಗಳು ಸಿಡಿದೆದ್ದು ಸೆನ್ಸಾರ್ ಮಂಡಲಿಗೆ, ನಿರ್ಮಾಪಕರ ಸಂಘಕ್ಕೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಈ ಹಾಡನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಚಲನಚಿತ್ರಗಳಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸುವ ಅಶ್ಲೀಲ ಸಾಹಿತ್ಯವನ್ನು ನಿರ್ಬಂಧಿಸಬೇಕು” ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಯವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಹೆಚ್ಚಾಗುತ್ತಿದ್ದಂತೆಯೇ NHRC ನೋಟೀಸ್ ನೀಡಿದೆ, CBFC ದೂರು ದಾಖಲಿಸಿದ ನಂತರ ಹಿಂದಿ ಭಾಷೆಯಲ್ಲಿನ ಈ ಸರಸೆ ಹಾಡನ್ನು ಯುಟ್ಯೂಬ್ ನಿಂದ ತೆಗೆದು ಹಾಕಲಾಗಿದೆ. ತೆಲುಗು ತಮಿಳು ಮಲಯಾಳಂ ಭಾಷೆಗಳಿಂದಲೂ ಈ ಹಾಡನ್ನು ನಿಷೇಧಿಸುವ ಸಾಧ್ಯತೆಗಳಿವೆ. ಸೆನ್ಸಾರ್ ಮಂಡಳಿಯವರೂ ಎಚ್ಚೆತ್ತು ಕನ್ನಡ ಸೇರಿದಂತೆ ಇತರ ಭಾಷೆಯ ಕೆಡಿ ಸಿನೆಮಾದಲ್ಲಿ ಅಳವಡಿಸಲಾದ ಈ ಅನುಚಿತ ಹಾಡಿಗೆ ಕತ್ತರಿ ಪ್ರಯೋಗ ಮಾಡಲೇಬೇಕಿದೆ.

ಇದೇ ನಿರ್ದೇಶಕ ಪ್ರೇಮ್ ಗೆ ಬೇಕಾಗಿದೆ. ಕೇವಲ ಕಾಂಟ್ರವರ್ಸಿಗಳಿಂದಲೇ ಸಾಕಷ್ಟು ಪ್ರಚಾರ ಪಡೆದು ತನ್ನ ಸಿನೆಮಾವನ್ನು ಗೆಲ್ಲಿಸುವ ನಕಾರಾತ್ಮಕ ತಂತ್ರಗಾರಿಕೆಯಲ್ಲಿ ಪಳಗಿದ ಪ್ರೇಮ್ ಈ ಹಿಂದೆ ಕೂಡಾ ರಾಮ ಕೃಷ್ಣ ದೇವರುಗಳನ್ನು ಲೇವಡಿ ಮಾಡುವ ಹಾಡನ್ನು ಬಳಸಿ, ತಾವೇ ವಿವಾದ ಸೃಷ್ಟಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಈಗ ಅಶ್ಲೀಲ ಸಾಹಿತ್ಯವನ್ನು ಕೆಡಿ ಸಿನೆಮಾದಲ್ಲಿ ಅಳವಡಿಸಿ, ಇನ್ನೂ ಸಿನೆಮಾ ಬಿಡುಗಡೆಯಾಗುವ ಮುನ್ನವೇ ವಿವಾದವನ್ನು ಸೃಷ್ಟಿಸಿ ಪಬ್ಲಿಸಿಟಿಗೆ ಕೋಟಿ ರೂಪಾಯಿ ಖರ್ಚು ಮಾಡಿದರೂ ಸಿಗದ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಅಗ್ಗದ ಅಭಿರುಚಿಯ ಹಾಡು ಸಿನೆಮಾದಲ್ಲಿ ಇರಲಿ ಬಿಡಲಿ, ಈ ಸಿನೆಮಾದ ಕುರಿತು ಒಂದು ರೀತಿಯ ಕುತೂಹಲವನ್ನು ಸೃಷ್ಟಿಸಿದ್ದಾರೆ. ಇದಕ್ಕೆ ನೆಗೆಟಿವ್ ಪಬ್ಲಿಸಿಟಿ ಎನ್ನುತ್ತಾರೆ. ಇಲ್ಲಸಲ್ಲದ್ದನ್ನು ಸಿನೆಮಾ ರಿಲೀಸ್‌ ಗೂ ಮುನ್ನ ಹುಟ್ಟಿಸಿ ವ್ಯಾಪಕ ಪ್ರಚಾರ ಪಡೆಯುವ ತಂತ್ರಗಾರಿಕೆ ಇದಾಗಿದೆ.

ಸಿನೆಮಾ ಗೆಲ್ಲುತ್ತೋ ಸೋಲುತ್ತೋ ಗೊತ್ತಿಲ್ಲ. ಆದರೆ ಇಂತಹ ಅಶ್ಲೀಲ ಹಾಡುಗಳು ಜನಮಾನಸದಲ್ಲಿ ಬೇರು ಬಿಡುತ್ತವೆ. ಮಹಿಳೆಯರನ್ನು ಕಾಮುಕ ದೃಷ್ಟಿಯಿಂದ ನೋಡಲು ಪ್ರಚೋದಿಸುತ್ತವೆ. ಪಡ್ಡೆ ಹುಡುಗರನ್ನು ಅಡ್ಡದಾರಿ ಹಿಡಿಯುವಂತೆ ಪ್ರೇರೇಪಿಸುತ್ತವೆ. ಈಗಾಗಲೇ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಮೇಲೆ  ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರಗಳು ವರದಿಯಾಗುತ್ತಲೇ ಇವೆ. ಇಂತಹ ಆಘಾತಕಾರಿ ಕಾಲಘಟ್ಟದಲ್ಲಿ ಲೈಂಗಿಕತೆಗೆ ಪ್ರೇರೇಪಿಸುವಂತಹ ಹಾಡು ಸಂಗೀತ ಹಾಗೂ ದೃಶ್ಯ ಸೃಷ್ಟಿಗಳು ಯುವಕರನ್ನು ಹಾದಿ ತಪ್ಪುವಂತೆ ಮಾಡಿ, ಹೆಣ್ಣನ್ನು ಭೋಗದ ವಸ್ತು ಎಂಬಂತೆ ಪರಿಗಣಿಸಲು ಒತ್ತಾಯಿಸುತ್ತವೆ. ಹೀನ ಅಭಿರುಚಿಯ ಅಶ್ಲೀಲ ಕಂಟೆಂಟ್ ಇರುವ ಸಿನೆಮಾ ಹಾಡುಗಳು ಮಹಿಳೆಯರ ಗೌರವಕ್ಕೂ ಧಕ್ಕೆ ತರುತ್ತವೆ.

ಸಿನೆಮಾ ಎನ್ನುವುದು ಹೆಚ್ಚು ಜನರನ್ನು ತಲುಪುವ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಅದರಲ್ಲೂ ಸಿನೆಮಾಗಳಲ್ಲಿ ಬಳಕೆಯಾಗುವ ಹಾಡುಗಳು ಬಹುಕಾಲ ಜನರ ನೆನಪಲ್ಲಿ ಉಳಿಯುತ್ತವೆ. ಉತ್ತಮ ಅಭಿರುಚಿಯ ಹಾಡುಗಳು ಮನಸ್ಸಿಗೆ ಮುದಕೊಟ್ಟರೆ, ಕೆಟ್ಟ ಅಭಿರುಚಿಯ ಹಾಡುಗಳು ಮದವೇರಿಸುತ್ತವೆ.

ಹೀಗಾಗಿ ಸಭ್ಯತೆಯ ಎಲ್ಲೆಯನ್ನು ಮೀರುವ ಹಾಡು ಹಾಗೂ ದೃಶ್ಯಗಳನ್ನು ನಿಯಂತ್ರಿಸಲೆಂದೇ ಸೆನ್ಸಾರ್ ಬೋರ್ಡ್ ಎಂಬ ಕೇಂದ್ರ ಸರಕಾರಿ ಕೃಪಾ ಪೋಷಿತ ಮಂಡಳಿಯೊಂದಿದೆ. ಅದರ ಮೇಲೆಯೂ ಕೂಡಾ ಲಂಚ ಭ್ರಷ್ಟಾಚಾರಗಳ ಆರೋಪಗಳಿವೆ. ಸೆನ್ಸಾರ್ ಮಂಡಳಿಯವರಿಗೆ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಕನಿಷ್ಟ ಕಾಳಜಿ ಇದ್ದಿದ್ದೇ ಆದರೆ, ಮಹಿಳೆಯರ ಘನತೆಯ ಬಗ್ಗೆ ಸ್ವಲ್ಪವಾದರೂ ಕಳಕಳಿ ಇದ್ದಿದ್ದೇ ಆದರೆ ಮೊದಲು ಈ ಕೀಳು ದರ್ಜೆಯ ‘ಸೆರಗು ಸರ್ಸೆ’ ಹಾಡನ್ನು ಸಿನೆಮಾದಿಂದ ಅಷ್ಟೇ ಯಾಕೆ ಸಾಮಾಜಿಕ ಜಾಲತಾಣದಿಂದಲೇ ತೆಗೆದು ಹಾಕಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದೇ ಹೋದರೆ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಇಂತಹ ಅಶ್ಲೀಲ ಸಾಹಿತ್ಯ ಬರೆದು ಮಹಿಳೆಯರ ಗೌರವಕ್ಕೆ ಅಪಚಾರ ಮಾಡಿದ ಪ್ರೇಮ್ ನಿರ್ದೇಶನದ ಸಿನೆಮಾವನ್ನು ನೋಡದೇ ಜನರು ಬಹಿಷ್ಕರಿಸಬೇಕಿದೆ. ಹೀಗೆ ಮಾಡಿದಾಗ ಮಾತ್ರ ಇಂತಹ ನೀಚ ಪ್ರಯತ್ನಗಳು ನಿಯಂತ್ರಣಕ್ಕೆ ಬರುತ್ತವೆ, ಇಲ್ಲದೇ ಹೋದರೆ ಬೀದಿ ಬೀದಿಗಳಲ್ಲಿ, ಆರ್ಕೆಸ್ಟ್ರಾಗಳಲ್ಲಿ, ಗಾನ ಗೋಷ್ಟಿಗಳಲ್ಲಿ ಅಷ್ಟೇ ಯಾಕೆ ನಾಟಕಗಳಲ್ಲೂ ಇಂತಹ ದರಿದ್ರ ಹಾಡುಗಳು ಪ್ರತಿಧ್ವನಿಸುತ್ತವೆ‌. ಈಗಾಗಲೇ ಜಾನಪದ ಹಾಡಿನ ಹೆಸರಿನಲ್ಲಿ ದ್ವಂದ್ವಾರ್ಥದ ಅಶ್ಲೀಲ ಹಾಡುಗಳು ಜನಪ್ರಿಯತೆ ಗಳಿಸಿವೆ. ಮಹಿಳೆಯೆಂದರೆ ತಾಯಿ ತಂಗಿ ಮಗಳು ಹೆಂಡತಿ ಎನ್ನುವ ಭಾವನೆ ಹೋಗಿ, ಹೆಣ್ಣು ಎಂದರೆ ದೇಹ, ಭೋಗ ಎನ್ನುವ ವಿಕೃತ ಮನೋಭಾವ ಸಮಾಜದಲ್ಲಿ ಬೇರು ಬಿಟ್ಟರೆ ಅದು ಅತ್ಯಂತ ಅಪಾಯಕಾರಿಯಾಗುತ್ತದೆ.

ಈಗಾಗಲೇ ಈ ಲಿರಿಕಲ್ ಸಾಂಗ್ ನ್ನು ಯೂಟ್ಯೂಬ್‌ನಲ್ಲಿ ಕರ್ನಾಟಕದ 50 ಲಕ್ಷ ಜನ ನೋಡಿದ್ದಾರೆ.‌ ಈಗ ಈ ಸೆಕ್ಸ್ ಸಾಂಗ್ ಟ್ರೆಂಡ್ ಆಗುತ್ತಿದ್ದು ಕೆಲವರು ಈ ಹಾಡಿಗೆ ರೀಲ್ಸ್ ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಯಾವುದನ್ನು ಕೀಳು ಮಟ್ಟದ ಹಾಡು ಎನ್ನಲಾಗುತ್ತದೆಯೋ ಅದು ಹೆಚ್ಚು ಜನಪ್ರಿಯವಾಗುತ್ತಿರುವುದು ಸಾಮಾಜಿಕ ದುರಂತ. ವಿಕೃತ ಅಭಿರುಚಿಯುಳ್ಳ ಜನರ ದೌರ್ಬಲ್ಯಗಳನ್ನೇ ಬಳಸಿಕೊಂಡು ಸಿನೆಮಾ ಮೂಲಕ ಹಣ ಮಾಡುವ ಲಾಭಕೋರತನ ಈ ಪ್ರೇಮ್ ನಂತಹ ಚೀಪ್ ಗಿಮಿಕ್ ವ್ಯಕ್ತಿಗಳದ್ದಾಗಿದೆ. ಸಾಮಾಜಿಕ ಸ್ವಾಸ್ಥ್ಯಕ್ಕಿಂತ ವ್ಯಕ್ತಿಗತ ಸ್ವಾರ್ಥ ಹಾಗೂ ಅಗ್ಗದ ಜನಪ್ರಿಯತೆ ಪ್ರೇಮ್ ನಂತವರ ಉದ್ದೇಶವಾಗಿದೆ.

ಆದ್ದರಿಂದ ಸೆನ್ಸಾರ್ ಬೋರ್ಡ್ ಇಂತಹ ಅಗ್ಗದ ಅಶ್ಲೀಲ ಹಾಡುಗಳ ಪ್ರಚಾರ ಹಾಗೂ ಪ್ರಸಾರಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. ಸಿನೆಮಾ ಎನ್ನುವುದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಮಾಧ್ಯಮವಾಗಬೇಕೆನ್ನುವುದನ್ನು ಚಲನಚಿತ್ರ ನಿರ್ಮಿಸುವವರು ಮರೆಯಬಾರದು.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- http://‘ಸರಸೆ ಸರಸೆʼ ಹಾಡಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ https://kannadaplanet.com/the-central-government-has-banned-the-song/

More articles

Latest article

Most read