Thursday, September 19, 2024

ಸರೋಜಿನಿ ಮಹಿಷಿ ವರದಿ ಜಾರಿಗೆ ಸರ್ಕಾರಕ್ಕೆ ಒಂದು ತಿಂಗಳ ಗಡುವು; ಇಲ್ಲದಿದ್ದರೆ ಉಗ್ರ ಹೋರಾಟ: ಕರ್ನಾಟಕ ರಕ್ಷಣಾ ವೇದಿಕೆ

Most read

ರಾಜ್ಯದಲ್ಲಿ ಕರ್ನಾಟದಲ್ಲಿ ಕನ್ನಡಿಗರಿಗೇ ಉದ್ಯೋಗ ಎಂಬ ಚಳುವಳಿ ಮೂಲಕ ಕನ್ನಡಿಗರಿಗೆ ಮೀಸಲಾತಿಗೆ ಸಂಬಂಧಿಸಿದ ಡಾ. ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಒಂದು ತಿಂಗಳಲ್ಲಿ ಜಾರಿಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗಿದೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ)ಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚಳುವಳಿಗೆ ಆರಂಭವಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಚಳವಳಿಯಲ್ಲಿ ಮಾತನಾಡಿದ ಕರವೇ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು, ರಾಜ್ಯದಲ್ಲಿ ಡಾ. ಸರೋಜಿನಿ ಮಹಿಷಿ ವರದಿಯನ್ನು ಮುಂದಿನ 1 ತಿಂಗಳ ಒಳಗಾಗಿ ಜಾರಿಗೆ ತರಬೇಕು. ಒಂದೊಮ್ಮೆ ಗಡುವಿನೊಳಗೆ ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದರೆ ಉಗ್ರ ಹೋರಾಟದ ಮಾಡಲಾಗುವುದು. ಇದು ನಾರಾಯಣಗೌಡರ ಬೇಡಿಕೆ ಅಲ್ಲ ಸಮಸ್ತ ಕನ್ನಡಿಗರ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕರವೇ ನಿಯೋಗದಿಂದ ಮನವಿ ಸಲ್ಲಿಸಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.

ಚಳಚಳಿಯಲ್ಲಿ ಪಾಲ್ಗೊಂಡು ನಟಿ ಪೂಜಾ ಗಾಂಧಿ ಮಾತನಾಡಿ, ರಾಜ್ಯದಲ್ಲಿ ಕನ್ನಡಿಗರಿಗೆ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ಸಿಗಬೇಕೆಂದರೆ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಅದಷ್ಟು ಬೇಗ ಅನುಷ್ಠಾನ ಮಾಡಬೇಕು. ಮೀಸಲಾತಿ ಕಾಯ್ದೆಯಾದರೆ ನಿಜಕ್ಕೂ ಕನ್ನಡಿಗರಿಗೆ ಒಳ್ಳೆಯದು ಆಗಲಿದೆ ಎಂದು

More articles

Latest article