ಸುದ್ದಿಗೋಷ್ಠಿ ಮಾಡದೇ ದೇಶ ನಡೆಸಿದ ಪ್ರಧಾನಿ ಮೋದಿಯವರ ಸುಳ್ಳಾಟವನ್ನು ಬಯಲಿಗೆಳೆಯಲು ರಾಹುಲ್‌ಗೆ ಇದು ಒಳ್ಳೆ ಅವಕಾಶ:  ಸಂತೋಷ್‌ ಲಾಡ್‌

 ಪ್ರಧಾನಿ ಮೋದಿಯವರು ಹದಿನೈದು ವರ್ಷದಿಂದ ಒಂದು ಸುದ್ದಿಗೋಷ್ಠಿ ನಡೆಸದೇ ಸುಳ್ಳಾಟ ಆಡುತ್ತಿದ್ದಾರೆ ಅವರ ಸುಳ್ಳಾಟವನ್ನು ಬಯಲಿಗೆ ಎಳೆಯಲು ರಾಹುಲ್ ಗಾಂಧಿ ಅವರಿಗೆ ಇದೀಗ ಒಳ್ಳೆಯ ಅವಕಾಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಲೋಕಸಭೆ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ ವಿಚಾರದ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟಕ್ಕೆ ಒಮ್ಮತದಿಂದ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದು ಖುಷಿ ಇದೆ. ಅವರಿಗೆ ಧನ್ಯವಾದ ಹೇಳುವೆ. ಪ್ರಧಾನಿ ಮೋದಿಯವರು ಹದಿನೈದು ವರ್ಷದಿಂದ ಒಂದು ಸುದ್ದಿಗೋಷ್ಠಿ ನಡೆಸದೇ ಸುಳ್ಳಾಟ ಆಡುತ್ತಾ ದೇಶ ನಡೆಸುತ್ತಿದ್ದಾರೆ. ಇಂತವರನ್ನು ವಿರೋಧಿಸಲು ರಾಹುಲ್‌ ಗಾಂಧಿ ಅವರಿಗೆ ಸಾಮರ್ತ್ಯವಿದೆ ಎಂದು ಹೇಳಿದ್ದಾರೆ.

ವಯನಾಡ್‌ನಲ್ಲಿ ಪ್ರಿಯಂಕಾ ಗಾಂಧಿ ಸ್ಪರ್ಧಿಸಿ, ಗೆಲ್ಲುತ್ತಾರೆ. ಅವರು ಸಂಸತ್‌ಗೆ ಬಂದರೆ ನಮಗೆ ಮತ್ತಷ್ಟು ಶಕ್ತಿ ಬರುತ್ತದೆ. ಡಿಕೆಶಿ ಸಿಎಂ ಆಗಲಿ ಎಂದು ಚನ್ನಗಿರಿ ಶಾಸಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. 

More articles

Latest article

Most read