ಸಂವಿಧಾನ ವೆಬ್‌ ಸೀರೀಸ್‌ ಖ್ಯಾತಿಯ ನಿರ್ದೇಶಕ ಶ್ಯಾಮ್‌ ಬೆನಗಲ್‌ ನಿಧನ

Most read

ಸಂವಿಧಾನ ವೆಬ್‌ ಸೀರೀಸ್‌ ಖ್ಯಾತಿಯ ನಿರ್ದೇಶಕ ಹಾಗೂ ಬರಹಗಾರ ಶ್ಯಾಮ್ ಬೆನಗಲ್ ಅವರು ತಮ್ಮ 90ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದ ಇಂದು(ಡಿಸೆಂಬರ್‌ 23) ನಿಧನರಾಗಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಮಹತ್ವದ ಸಿನಿಮಾಗಳನ್ನು ನೀಡಿರುವ ಅವರು ಮುಂಬೈ ಸೆಂಟ್ರಲ್ ವೊಕ್ಹಾರ್ಡ್ ಆಸ್ಪತ್ರೆಯಲ್ಲಿ ಸಂಜೆ 6.38 ಕ್ಕೆ ನಿಧನರಾಗಿದ್ದಾರೆ. ಹಲವಾರು ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಾವಿಗೆ ಶರಣಾಗಿದ್ದಾರೆ ಎಂದು ಅವರ ಪುತ್ರಿ ಪಿಯಾ ಬೆನಗಲ್ ಪಿಟಿಐಗೆ ತಿಳಿಸಿದ್ದಾರೆ.

ಕಳೆದ 9 ದಿನಗಳ ಹಿಂದೆಯಷ್ಟೇ (ಡಿಸೆಂಬರ್‌ 14) ತಮ್ಮ 90 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ತಮ್ಮ ವಿಭಿನ್ನವಾದ ಬರವಣಿಗೆ ಮೂಲಕ 1973 ರಲ್ಲಿ “ಅಂಕುರ್” ಚಿತ್ರದೊಂದಿಗೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮೆಚ್ಚುಗೆಯನ್ನು ಪಡೆಯಿತು.

1970-80ರ ದಶಕದಲ್ಲಿ ಅಂಕುರ್‌, ನಿಶಾಂತ್‌ ಮತ್ತು ಮಂಥನ್‌ ಮುಂತಾದ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಹೊಸ ಅಲೆಯ ಸಿನಿಮಾಗಳಿಗೆ ನಾಂದಿ ಹಾಡಿದ್ದರು.

ಡಿಸೆಂಬರ್‌ 14 1934 ರಂದು ಉಡುಪಿ ಸಮೀಪದ ಬೆನಗಲ್‌ನಲ್ಲಿ ಜನಿಸಿದ್ದರು. ಅವರಿಗೆ ಪತ್ನಿ ನೀರಾ ಬೆನಗಲ್‌ ಮತ್ತು ಪುತ್ರಿ ಪಿಯಾ ಬೆನಗಲ್‌ ಇದ್ದಾರೆ.

More articles

Latest article