ಸಕಲೇಶಪುರ | ಆಸ್ಪತ್ರೆಗೇ ನುಗ್ಗಿ ಸರ್ಜಿಕಲ್ ಬ್ಲೇಡ್ ನಿಂದ ಪತ್ನಿ ಕೆನ್ನೆ, ಕೈಗಳನ್ನು‌ ಕೊಯ್ದು ಪತಿ ಪರಾರಿ : ಪೊಲೀಸರು ಹೇಳಿದ್ದೇನು?

ಹಲ್ಲೆಗೊಳಗಾದ ಪತ್ನಿ ಪೊಲೀಸರಿಗೆ ದೂರು ನೀಡುತ್ತಾಳೆ ಎಂದು ಕೋಪಗೊಂಡ ಪತಿ, ಆಕೆ ಚಿಕಿತ್ಸೆ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಸರ್ಜಿಕಲ್ ಬ್ಲೇಡ್ ನಿಂದ ಕೆನ್ನೆ ಹಾಗೂ ಕೈಗಳನ್ನು ಕೊಯ್ದು ಪರಾರಿಯಾದ ಘಟನೆ ಸಕಲೇಶಪುರದಲ್ಲಿ ನಡೆದಿದೆ.

ಪತಿ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಸಕಲೇಶಪುರ ಪಟ್ಟಣದ ಅಗ್ರಹಾರ ಬಡಾವಣೆಯ ಅನುಷಾ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಪತಿ ಶರತ್ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸಕಲೇಶಪುರ ಟೌನ್ ಪೊಲೀಸ್‌ ಅಧಿಕಾರಿ ಜೊತೆ ಕನ್ನಡ ಪ್ಲಾನೆಟ್‌ ಮಾತನಾಡಿದ್ದು, ಕ್ಷುಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದ. ನಂತರ ಅನುಷಾ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಆಸ್ಪತ್ರೆಗೆ ನುಗ್ಗಿದ ಪತಿ ಶರತ್ ತನ್ನ ಪತ್ನಿಯ ಮೇಲೆ ಸರ್ಜಿಕಲ್ ಬ್ಲೇಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಆತನ ವಿರುದ್ಧ ಏಫ್‌ ಐ ಆರ್‌ ಆಗಿದ್ದು, ಆರೋಪಿಯ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಮಧ್ಯಪ್ರವೇಶಿಸಿದ್ದರಿಂದ ಶರತ್ ಅಲ್ಲಿಂದ ಪರಾರಿಯಾದ್ದಾನೆ ಎಂದು ಬಲ್ಲ ಮೂಲಗಳು ತಿಳಿಸಿವೆ.

More articles

Latest article

Most read