ರಾಮನಗರ RTO ಅಧಿಕಾರಿ ಶಿವಕುಮಾರ್ ಅವರು ಇಂದು ಜೂನ್ 28 ನಿವೃತ್ತಿ ದಿನ. ಆದ್ರೆ, ಕೊನೆಯ ದಿನವೇ ಅಧಿಕಾರಿ ಶಿವಕುಮಾರ್ ಅವರು ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಾಮನಗರ RTO ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವ ದೂರುಗಳು ಬಂದಿದ್ದವು. ಅದನ್ನೇ ಬೆನ್ನತ್ತಿದ ಲೋಕಾಯುಕ್ತ ಅಧಿಕಾರಿಗಳು ರಾಮನಗರ RTO ಕಚೇರಿಗೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿದ್ದಾರೆ. ಭ್ರಷ್ಟಾಚಾರ ಎಸಗಿರುವ ಅನೇಕ ದಾಖಲೆಗಳು ಲೋಕಯುಕ್ತ ಅಧಿಕಾರಿಗಳಿಗೆ ಸಿಕ್ಕಿವೆ ಎಂದು ತಿಳಿದುಬಂದಿದೆ.
ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು, ರಾಮನಗರ RTO ಅಧಿಕಾರಿ ಶಿವಕುಮಾರ್, ಎಸ್ಡಿಎ ರಚಿತ್ ರಾಜ್ ಮತ್ತು ಬ್ರೋಕರ್ ಸತೀಶ್ ಅವರನ್ನು ಬಂಧಿಸಿದ್ದಾರೆ.
ಸೀಜ್ ಮಾಡಿರುವ ವಾಹನಗಳ ದಾಖಲೆ ನೀಡಿ ಮಾರಾಟ ಮಾಡುವುದು, ಹಳೇ ಟ್ರ್ಯಾಕ್ಟರ್ಗಳಿಗೆ ಹೊಸ ದಾಖಲೆ ಸೃಷ್ಟಿ ಮಾಡುವುದು. ಒಟ್ಟು 2 ಸಾವಿರ ಟ್ರ್ಯಾಕ್ಟರ್ಗಳಿಗೆ ಹೊಸ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ.