ಗಾಂಧಿ ಕೈಗೆ ಆರೆಸ್ಸೆಸ್ ಕೋಲು; ಅಹಿಂಸೆಗೆ ಒಡ್ಡಿದ ಸವಾಲು

ನಿಜವಾದ ಅಹಿಂಸಾವಾದಿ ಹಿಂದೂ ಆಗಿದ್ದ ಗಾಂಧಿಯವರನ್ನು ಹಿಂಸಾವಾದಿ ಹಿಂದುತ್ವವಾದಿ ಸಿದ್ಧಾಂತ ಭೌತಿಕವಾಗಿ ಕೊಲೆ ಮಾಡಿದೆ. ಆದರೆ ಗಾಂಧಿ ಎನ್ನುವ ಮಾಯಗಾರ ಈ ದೇಶದ ಜನಮನದಲ್ಲಿ ಹಾಸುಹೊಕ್ಕಾಗಿದ್ದಾರೆ. ಈ ದೇಶದ ಸಂವಿಧಾನವನ್ನೇ ಬದಲಾಯಿಸಲು ಬಂದಿದ್ದೇವೆ ಎನ್ನುವ ಬಿಜೆಪಿಗರು ಗಾಂಧಿ ಹೆಸರಿನ ಬೇರುಗಳನ್ನು ಸಡಿಲಗೊಳಿಸುತ್ತಿದ್ದಾರೆ. ಯೋಜನೆಗಳಿಗೆ ಇದ್ದ ಗಾಂಧಿ ಹೆಸರನ್ನು ಬದಲಾಯಿಸುತ್ತಿದ್ದಾರೆ. ಮಹಾತ್ಮನ ಕುರಿತು ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ.. ಚಿವುಟಿದಷ್ಟೂ ಪುಟಿದೇಳುವ ಗಾಂಧಿ ಮಹಾತ್ಮ ಈ ದೇಶದ ಆತ್ಮವೇ ಆಗಿದ್ದಾರೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಈ ಬಿಜೆಪಿ ಸಂಘಿಗಳಿಗೆ ಎಲ್ಲೆಲ್ಲೂ ಹಿಂಸೆಯೇ ಕಾಣುತ್ತದೆ. ಅಹಿಂಸೆಯ ಪ್ರತಿಪಾದಕ ಮಹಾತ್ಮಾ ಗಾಂಧಿಯವರ ಊರುಗೋಲನ್ನು ಆರೆಸ್ಸೆಸ್ ಲಾಠಿ ಮಾಡಿ ಹಲ್ಲೆ ಮಾಡುವಂತಹ ಜಾಹೀರಾತನ್ನು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಿಸುತ್ತಾರೆಂದರೆ ಇವರ ವಿಕೃತ ಮನಸ್ಥಿತಿ ಎಂತಹುದಿರಬಹುದು. ಮನ್ರೆಗಾ ಯೋಜನೆಯ ಹೆಸರಲ್ಲಿರುವ ಗಾಂಧಿಯವರ ಹೆಸರನ್ನು ಅಳಿಸಿ “ಜಿ ರಾಮ್ ಜಿ” ಅಂತಾ ನಾಮಕರಣ ಮಾಡಿದಾಗಲೇ ಈ ಸಂಘಿಗಳ ಶಡ್ಯಂತ್ರ ಗೊತ್ತಾಗಿತ್ತು. ಹೇಗಾದರೂ ಮಾಡಿ ಭಾರತೀಯರ ಮನಸ್ಮೃತಿಯಲ್ಲಿ ಮನೆಮಾಡಿರುವ ಗಾಂಧಿ ಎನ್ನುವ ಪ್ರೇರಕ ಶಕ್ತಿಯ ಪ್ರಭಾವವನ್ನು ಕಡಿಮೆ ಮಾಡುವ ಹುನ್ನಾರ ಈ ಮನುಸ್ಮೃತಿ ಮನಸ್ಸಿನವರದ್ದಾಗಿದೆ.

ಮತದಾರರನ್ನು ಮರಳುಮಾಡಿ ಚುನಾವಣೆಗಳಲ್ಲಿ ಮತಗಳಿಸಲು ಗಾಂಧೀಜಿ ಬಗ್ಗೆ ಹೊಗಳುವ ಮೋದಿ ಆಂಡ್ ಕಂಪನಿಯವರು ಗಾಂಧಿಯವರನ್ನು ತೆಗಳುವ ಟೀಕಿಸುವ ಹಾಗೂ ಅವರನ್ನು ಅಪ್ರಸ್ತುತಗೊಳಿಸುವ ಕುತಂತ್ರವನ್ನು ಮಾಡುತ್ತಲೇ ಬಂದಿದ್ದಾರೆ. ಗಾಂಧಿಯವರ ತತ್ವ ಸಿದ್ಧಾಂತಗಳಾದ ಅಹಿಂಸೆ, ಶಾಂತಿ, ಸಹಬಾಳ್ವೆ ಮತ್ತು ಏಕತೆಗೆ ತದ್ವಿರುದ್ಧವಾದ ಹಿಂಸೆ, ದ್ವೇಷ, ಮತಾಂಧತೆಯನ್ನೇ ತಮ್ಮ ಅಸ್ತಿತ್ವದ ಅಗತ್ಯವನ್ನಾಗಿಸಿಕೊಂಡ ಬಿಜೆಪಿ ಹಾಗೂ ಆರೆಸ್ಸೆಸ್ಸಿನವರಿಗೆ ಗಾಂಧೀಜಿಯವರ ಹೆಸರನ್ನು ಹೇಳುವ ನೈತಿಕತೆಯೇ ಇಲ್ಲ.

 ಗಾಂಧಿಯವರ ಹಿಂದೂ ತತ್ವಕ್ಕೂ ಹಾಗೂ ಸಂಘದ ಹಿಂದುತ್ವವಾದಿ ಧ್ವಂಸ ಸಿದ್ಧಾಂತಕ್ಕೂ ಅಜಗಜಾಂತರ ಅಂತರವಿದೆ. ಗಾಂಧೀಜಿಯವರ ಅಹಿಂಸಾವಾದಿ ‘ಹೇ ರಾಮ’ನಿಗೂ ಬಿಜೆಪಿಯವರ ಹಿಂಸಾವಾದಿ ‘ಜೈ ಶ್ರೀರಾಮ’ನಿಗೂ ವಿಪರೀತ ವ್ಯತ್ಯಾಸವಿದೆ. ಗಾಂಧೀಜಿಯವರ ರಾಮ ಎಲ್ಲರ ಒಳಿತನ್ನು ಬಯಸುವ ಪ್ರಜಾಪಾಲಕ. ಬಿಜೆಪಿಗರ ಶ್ರೀರಾಮ ಹಿಂದುತ್ವವಾದಿ ರಕ್ಷಕ. ಆದರೆ ಗಾಂಧಿಯವರ ರಾಮನೇ ನಮ್ಮ ಜೈ ಶ್ರೀರಾಮ, ಆದ್ದರಿಂದ ಗಾಂಧಿಯವರು ಆರಾಧಿಸುವ ರಾಮನ ಹೆಸರನ್ನು ‘ಜಿ ರಾಮ್ ಜಿ’ ಯೋಜನೆಗೆ ಇಡಲಾಗಿದೆ ಎಂಬುದು ಬಿಜೆಪಿಗರ ವ್ಯರ್ಥ ಸಮರ್ಥನೆಯಾಗಿದೆ. ಗಾಂಧಿಯವರ ಹೆಸರನ್ನು ಮರೆಮಾಚಿ ಜನರ ಮನೆ ಮನಗಳಲ್ಲಿ ಹೇರಾಮ್ ಬದಲು ಜೈ ಶ್ರೀರಾಮನನ್ನು ಪ್ರತಿಷ್ಠಾಪಿಸುವುದು ಬಿಜೆಪಿಗರ ಆಶಯವಾಗಿದೆ. ನೇರವಾಗಿ ಗಾಂಧಿಯವರನ್ನು ವಿರೋಧಿಸಿದರೆ ಜನತೆಯ ಪ್ರತಿಭಟನೆ ಹಾಗೂ ತಿರಸ್ಕಾರವನ್ನು ಎದುರಿಸಬೇಕಾಗುತ್ತದೆ ಎಂಬ ಅರಿವು ಮೋದಿ ಪರಿವಾರಕ್ಕೆ ಇರುವುದರಿಂದಲೇ ಶ್ರೀರಾಮನ ಹೆಸರನ್ನು ಮುಂದಕ್ಕೆ ತಂದು ಗಾಂಧಿಯವರನ್ನು ನೇಪಥ್ಯಕ್ಕೆ ತಳ್ಳುವ ಹುನ್ನಾರವೇ ಮನ್ರೇಗಾ ಯೋಜನೆಯ ಮರುನಾಮಕರಣದ ಹಿಂದಿದೆ.

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕರ್ನಾಟಕದ ಬಿಜೆಪಿಯವರು ಮಹಾತ್ಮನ ಕೈಗೆ ಆರೆಸ್ಸೆಸ್ ಕೋಲನ್ನು ಕೊಟ್ಟು ಗಾಂಧಿಯವರ ಹೆಸರನ್ನು ಬದಲಾಯಿಸಿದ್ದರ ವಿರುದ್ಧ ತೀವ್ರ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಕಾಂಗ್ರೆಸ್ ನಾಯಕರಾದ ಮಾನ್ಯ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಹಲ್ಲೆ ಮಾಡಿಸುವಂತಹ ಜಾಹೀರಾತನ್ನು ವಿನ್ಯಾಸಗೊಳಿಸಿ ಪ್ರಕಟಿಸಿದ್ದಾರೆ. ಈ ಜಾಹೀರಾತನ್ನು ಸ್ವಯಂ ಘೋಷಿತ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿ ಫೆ.6 ರಂದು ಮುಖಪುಟದಲ್ಲಿ ಪ್ರಕಟಿಸಿದೆ. ದಿ ಹಿಂದೂ ಪತ್ರಿಕೆಯೂ ಅದೇ ಕೆಲಸ ಮಾಡಿದೆ. ಸಂಘಿ ಮುಖವಾಣಿಯಾಗಿರುವ ವಿಶ್ವವಾಣಿಯೋ ಇಲ್ಲಾ ಹೊಸದಿಗಂತ  ಪತ್ರಿಕೆಯೋ ಇಂತಹ ಹಿಂಸಾ ಪ್ರಚೋದಕ ಜಾಹಿರಾತನ್ನು ಪ್ರಕಟಿಸಿದ್ದರೆ ಅವರ ದುರುದ್ದೇಶವೇ ಅದೆಂದು ನಿರ್ಲಕ್ಷಿಸಬಹುದಾಗಿತ್ತು. ಆದರೆ ವಿಶ್ವಾಸಾರ್ಹ ಬಿರುದಾಂಕಿತ ಪತ್ರಿಕೆಗಳು ತಮ್ಮ ವಿವೇಚನೆ ಬಳಸಬೇಕಿತ್ತು. ಇಂತಹ ಗಾಂಧಿ ವಿರೋಧಿ ಜಾಹೀರಾತಿಗೆ ಬಿಜೆಪಿಗರು ಕೊಡುವ ಹಣವೇ ಈ ಪತ್ರಿಕೆಗಳಿಗೆ ಮುಖ್ಯವಾದಂತಿದೆ. ಕಾಸಿಗಾಗಿ ಏನು ಬೇಕಾದರೂ ಪ್ರಕಟಿಸುವ ನೈತಿಕ ದಿವಾಳಿಗೆ ಈ ಪತ್ರಿಕೆಗಳೇ ಸಾಕ್ಷಿಯಾಗಿವೆ.

ಕಾಂಗ್ರೆಸ್ ಪಕ್ಷದವರ ಮೇಲೆ ದ್ವೇಷ ಕಾರಲೇಬೇಕೆಂದರೆ, ಅವರು ಕೊಟ್ಟ ಜಾಹೀರಾತಿಗೆ ಪ್ರತಿಯಾಗಿ ಜಾಹೀರಾತು ಕೊಡಲೇಬೇಕೆಂದರೆ ನೇರವಾಗಿ ಅಖಾಡಕ್ಕೆ ಇಳಿದು ಜಾಹೀರಾತು ಸಮರ ಸಾರಲಿ. ಆದರೆ ಬಿಜೆಪಿಗರು ತಮ್ಮ ಸೇಡಿನ ಭಾಗವಾಗಿ ಗಾಂಧಿಯವರ ಕೈಗೆ ಆರೆಸ್ಸೆಸ್ ಲಾಠಿ ಕೊಟ್ಟು ಹಿಂಸೆಗೆ ಪ್ರೇರೇಪಿಸಿದ್ದು ಅಕ್ಷಮ್ಯ ಹಾಗೂ ಗಾಂಧಿ ವಿರೋಧಿ ನಡೆಯಾಗಿದೆ. ಅಥವಾ ಹೇರಾಮ್ ನನ್ನು ಜೈಶ್ರೀರಾಮ್ ಮಾಡಿದಂತೆ ಗಾಂಧಿಯವರನ್ನೂ ಹಿಂಸಾವಾದಿಯನ್ನಾಗಿ ನಿರೂಪಿಸುವುದು ಸಂಘಿಗಳ ತಂತ್ರವೂ ಆಗಿರುವಂತಿದೆ.

“ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು” ಎನ್ನುವ ಶೀರ್ಷಿಕೆ ಈ ಬಿಜೆಪಿ ಪ್ರಾಯೋಜಿತ ಜಾಹೀರಾತಿಗಿದೆ. ಕಾಂಗ್ರೆಸ್ಸಿಗರು ಗಾಂಧಿಯವರ ತತ್ವ ಸಿದ್ಧಾಂತಗಳನ್ನು ಬಿಟ್ಟು ಅವರ ಹೆಸರನ್ನು ಬಳಸಿಕೊಳ್ಳುತ್ತಲೇ ಬಂದಿರುವುದು ಗುಟ್ಟಿನ ಸಂಗತಿ ಏನಲ್ಲ. ಗಾಂಧಿಯವರ ಹೆಸರನ್ನು ಬಂಡವಾಳ ಮಾಡಿಕೊಂಡರೂ ಮಹಾತ್ಮರ ಹೆಸರನ್ನು ಜಾರಿಯಲ್ಲಿರಿಸಿಕೊಂಡೇ ಬಂದಿದ್ದಾರೆ. ಆದರೆ ಈ ಸಂಘಿಗಳು ಗಾಂಧೀಜಿಯವರ ಹೆಸರನ್ನೇ ಅಳಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಗಾಂಧಿಯವರನ್ನು ಪ್ರತಿ ಹಂತದಲ್ಲೂ ವಿರೋಧಿಸುತ್ತಲೇ ಬಂದಿರುವ ಸಂಘಿಗಳು ಗಾಂಧಿಯವರನ್ನು ಕೊಂದ ನಾಥುರಾಮನನ್ನು ಹಾಗೂ ಆತನ ಸನಾತನಿ ಸಂಗಾತಿ ಸಾವರ್ಕರ್ ರವರನ್ನು ವಿಜೃಂಭಿಸುತ್ತಲೇ ಇರುತ್ತಾರೆ.

ಗಾಂಧಿಯವರ ಹತ್ಯೆಗೆ ಇದೇ ಹಿಂದುತ್ವವಾದಿ ಸನಾತನ ಸಿದ್ಧಾಂತವೇ ಕಾರಣವಾಗಿದೆ. ನಿಜವಾದ ಅಹಿಂಸಾವಾದಿ ಹಿಂದೂ ಆಗಿದ್ದ ಗಾಂಧಿಯವರನ್ನು ಹಿಂಸಾವಾದಿ ಹಿಂದುತ್ವವಾದಿ ಸಿದ್ಧಾಂತ ಭೌತಿಕವಾಗಿ ಕೊಲೆ ಮಾಡಿದೆ. ಆದರೆ ಗಾಂಧಿ ಎನ್ನುವ ಮಾಯಗಾರ ಈ ದೇಶದ ಜನಮನದಲ್ಲಿ ಹಾಸುಹೊಕ್ಕಾಗಿದ್ದಾರೆ. ಈ ದೇಶದ ಸಂವಿಧಾನವನ್ನೇ ಬದಲಾಯಿಸಲು ಬಂದಿದ್ದೇವೆ ಎನ್ನುವ ಬಿಜೆಪಿಗರು ಗಾಂಧಿ ಹೆಸರಿನ ಬೇರುಗಳನ್ನು ಸಡಿಲಗೊಳಿಸುತ್ತಿದ್ದಾರೆ. ಯೋಜನೆಗಳಿಗೆ ಇದ್ದ ಗಾಂಧಿ ಹೆಸರನ್ನು ಬದಲಾಯಿಸುತ್ತಿದ್ದಾರೆ. ಮಹಾತ್ಮನ ಕುರಿತು ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ.. ಚಿವುಟಿದಷ್ಟೂ ಪುಟಿದೇಳುವ ಗಾಂಧಿ ಮಹಾತ್ಮ ಈ ದೇಶದ ಆತ್ಮವೇ ಆಗಿದ್ದಾರೆ. ಯಾರೆಷ್ಟೇ ತಂತ್ರ ಕುತಂತ್ರ ಮಾಡಿದರೂ ಭಾರತೀಯರಿಂದ ಗಾಂಧಿ ಸ್ಮರಣೆಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಈ ಸಂಘಿಗಳು ತಮ್ಮ ವ್ಯರ್ಥ ಪ್ರಯತ್ನವನ್ನು ಬಿಡುವುದಿಲ್ಲ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read