ರಾಕ್ ಲೈನ್ ವೆಂಕಟೇಶ್‌ರಿಂದ 11 ಕೋಟಿ ತೆರಿಗೆ ಬಾಕಿ : ರಾಕ್ ಲೈನ್ ಮಾಲ್‌, ಥೀಯೇಟರ್‌ಗೆ ಬೀಗ

Most read

ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ಮಾಲೀಕತ್ವದ ರಾಕ್ ಲೈನ್ ಮಾಲ್ ಮತ್ತು ಮೋಹನ್‌ ಥೀಯೇಟರ್‌ ಗೆ ಬೀಗ ಜಡಿದಿದ್ದಾರೆ.

ಆಸ್ತಿ ತೆರಿಗೆ ಪಾವತಿಸುವಂತೆ ಹಲವಾರು ಭಾರಿ ಬಿಬಿಎಂಪಿ ಅಧಿಕಾರಿಗಳು ನೋಟೀಸ್ ‌ಕೊಟ್ಟಿದ್ದರು, ಆದರೆ ಇದ್ಯಾವುದಕ್ಕೂ ಉತ್ತರಿಸದ ರಾಕ್‌ಲೈನ್ ಹಲವು ವರ್ಷದಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಹಾಗೂ ಮಾರ್ಷಲ್ ಗಳ ಸಮ್ಮುಖದಲ್ಲಿ, ದಾಸರಹಳ್ಳಿ ವಲಯ ಬಿಬಿಎಂಪಿ ಅಧಿಕಾರಿಗಳು ಜಾಲಹಳ್ಳಿ ಕ್ರಾಸ್ ಬಳಿ ಇರುವ ರಾಕ್ ಲೈನ್ ಮಾಲ್ ಮತ್ತು ಮೋಹನ್‌ ಥೀಯೇಟರ್‌ ಗೆ ಬೀಗ ಜಡಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಾಸರಹಳ್ಳಿ ಜಂಟಿ ಆಯುಕ್ತ ಬಾಲಶೇಖರ್, 11. 50 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. 11 ವರ್ಷದಿಂದ ತೆರಿಗೆ ಕಟ್ಟಿಲ್ಲ. ಒಂದು ಬಾರಿ 1 ಕೋಟಿ 10 ಲಕ್ಷ ಕಟ್ಟಿದ್ದಾರೆ. 26 ಲಕ್ಷ ಚೆಕ್ ಕೊಟ್ಟಿದ್ದಾರೆ. ಈಗ ನೋಟಿಸ್ ಕೊಟ್ಟಿದ್ದೇವೆ ಅವರು ಕಟ್ಟಿಲ್ಲ. ಇವತ್ತು ಮಾಲ್ ಸೀಲ್ ಮಾಡಿದ್ದೇವೆ ಎಂದಿದ್ದಾರೆ.

More articles

Latest article