ಮನೆಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೊಳಗಾಗಿರುವ ಮಾಜಿ ಸಚಿವ ಎಚ್ ಡಿ ರೇವಣ್ಣ ಜಾಮೀನು ಅರ್ಜಿ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದೆ. ನಿರ್ಧಾರವಾಗಲಿದೆ. ನಿನ್ನೆ ಅವರಿಗೆ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಅಲ್ಲದೆ 5 ಲಕ್ಷ ರೂಪಾಯಿ ಬಾಂಡ್ ನೀಡಲು ಮಾಜಿ ಸಚಿವರಿಗೆ ಸೂಚನೆ ನೀಡಿತ್ತು. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಕೋರ್ಟ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡು ತೀರ್ಪನ್ನು ಕಾಯ್ದಿರಿಸಿದೆ.
42ನೇ ACMM ನ್ಯಾಯಾಲಯದಲ್ಲಿ ಅರ್ಜಿ ವಿಚಾರ ನಡೆದಿದ್ದು, ಹೆಚ್.ಡಿ.ರೇವಣ್ಣಪರ ವಕೀಲ ಸಿ.ವಿ. ನಾಗೇಶ್ ಹಾಜರು. ಎಸ್ ಐಟಿ ಪರ ವಕೀಲೆ ಜಾಯ್ನಾ ಕೊಠಾರಿ ವಾದ ಮಂಡಿಸಿದ್ದಾರೆ.
ಎಫ್ ಐ ಆರ್ ನಲ್ಲಿರುವ ದೂರು ಓದಿದ ಎಸ್ ಪಿಪಿ, ಸಂತ್ರಸ್ತೆ ಹೇಳಿಕೆ ಬಳಿಕ ಕೇಸ್ ದಾಖಲಿಸಲಾಗಿದೆ. ತನಿಖಾಧಿಕಾರಿಯ ಮನವಿ ನಂತರ ಸೆ. 376 ಸೇರಿಸಲಾಗಿದೆ. ಮೊದಲಿಗೆ ಈ ಕೇಸ್ ನಲ್ಲಿ ಸೆ. 354 A, D ಮಾತ್ರವಿತ್ತು. ಸಂತ್ರಸ್ತೆ ಈ ಹಿಂದೆ ನೀಡಿದ್ದ ಹೇಳಿಕೆ ನಂತರ ಸೆ. 376 ಸೇರ್ಪಡೆಯಾಗಿದೆ, ಬಳಿಕ ಜಾಮೀನು ನೀಡಲು ಬರಲ್ಲ. ಇದು ಜಾಮೀನಿಗೆ ಅವಕಾಶವಿಲ್ಲದ ಪ್ರಕರಣ. ಜಾಮೀನಿಗೆ ಸೆಷನ್ಸ್ ಕೋರ್ಟ್ ಮೊರೆ ಹೋಗಬೇಕು ಎಂದು ಕೋರ್ಟ್ ನಲ್ಲಿ ಎಸ್ ಐಟಿ ಪರ ವಕೀಲರ ವಾದ ಮಾಡಿದ್ದಾರೆ.
ರೇವಣ್ಣ ರಾಜಕಾರಣಿಯಾಗಿ ಸಚಿವರಾಗಿ, ಶಾಸಕರಾಗಿದ್ದಾರೆ. ಪ್ರಭಾವ, ದಾದಾಗಿರಿ, ತೋಳ್ಬಲ, ಹಣಬಲ ಹೊಂದಿದ್ದಾರೆ. ಮಗ ದೇಶ ಬಿಟ್ಟು ಓಡಿಹೋಗಿದ್ದು, ರಕ್ಷಣೆಗೆ ಅಪ್ಪ ಯತ್ನ. ಮಧ್ಯಂತರ ಜಾಮೀನು ಕೊಡಬಾರದಿತ್ತು ಎಂದು ಎಸ್ ಐಟಿ ಪರ ವಕೀಲರ ವಾದ ಮಾಡಿದ್ದಾರೆ.
ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಪ್ರತಿವಾದ ಮಂಡಿಸಿ, ಇದಕ್ಕೆ ರೇವಣ್ಣ ವಿರುದ್ಧ 354 A, 354 D, 506, 509 ಆರೋಪ ಮಾತ್ರವಿದೆ. ಇವೆಲ್ಲವೂ ಜಾಮೀನು ನೀಡಬೇಕಾದ ಅಪರಾಧಗಳು. ಇದರಲ್ಲಿ ಮಾತ್ರ ಸೆ. 436 ಅಡಿ ನಾನು ಜಾಮೀನು ಕೇಳಿದ್ದೇನೆ. ಈ ಕೇಸಿನಲ್ಲಿ ರೇವಣ್ಣ ಕೋರ್ಟ್ ಗೆ ಸರೆಂಡರ್ ಆಗಿದ್ದಾರೆ. ಈ ಪ್ರಕರಣ ನಡೆದು 5 ವರ್ಷಗಳೇ ಕಳೆದಿವೆ. ಅಪರಾಧ 2 ದಿನ, 2 ತಿಂಗಳ ಮುಂಚೆ ಆಗಿದ್ದಲ್ಲ ಎಂದು ವಾದಿಸಿದ್ದಾರೆ.
ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟಿದ್ರೆ ಅತ್ಯಾಚಾರನಾ…? ಸೀರೆಯ ಪಿನ್ ಕೀಳುತ್ತಿದ್ದರು… ಇದು ಅತ್ಯಾಚಾರನಾ…? ಮೈ ಮುಟ್ಟಿ ಎಳೆದ್ರು…. ಇದು ಅತ್ಯಾಚಾರನಾ…? ಸಂತ್ರಸ್ತೆ ಕೊಟ್ಟ ಹೇಳಿಕೆ ಸರಿನಾ. ಕೃತ್ಯ ನಡೆದ ದಿನ ದೂರು ದಾಖಲಿಸಿಲ್ಲ. ಏಪ್ರಿಲ್ 28ರಂದು ದೂರಿನ ಮೇರೆಗೆ FIR ಮಾಡಲಾಗಿದೆ. ಐದು ವರ್ಷಗಳ ಹಿಂದಿನ ಆರೋಪಕ್ಕೆ ದೂರು ದಾಖಲು. ಸಂತ್ರಸ್ತೆ ತಡವಾಗಿ ದೂರು ದಾಖಲಿಸಿದ್ದಾರೆ. ಹೊಳೆನರಸೀಪುರ ಪಿಎಸ್ಐ ಬೆಂಗಳೂರಲ್ಲಿ ದೂರು ಪಡೆದಿದ್ದಾರೆ. ಮಹಿಳಾ ಅಧಿಕಾರಿ ಪ್ರಕರಣ ದಾಖಲಿಸಬೇಕು. ಮಹಿಳೆಯ ಗೌರವ ರಕ್ಷಿಸುವ ಕೆಲಸ ಮಾಡಬೇಕು. ಕೇಸ್ ಬಗ್ಗೆ ಮಹಿಳಾ ಅಧಿಕಾರಿಗೆ ಮಾಹಿತಿ ಇದ್ಯಾ..? ಅಥವಾ ಮಹಿಳಾ ಅಧಿಕಾರಿ ಕೇಸ್ ದಾಖಲಿಸಿದ್ದಾರಾ..? ಮಹಿಳಾ ಅಧಿಕಾರಿ, ವಿಡಿಯೋ ರೆಕಾರ್ಡ್ ಕೂಡ ಕಡ್ಡಾಯ. ಈ ಪ್ರಕರಣದಲ್ಲಿ ಪೊಲೀಸರು ಕಾನೂನು ಪಾಲಿಸಿಲ್ಲ ಎಂದು ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಪ್ರತಿವಾದ ಮಂಡಿಸಿದ್ದಾರೆ.
ವಾದ ಪ್ರತಿವಾದ ನಂತರ ಕೋರ್ಟ್ ಸೋಮವಾರಕ್ಕೆ ಆದೇಶ ಕಾಯ್ದಿರಿಸಿದೆ. ಮೇ 20 ರವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಮುಂದುವರಿಕೆ. ಸೋಮವಾರದವರೆಗೆ ಮಧ್ಯಂತರ ಜಾಮೀನು ಮುಂದುವರಿಕೆ. ಮೇ.20ರಂದು ತೀರ್ಪು ಪ್ರಕಟಿಸುವುದಾಗಿ ಎಸಿಎಂಎಂ ಕೋರ್ಟ್ ಹೇಳಿದೆ.