ಹೊಸದಿಲ್ಲಿ: ಲೋಕಸಭಾ ಚುನಾವಣೆಗಳು ಸನ್ನಿಹಿತವಾಗುತ್ತಿದ್ದಂತೆ, ದೇಶದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಕಡಿತ ಮಾಡಲಾಗಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ 19 ಕಿಲೋ ಸಿಲಿಂಡರ್ ಬೆಲೆಯಲ್ಲಿ 30.50 ರೂ. ಕಡಿತ ಮಾಡಲಾಗಿದೆ. ಅದೇ ರೀತಿ ವಾಣಿಜ್ಯ ಬಳಕೆಯ 5 ಕಿಲೋ ಸಿಲಿಂಡರ್ ಬೆಲೆಯಲ್ಲಿ 7.50 ರೂ. ಕಡಿಮೆ ಮಾಡಲಾಗಿದೆ.
ಚುನಾವಣೆಗಳ ಹೊಸ್ತಿಲಲ್ಲಿ ತೈಲ ಸಂಸ್ಥೆಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಬೆಲೆ ಇಳಿಕೆ ಮಾಡಿವೆ.