ಬೆಂಗಳೂರು: ನಗರದ ಐತಿಹಾಸಿಕ ಜಕ್ಕೂರು ವೈಮಾನಿಕ ಶಾಲೆಯ 370 ಎಕರೆ ಬೆಲೆಬಾಳುವ ಜಾಗವನ್ನು ಸರ್ಕಾರ ರೀಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ . ಅಶೋಕ್ ವಿಧಾನಸಭೆಯಲ್ಲಿ ಗಂಭಿರ ಆರೋಪ ಮಾಡಿದ್ದಾರೆ.
ಮೈಸೂರು ಮಹರಾಜರು ದಾನವಾಗಿ ನಿಡಿದ್ದ ಮತ್ತು ಮಾಜಿ ಪ್ರದಾನಿ ಜವಾಹರಲಾಲ್ ನೆಹರುರವರು ಶಂಕುಸ್ಥಾಪನೆ ಮಾಡಿರುವಂತ ಈ ವೈಮಾನಿಕ ಶಾಲೆಯನ್ನು ಮುಚ್ಚಿ ಅದನ್ನು ರಿಯಲ್ ಎಸ್ಟೇಟ್ ನವರಿಗೆ ಮಾರುವುದಾಗಿ ಅಧಿಕಾರಿಗಳ ಮಟ್ಟದ ಸಭೆಗಳು ನೆಡೆದಿವೆ ಎಂದು ಆರ್ ಅಶೋಕ್ ದೂರಿದ್ದಾರೆ. ವೈಮಾನಿಕ ಶಾಲೆ ಇರುವ ಕಾರಣ ಅಲ್ಲಿ ಎತ್ತರವಾದ ಕಟ್ಟಡಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ . ಈ ಅಡಚಣೆಯನ್ನು ನಿವಾರಿಸಲು ಶಾಲೆಯನ್ನು ಸ್ಥಳಾಂತರಿಸಿ ಅಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ವಾಣಿಜ್ಯ ಸಂಕಿರ್ಣಗಳನ್ನು ನಿರ್ಮಿಸುವುದು ಸರ್ಕಾರದ ಪ್ಲಾನ್ ಎಂದಿದ್ದಾರೆ. ಶಾಲೆಯನ್ನು ಮುಚ್ಚಿದರೆ ಅದರ ಸುತ್ತ ಮುತ್ತಲು ಬಿಲ್ಡರ್ಗಳು ಎತ್ತರದ ಕಟ್ಟಡಗಳನ್ನು ಕಟ್ಟಿ ಕೋಟ್ಯಂತರ ರೂಪಾಯಿ ದುಡ್ಡು ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸರ್ಕಾರವೆ ವೇದಿಕೆ ಸಿದ್ಧಪಡಿಸುತ್ತಿದೆ ಎಂದು ಅಶೋಕ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜಕ್ಕೂರು ವೈಮಾನಿಕ ಶಾಲೆಯ ಜಾಗವನ್ನು ರಿಯಲ್ ಎಸ್ಟೇಟ್ನವರಿಗೆ ಬಿಟ್ಟುಕೊಡುವುದು ಅಕ್ಷಮ್ಯ ಅಪರಾಧ. ಸರ್ಕಾರವು ಶಾಲೆಯನ್ನು ಉಳಿಸಬೇಕು ಮತ್ತು ಈ ಹಗರಣವನ್ನು ತಡೆಯಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಶೋಕ್ “ಮಾಹರಾಜರು ಜಾಗ ಕೊಟ್ಟರು, ನೆಹರುರವರು ಕಲ್ಲು ಇಟ್ಟರು, ಡಿ ಕೆ ಶಿಯವರು ಕಲ್ಲು ಕೀಳುವ ಕೆಲಸ ಮಾಡುತ್ತಿದ್ದಾರೆ” ಎಂದು ಶಿವಕುಮಾರ್ ವಿರುದ್ಧ ಬಾಣ ಬಿಸಿದರು.

