ಅತ್ಯಾಚಾರ; ಬಿಜೆಪಿ ಶಾಸಕನ ವಿರುದ್ಧ FIR ದಾಖಲಿಸಲು ಕೋರ್ಟ್ ಸೂಚನೆ

Most read

ಬರೇಲಿ: ಬಿಜೆಪಿಯ ಬಿಸ್ಲಿ ಶಾಸಕ ಹರೀಶ್ ಶಾಕ್ಯ ಮತ್ತು ಇತರ 16 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಶಾಸಕನ ವಿರುದ್ಧ ಭೂ ಕಬಳಿಕೆ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು 10 ದಿನಗಳ ಒಳಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

ಬದೌನ್ ನಿವಾಸಿಯಾದ ಯುವಕನೊಬ್ಬ ತನ್ನ ಭೂಮಿಯನ್ನು ಶಾಸಕ ಮತ್ತು ಆತನ ಸಹಚರರು ಕಬಳಿಸಿದ್ದಾರೆ. ಸೆಪ್ಟೆಂಬರ್ 17 ರಂದು, ತನ್ನ ತಾಯಿ ಮತ್ತು ಪತ್ನಿ ಶಾಸಕ ಹರೀಶ್ ಶಾಕ್ಯ ಅವರ ಕಚೇರಿಗೆ ಹೋಗಿದ್ದೆವು. ಅಲ್ಲಿ ಶಾಸಕ ಮತ್ತು ಇತರ ಇಬ್ಬರು ವ್ಯಕ್ತಿಗಳು ತನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಪೊಲೀಸರು ಪ್ರಕರಣ ದಾಖಳಿಸಿಕೊಳ್ಳಲು ಹಿಂಜರಿದಾಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಲೀಲು ಚೌಧರಿ, ಪ್ರಕರಣದ ಗಂಭೀರತೆ ಪರಿಗಣಿಸಿ ಶಾಸಕ ಹಾಗೂ ಇತರ ಆರೋಪಿಗಳ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಈ ಪ್ರಕರಣವು ಭೂಕಬಳಿಕೆ ಮತ್ತು ಲೈಂಗಿಕ ಅಪರಾಧಗಳಂತಹ ಗಂಭೀರ ಆರೋಪಗಳನ್ನು ಒಳಗೊಂಡಿದೆ. ಈ ವಿಷಯವು ರಾಜಕೀಯ, ಸಾಮಾಜಿಕ ನ್ಯಾಯ ಮತ್ತು ಕಾನೂನು ವ್ಯವಸ್ಥೆಗೆ ದೊಡ್ಡ ಸವಾಲಾಗಿ ಹೊರಹೊಮ್ಮಿದೆ. ಈಗ ಪೊಲೀಸರು ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಂಡು ಅದರ ಪ್ರಗತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಹಿಂದೆಯೂ ಬಿಜೆಪಿ ಶಾಸಕರು ಆಸ್ತಿ ದಂಧೆ ಮತ್ತು ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಬಹಿರಂಗವಾಗಿ ಆರೋಪ ಮಾಡಲಾಗಿತ್ತು.

ಬಿಜೆಪಿ ಶಾಸಕ ಹರೀಶ್ ಶಾಕ್ಯ, ಅವರ ಸಹೋದರರಾದ ಸತೇಂದ್ರ ಶಾಕ್ಯ ಮತ್ತು ಧರಂಪಾಲ್ ಶಾಕ್ಯ, ಸೋದರಳಿಯ ಬ್ರಜೇಶ್ ಕುಮಾರ್ ಶಾಕ್ಯ, ಹರಿಶಂಕರ್ ವ್ಯಾಸ್ ಅನೆಗ್ ಪಾಲ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ.

More articles

Latest article