ರಾಮೇಶ್ವರಂ ಕೆಫೆ ಬಾಂಬರ್ ಚಿತ್ರಗಳನ್ನು ಬಿಡುಗಡೆ ಮಾಡಿದ ಎನ್‌ಐಎ

Most read

ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಬ್ಲಾಸ್ಟ್ ಆರೋಪಿಯ ಸ್ಪಷ್ಟ ಫೋಟೋವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿಡುಗಡೆ ಮಾಡಿದೆ. ಇನ್ನು ಈತನ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದಿಂದ ಬಾಂಬರ್‌ಗಾಗಿ ಶೋಧನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಾಂಬರ್‌ನ ಎಲ್ಲ ಸಂಚಾರ ಸುಳಿವನ್ನು ಜಾಲಾಡುತ್ತಿದ್ದರೂ ಬಾಂಬರ್ ಮಾತ್ರ ಪೊಲೀಸರ ಕಣ್ತಪ್ಪಿಸಿಕೊಂಡೇ ಓಡಾಡುತ್ತಿದ್ದಾರೆ. ಹೀಗಾಗಿ, ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಶಂಕಿತ ಉಗ್ರ ಬಳ್ಳಾರಿಯಲ್ಲಿ ಸಂಚಾರ ಮಾಡಿದ ಸಿಸಿಟಿವಿ ಕ್ಯಾಮರಾವನ್ನು ಆಧರಿಸಿ ರಾಷ್ಟ್ರೀಯ ತನಿಖಾ ದಳದಿಂದ ಇರುವುದರಲ್ಲಿಯೇ ಸ್ಪಷ್ಟವಾದ ಫೋಟೋವನ್ನು ಬಿಡುಗಡೆ ಮಾಡಲಾಗಿದೆ.

ರಾಷ್ಟ್ರೀಯ ತನಿಖಾ ದಳದಿಂದ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಶಂಕಿತ ಉಗ್ರ ಬಳ್ಳಾರಿಯಲ್ಲಿ ಸಂಚಾರ ಮಾಡಿದ 4 ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇನ್ನು ಆರೋಪಿ ಪತ್ತೆಗಾಗಿ ಸಾರ್ವಜನಿಕರ ಸಹಕಾರಕ್ಕಾಗಿ ಪೋಟೋ ರಿಲೀಸ್ ಮಾಡಲಾಗಿದ್ದು, ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08029510900, 8904241100 ಕರೆ ಮಾಡಿ ಅಥವಾ info.blr.nia@gov.in ಗೆ ಇಮೇಲ್ ಮಾಡುವಂತೆ ಮನವಿ ಮಾಡಲಾಗಿದೆ

More articles

Latest article