Sunday, July 14, 2024

ರಾಮಮಂದಿರ ವಿಷಯದಲ್ಲಿ ನಾಲ್ಕು ಶಂಕರಾಚಾರ್ಯ ಪೀಠದವರ ನಿಲುವು ಸರಿ ಇದೆ : ಕನಕಗುರು ಪೀಠ ಸ್ವಾಮೀಜಿ

Most read

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾಲ್ಕು ಶಂಕರಚಾರ್ಯರು ಮೂಲ ಕಾರಣಕರ್ತರು. ಅವರ ಆಕ್ಷೇಪಣೆ ಸರಿ ಎನ್ನಿಸುತ್ತಿದೆ ಎಂದು ತಿಂಥಿಣಿ ಬ್ರಿಡ್ಜ್ ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಹೇಳಿದ್ದಾರೆ.

ಕನಕಗುರು ಪೀಠದಲ್ಲಿ ಇಂದಿನ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದೇವಸ್ಥಾನದ ನಿರ್ಮಾಣ ಪರಿಪೂರ್ಣವಾದ ನಂತರ ಉದ್ಘಾಟನೆ ಮಾಡಬೇಕು. ತರಾತುರಿಯ ಉದ್ಘಾಟನೆ ಉದ್ದೇಶವೆ ಬೇರೆ ಕಾಣುತ್ತಿದೆ. ಇದು ರಾಮನ ಭಕ್ತರಿಗೆ ನೋವು ತಂದಿದೆ  ಎಂದು ಹೇಳಿದ್ದಾರೆ.

ಶಂಕರಚಾರ್ಯ ಪೀಠದವರು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮೂಲ ಕಾರಣಕರ್ತರು. ರಾಮ ಮಂದಿರ ಉದ್ಘಾಟನೆಗೆ ನಮ್ಮ ಕನಕಗುರು ಪೀಠಕ್ಕೂ ಆಹ್ವಾನ ಬಂದಿದೆ ಎಂದು ಸ್ವಾಮೀಜಿ ತಿಳಿಸಿದರು.

More articles

Latest article