Thursday, July 25, 2024

ರಾಮ ಮಂದಿರ ನಿರ್ಮಾಣಕ್ಕೂ, ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಂಬಂಧವಿದೆ : ಯತ್ನಾಳ್‌

Most read

ರಾಮೇಶ್ವರಂ ಹೋಟೆಲ್‌ನಲ್ಲಿ ಶುಕ್ರವಾರವೇ ಸ್ಫೋಟವಾಗಿದೆ. ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಕಾರಣ ಬಾಂಬ್‌ ಸ್ಫೋಟ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಉಗ್ರರಿಗೆ ರಾಜ್ಯ ಪ್ರಯೋಗ ಶಾಲೆಯಾಗಿದೆ. ಜನ ದಟ್ಟಣೆ ಇರುವ ಮಾರುಕಟ್ಟೆ, ಸಿನೆಮಾ ಹಾಲ್‌ನಲ್ಲಿ ಬಾಂಬ್‌ ಸ್ಫೋಟಗೊಂಡಿದ್ದರೆ ಅನಾಹುತವಾಗುತ್ತಿತ್ತು. ಇವೆಲ್ಲ ನಿಭಾಯಿಸಲು ಆಗದಿದ್ದರೆ ಮನೆಗೆ ಹೋಗಿ. ರಾಮೇಶ್ವರಂ ಹೊಟೇಲ್ ನಲ್ಲಿ ಶುಕ್ರವಾರ ದಿನವೇ ಬ್ಲಾಸ್ಟ್ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಕಾರಣ ಮಾಡಿದ್ದಾರೆ. ಇವರೆಲ್ಲ ನಾಶವಾಗುವ ಕಾಲ ಬಂದಿದೆ ಎಂದು ಹೇಳಿದರು.

ಪಾಕ್ ಪರ ಘೋಷಣೆಯನ್ನು ಕೂಗಿದ್ದು ನಿಜ ಎಂದು ಘಟನೆಯನ್ನು ಖಂಡಿಸಿ ನಾನೇ ಮೊದಲು ಟ್ವೀಟ್‌ ಮಾಡಿದ್ದೆ. ಭಯೋತ್ಪಾದನಾ ಕೃತ್ಯಗಳಿಗೆ ಕರ್ನಾಟಕ ಸುರಕ್ಷಿತ ತಾಣವಾದಂತಾಗಿದೆ. ಪಾಕ್‌ ಪರ ಘೋಷಣೆ ಕೂಗಿದ್ದು ನಿಜ. ಇದನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸೋದು ಬೇಡ ಎಂದಿದ್ದೆ. ಪರೀಕ್ಷೆ ಅನವಶ್ಯಕ ಎಂದಿದ್ದೆ. ಆದರೆ, ಪ್ರಿಯಾಂಕ್‌ ಖರ್ಗೆ ಹಾಗೂ ಜಿ ಪರಮೇಶ್ವರ ಸಮರ್ಥನೆ ಮಾಡಿದ್ದರು ಎಂದರು.

ನಾಸೀರ್ ಹುಸೇನ್ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇಂತಹ ಘಟನೆಗಳು ರಾಜ್ಯದಲ್ಲಿ ಭಯೋತ್ಪಾದನೆಗೆ ಇಂಬು ಕೊಡುತ್ತಿವೆ. ಎನ್‌ಐಎ ತನಿಖೆ ಮಾಡಲಾಗುತ್ತಿದೆ ಬ್ರ್ಯಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಎಂಬಂತಾಗಿದೆ ಎಂದು ಕಿಡಿಕಾರಿದ್ದಾರೆ.

More articles

Latest article