ದೆಹಲಿ: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಅಂಗವಿಕಲ ಕ್ಷೌರಿಕ ರೊಬ್ಬೆ ಸೆಲೂನ್ ಭೇಟಿ ಅವರ ಕಷ್ಟವನ್ನು ಆಲಿಸಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಕ್ಷೌರಿಕ ಅಜಿತ್ ಭಾಯಿ ಅವರೊಂದಿಗೆ ಸಣವಾದ ನಡೆಸಿದ ರಾಹುಲ್ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ನಂತರ ಟ್ವೀಟ್ ಮೂಲಕ ರಾಹುಲ್ ಕ್ಷೌರಿಕನ ನೋವು ಹಂಚಿಕೊಂಡಿದ್ದಾರೆ. ಇದೇ ಅಂಗಡಿಯಲ್ಲಿ ರಾಹುಲ್ ತಮ್ಮ ಗಡ್ಡವನ್ನು ಟ್ರಿಮ್ ಮಾಡಿಸಿಕೊಂಡಿದ್ದಾರೆ.
ರಾಹುಲ್ ಬಳಿ ಕಣ್ಣೀರು ಹಾಕಿದ ವಿಕಲಚೇತನ ಕ್ಷೌರಿಕ ಅಜಿತ್ ನನ್ನ ದುಡಿಮೆಯಲ್ಲಿ ಬಿಡಿಗಾಸೂ ಉಳಿಯುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಅಂಗಡಿ ಬಾಡಿಗೆ, ಮನೆ ಖರ್ಚು, ಹೃದ್ರೋಗಿ ಪತ್ನಿ ಆರೈಕೆಗೆ ಎಲ್ಲ ಹಣವೂ ಖರ್ಚಾಗುತ್ತದೆ. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಚೆನ್ನಾಗಿದ್ದೆವು, ನೆಮ್ಮದಿ ಇತ್ತು ಎಂದು ಹೇಳಿಕೊಂಡಿದ್ದಾರೆ. ಕ್ಷೌರಿಕರು, ಚಮ್ಮಾರರು, ಕುಂಬಾರರು, ಬಡಗಿಗಳನ್ನು ಕುರಿತು ಉಲ್ಲೇಖಿಸಿರುವ ರಾಹುಲ್ ಬಡವರ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.