ಬಸವಣ್ಣನವರ ವಿಚಾರಧಾರೆ ಉಳಿಸಲು ಕಾಂಗ್ರೆಸ್ ಕಂಕಣಬದ್ಧ: ರಾಹುಲ್ ಗಾಂಧಿ

Most read

ವಿಜಯಪುರ: ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಟ್ಟರೆ ದೇಶದಲ್ಲಿ ಕಾನೂನು ವ್ಯವಸ್ಥೆ ನಾಶವಾಗಿ ಹೋಗಲಿದೆ. ನಮ್ಮ ಪಕ್ಷ ಬಸವಣ್ಣನವರ ವಿಚಾರಧಾರೆ ಉಳಿಸಲು ಕಂಕಣಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ನಗರದ ಬಿಎಲ್ಡಿ ಕ್ಯಾಂಪಸ್ ನಲ್ಲಿ ವಿಜಯಪುರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತ ಯಾಚಿಸಿ ಮಾತನಾಡಿದರು.

ಕರ್ನಾಟಕದಲ್ಲಿ ನಾವು ಭರವಸೆ ನೀಡಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ನರೇಂದ್ರ ಮೋದಿ ಸೋಲಿನ ಭಯದಲ್ಲಿದ್ದಾರೆ. ಈ ಭಯದಲ್ಲಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು, ದ್ವೇಷ ಬಿತ್ತುವ ಭಾಷಣಗಳನ್ನು ಕೊಡುತ್ತಿದ್ದಾರೆ. ಬಡವರ ಪರ ಇರುವ INDIA ಒಕ್ಕೂಟ ಬೇಕೋ, ಸಂವಿಧಾನ ವಿರೋಧಿ, ಶ್ರೀಮಂತರ ಪರವಾಗಿರುವ ನರೇಂದ್ರ ಮೋದಿ ಬೇಕೋ ಎಂಬುದನ್ನು ಜನ ಈ ಬಾರಿ ಯೋಚಿಸಬೇಕಾಗಿದೆ ಎಂದರು.

ದೇಶದಲ್ಲಿ ಮೊದಲು ರಾಜ ಮಹಾರಾಜರು ಆಡಳಿತ ಮಾಡುತ್ತಿದ್ದರು. ಸಂವಿಧಾನದಿಂದ ದೇಶದ ಜನತೆ ಅಧಿಕಾರ, ಹಕ್ಕು, ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ಹಿಂದುಳಿದವರಿಗೆ, ದಲಿತರಿಗೆ ಅಧಿಕಾರ ನೀಡಿದೆ. ಹೀಗೆ ಹೋರಾಡಿ ಪಡೆದ ಸಂವಿಧಾನವನ್ನು ಮೋದಿ ಸಂವಿಧಾನವನ್ನ ಮುಗಿಸಲು ಯತ್ನಿಸುತ್ತಿದ್ದಾರೆ ಎಂದರು.

ಗೃಹ ಲಕ್ಷ್ಮೀ ವಿರುದ್ಧ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ನಾಯಕರು ಗೃಹ ಲಕ್ಷ್ಮಿಯಿಂದ ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ಆದರೆ ಈ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಯೋಜನೆಯಿಂದ ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ರೂ. ಸಿಗುತ್ತೆ. ಮಹಿಳೆಯರು ಈ ದೇಶ, ಕುಟುಂಬಗಳ ರಕ್ಷಣೆ ಮಾಡುತ್ತಿದ್ದಾರೆ. ಪುರುಷರು 8 ಗಂಟೆ ಕೆಲಸ ಮಾಡಿದರೆ, ಮಹಿಳೆಯರು 16 ಗಂಟೆ ಕೆಲಸ ಮಾಡುತ್ತಾರೆ. ಮಹಿಳೆಯರು ಮಕ್ಕಳನ್ನ ನೋಡಿಕೊಳ್ಳುತ್ತಾರೆ. ಹೀಗೆ ದುಡಿಯುವ ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಯ ಮೂಲಕ ಸಹಾಯ ಮಾಡುತ್ತಿದ್ದೇವೆ.

ಕೇಂದ್ರದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಈಗ ಸಿಗುತ್ತಿರುವ ವಾರ್ಷಿಕ 24 ಸಾವಿರ ರೂ. ಸೇರಿದಂತೆ 1 ಲಕ್ಷ ರೂ. ಹೆಚ್ಚುವರಿಯಾಗಿ ನೇರವಾಗಿ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಜಮೆಯಾಗಲಿದೆ ಎಂದರು. ಈ ವೇಳೆ ಸುರ್ಜೆವಾಲಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸಾಥ್ ನೀಡಿದರು.

More articles

Latest article