ರೇಣುಕಾಸ್ವಾಮಿ ಹತ್ಯೆ ಕೇಸ್: ಎ4 ಆರೋಪಿ ರಾಘವೇಂದ್ರ ತಾಯಿ ನಿಧನ

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ4 ಆರೋಪಿ ರಘುವೇಂದ್ರ ಅಲಿಯಾಸ್ ರಘು ಎಂಬುವವನ ತಾಯಿ ಮಂಜುಳಮ್ಮ (70) ಮೃತಪಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ತಾಯಿ ಅವರ ಚಿತ್ರದುರ್ಗ ಜಿಲ್ಲೆಯ ಕೋಳಿ ಬುರುಜನಹಟ್ಟಿಯ ಗ್ರಾಮದ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ರಘು ಅಲಿಯಾಸ್ ರಾಘವೇಂದ್ರ, ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾಗಿದ್ದರು. ಕಳೆದ ವರ್ಷ ಅನಾರೋಗ್ಯ ಮದಿಂದ ಬಳಲುತ್ತಿದ್ದ ತಾಯಿಗೆ ಮಗ ಕೂಡಾ ಜೈಲುಪಾಲಾದ ಬಳಿಕ ಇವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಮಗ ಈಗ ಬರುತ್ತಾನೆ ಆಗ ಬರುತ್ತಾನೆ ಎಂದು ಕಾದಿದ್ದ ತಾಯಿ ಜೀವ ಇದೀಗ ಮಗ ನ್ಯಾಯಾಂಗ ಬಂಧನದಲ್ಲಿರುವಾಗಲೇ ಕೊನೆಯುಸಿರೆಳಿದ್ದಾರೆ.

ರೇಣುಕಾಸ್ವಾಮಿ ಅಪಹರಣ ಮತ್ತು ಮರ್ಡರ್ ಕೇಸ್​ಗೆ ಸಂಬಂಧಿಸಿದಂತೆ ಎ4 ಆರೋಪಿಯಾಗಿದ್ದಾರೆ. ಇದೀಗ ಮಂಜುಳಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಅತ್ತ ಮಡದಿಯ ಕಣ್ಣೀರು ಇತ್ತ ತಾಯಿ ಸಾವು ಕುಟುಂಬಸ್ತರಿಗೆ ನೋವನ್ನು ಉಂಟು ಮಾಡಿದೆ.

More articles

Latest article

Most read