ಎಸ್‌ಐಆರ್‌ ವಿರೋಧಿಸಿ ಸೆ.1ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಚಿಕ್ಕಬಳ್ಳಾಪುರ : ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ, ನೀಡಿರುವ ಅಂಕಿ-ಅಂಶಗಳು ಹಾಗೂ ಅದರ ಹಿಂದಿರುವ ವಿವರಣೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಾಗರಿಕ ಮತ ಕಾವಲು ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮೊಹಮ್ಮದ್ ನೂರುಲ್ಲಾ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ,ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಆಂದೋಲನದಲ್ಲಿ ಎಸ್‌ಐಆರ್‌ ಒಂದು ದೋಷಪೂರಿತ ಹಾಗೂ ಅನಾಗರಿಕ ಪ್ರಕ್ರಿಯೆಯಾಗಿದ್ದು, ಇದನ್ನು ರೂಪಿಸಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ಸೆ.1. ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂತ್ರಸ್ತರ ಸಾಕ್ಷ್ಯ ಗಳೊಂದಿಗೆ ಎಲೆಕ್ಷನ್ ಕಮಿಷನ್ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯತೀತ ಎಸ್‌ಐಆರ್‌ ವಿರೋಧಿ ಪಕ್ಷಗಳು  ಭಾಗವಹಿಸಲಿವೆ. ಎಸ್‌ಐಆರ್‌ನಿಂದ ತೊಂದರೆಗೊಳಗಾದವರನ್ನು ಜೀವಂತ ಸಾಕ್ಷಿಗಳ ಸಮೇತ ಚುನಾವಣಾ ಆಯೋಗದ ಮುಂದೆ ಹಾಜರುಪಡಿಸಿ ದೊಡ್ಡ ಆಂದೋಲನ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅವೈಜ್ಞಾನಿಕ ರೀತಿಯಲ್ಲಿ ನಡೆದಿದೆ.ಚುನಾವಣಾ ಆಯೋಗ ದಿಢೀರ್‌ ಪ್ರಕ್ರಿಯೆ ಘೋಷಿಸಿದ್ದು,ಜನರು ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ, ಅದೇ ರೀತಿ ಬೂತ್‌ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸೂಕ್ತ ತರಬೇತಿ ನೀಡದಿರುವುದು ಹಾಗೂ ಲಾಜಿಕಲ್‌ ಡಿಸ್ಕ್ರೆಪೆನ್ಸಿ ಕುರಿತು ಅಗತ್ಯ ಸೂಚನೆ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿ   ಕೆಲವು ಪ್ರದೇಶಗಳಲ್ಲಿ 20 ದಿನ ಕಳೆದರೂ ಎನ್ಯೂಮರೇಷನ್‌ ಫಾರಂಗಳನ್ನು ಹಂಚಿಕೆ ಮಾಡಿಲ್ಲ. ಬಿಎಲ್‌ಒಗಳಿಗೆ ಸ್ಪಷ್ಟತೆ ಇಲ್ಲದ ಕಾರಣ ರಾಶಿ ರಾಶಿ ತಪ್ಪು ನಮೂದುಗಳು ನಡೆದಿವೆ.ಹೀಗಾಗಿ ಇಡೀ ಎಸ್‌ಐಆರ್‌ ಪ್ರಕ್ರಿಯೆ ದೋಷಪೂರಿತವಾಗಿದ್ದು, ಇದನ್ನು ವ್ಯವಸ್ಥಿತ ಪ್ರಕ್ರಿಯೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನೂರುಲ್ಲ ಅವರು ವಿಷಾದ ವ್ಯಕ್ತಪಡಿಸಿದರು .

ಎಸ್‌ಐಆರ್‌ ಪ್ರಕ್ರಿಯೆಯಿಂದ ನೋಟಿಸ್‌ ಪಡೆಯಲಿರುವ ಮತದಾರರು ಸೇರಿದಂತೆ ಸಂತ್ರಸ್ತರ ಸಾಕ್ಷ್ಯಗಳನ್ನು ಸೆಪ್ಟೆಂಬರ್‌ 1ರ ಪ್ರತಿಭಟನೆಯಲ್ಲಿ ಚುನಾವಣಾ ಆಯೋಗದ ಮುಂದೆ ಮಂಡಿಸಲಾಗುವುದು.ರಾಜ್ಯದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಶಮೀರ್‌ ಜಿ, ರಾಜ್ಯ ಸಮಿತಿಯ ಸದಸ್ಯ ವೆಂಕಟೇಶ್, ಎಸ್‌ಡಿಪಿಐ ಮುಖಂಡ ಅಝಗರ್‌ ಖಾನ್‌, ಜೀವಿಕ ಸಂಘಟನ ಸಂಚಾಲಕ ಬಾಗೇಪಲ್ಲಿ ನಾರಾಯಣಸ್ವಾಮಿ ,ಜೀವಿಕ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ,ತಾಲೂಕು ಸಂಚಾಲಕ ಈಶ್ವರ್ ಇದ್ದರು.

More articles

Latest article

Most read