ಲೈಂಗಿಕ ದೌರ್ಜನ್ಯ ಆರೋಪಿ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷ: SIT ವಿಚಾರಣೆಗೆ ಬಗ್ಗೆ ಹೇಳಿದ್ದೇನು?

Most read

ಲೈಂಗಿಕ ದೌರ್ಜನ್ಯ ಹಾಗೂ ಅದರ ವಿಡಿಯೋ ಚಿತ್ರೀಕರಣ ಪ್ರಕರಣಗಳನ್ನು ಎದುರಿಸುತ್ತಿರುವ, ಸದ್ಯಕ್ಕೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಒಂದು ತಿಂಗಳ ಬಳಿಕ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ.

ವಿದೇಶದಲ್ಲಿ ಇದ್ದಕೊಂಡೆ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ, “ನಾನು ವಿದೇಶಕ್ಕೆ ತೆರಳುವುದು ಏ.26 ರಂದೇ ಪೂರ್ವನಿಗದಿಯಾಗಿತ್ತು” ಇದೇ ವೇಳೆ ಮೇ.31 ಕ್ಕೆ ಎಸ್ ಐ ಟಿ ಎದುರು ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ನನ್ನ ತಂದೆ, ತಾಯಿ, ನನ್ನ ತಾತ, ಕುಮಾರಣ್ಣನಲ್ಲಿ ಕ್ಷಮೆ ಕೋರುವೆ. ರಾಜ್ಯದ ಜನತೆ, ಜೆಡಿಎಸ್‌ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿ ಎಂದು ಹೇಳುತ್ತಾ, ವಿದೇಶದಲ್ಲಿ ಎಲ್ಲಿದ್ದೀನಿ ಎಂಬ ಮಾಹಿತಿ ಕೊಟ್ಟಿರಲಿಲ್ಲ. ಎಲ್ಲಿದ್ದೀನಿ ಎಂಬ ಬಗ್ಗೆ ಮಾಹಿತಿ ಕೊಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.

ಏ.26ರಂದು ಮತದಾನ ನಡೆಯಿತು, ಅಂದು ಕೇಸ್‌ ದಾಖಲಾಗಿರಲಿಲ್ಲ. 26ರ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ವಿದೇಶಕ್ಕೆ ಹೋಗಿ 3-4 ದಿನಗಳಾದ ಬಳಿಕ ಕೇಸ್‌ ಮಾಹಿತಿ ಗೊತ್ತಾಯ್ತು. ಆ ನಂತರ ಏಸ್‌ ಐಟಿ ನೋಟಿಸ್‌ ಕೊಟ್ಟಿದ್ದ ಮಾಹಿತಿ ಸಿಕ್ತು. ಎಸ್‌ ಐಟಿ ವಿಚಾರಣೆಗೆ ಹಾಜರಾಗಲು 7 ದಿನದ ಕಾಲಾವಕಾಶ ಕೋರಿದ್ದೆ ಎಂದು ಹೇಳಿದ್ದಾರೆ.

ಹಾಸನದಲ್ಲಿ ಕೆಲವರು ನನ್ನ ವಿರುದ್ದ ಪಿತೂರಿ ಮಾಡಿದರು. ಮಾರನೇ ದಿನವೇ ರಾಹುಲ್‌ ಗಾಂಧಿ, ಕಾಂಗ್ರೆಸ್ಸಿಗರು ಬಹಿರಂಗ ವೇದಿಕೆಗಳಲ್ಲಿ ನನ್ನ ವಿರುದ್ದ ಮಾತನಾಡಿದ್ದರು. ಆಘಾತದಿಂದ ನಾನು ಖಿನ್ನತೆಗೆ ಜಾರಿದೆ,ಎಲ್ಲರಿಂದ ದೂರ ಉಳಿದೆ, ನನಗೆ ತಂದೆ-ತಾಯಿ, ದೇವರು ಜನರ ಆರ್ಶೀವಾದವಿದೆ ಎಂದು ಹೇಳಿಕೊಂಡಿದ್ದಾರೆ.

ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಷಡ್ಯಂತ್ರ. ಕೆಲವು ಶಕ್ತಿಗಳು ಒಟ್ಟಾಗಿ ಸೇರಿಕೊಂಡು ನನ್ನ ವಿರುದ್ದ ಪಿತೂರಿ ಮಾಡಿದ್ದಾರೆ. ಮೇ 31ಕ್ಕೆ ಭಾರತಕ್ಕೆ ಬರುತ್ತೇನೆ ಎಂದು ಪ್ರಜ್ವಲ್‌ ರೇವಣ್ಣ ಘೋಷಣೆ. ಮೇ 31ರಂದು ಎಸ್‌ ಐಟಿ ವಿಚಾರಣೆ ಹಾಜರಾಗುತ್ತೇನೆ. ವಿದೇಶದಿಂದ ವಿಡಿಯೋ ರಿಲೀಸ್‌ ಮಾಡಿದ ಪ್ರಜ್ವಲ್‌ ರೇವಣ್ಣ.

More articles

Latest article