ನೂರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಹಾಗೂ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪ ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ವಿಡಿಯೋಗಳೆಲ್ಲಾ ಅಸಲಿಯಾಗಿದ್ದು, ಯಾವ ವಿಡಿಯೋಗಳನ್ನು ತಿರುಚಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯವು (FSL) ವರದಿ ನೀಡಿದೆ.
ಹಾಸನ ಅಶ್ಲೀಲ ವಿಡಿಯೋ ಕೇಸ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳು ಹಾಗೂ ಪೆನ್‌ಡ್ರೈವ್‌ಗಳಿಂದ ಸಾಕಷ್ಟು ಅಶ್ಲೀಲ ವಿಡಿಯೋಗಳನ್ನು ಎಸ್‌ಐಟಿ ತಂಡ ಸಂಗ್ರಹಿಸಿತ್ತು. ಖಚಿತತೆ ಪಡೆದುಕೊಳಲು ಈ ಎಲ್ಲಾ ವಿಡಿಯೋಗಳನ್ನು FSLಗೆ ಕಳಿಸಲಾಗಿತ್ತು.
ಸದ್ಯ ಪ್ರಯೋಗಾಲದಿಂದ ಈ ವಿಡಿಯೋಗಳ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ವರದಿ ತಲುಪಿಸಿದ್ದು, ಎಲ್ಲಾ ವಿಡಿಯೋಗಳು ಅಸಲಿಯಾಗಿವೆ. ಯಾವುದೇ ರೀತಿಯ ತಿರುಚುವಿಕೆ ಇಲ್ಲ ಎಂದು ಉಲ್ಲೇಖಿಸಲಾಗಿದೆ ಎಂಬುದು ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣ ಇದ್ದಾರೆ ಎಂಬ ವಿಡಿಯೋಗಳು ಅಸಲಿ ಎಂಬುದು ಸಾಬೀತಾಗಿದೆ, ಆದರೆ ವಿಡಿಯೋದಲ್ಲಿ ಇರುವುದು ಪ್ರಜ್ವಲ್ ರೇವಣ್ಣನೇ ಅಥವಾ ಅಲ್ಲವಾ ಎನ್ನುವುದನ್ನು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ, ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಎಸ್‌ಐಟಿ ಈಗಾಗಲೇ ಪ್ರಕರಣದ ಬಗ್ಗೆ ಚುರುಕಿನ ತನಿಖೆ ನಡಸುತ್ತಿದ್ದು, ಆರೋಪ ಪಟ್ಟಿ ಸಿದ್ದಗೊಂಡಿದ್ದು, ಶೀಘ್ರದಲ್ಲೇ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.