ನೂರಾರು ಹೆಣ್ಣು ಮಕ್ಕಳ ಜೊತೆ ಲೈಂಗಿಕ ದೌರ್ಜನ್ಯವೆಸಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಪ್ರಜ್ವಲ್ ರೇವಣ್ಣ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ರದ್ಧತಿಗೆ ಕೇಂದ್ರ ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ ಬರೆಯಲಾಗಿದೆ.
ಇನ್ನು ಈ ಕುರಿತಂತೆ ಹುಬ್ಭಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಡಾ. ಜಿ. ಪರಮೇಶ್ವರ್, ಕೇಂದ್ರ ವಿದೇಶಾಂಗ ಇಲಾಖೆಯು ಡಿಪ್ಲೋಮ್ಯಾಟಿಕ್ ಪಾಸ್ ಪೋರ್ಟ್ ರದ್ದು ಮಾಡಿದ್ರೆ ಪ್ರಜ್ವಲ್ ಬಂಧನ ಸುಲಭವಾಗಲಿದೆ ಅಂತ ಪರಮೇಶ್ವರ್ ಹೇಳಿದ್ದಾರೆ.
ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಎಲ್ಲವನ್ನೂ ಟ್ಯಾಗ್ ಮಾಡಿ ಪತ್ರ ಬರೆಯಲಾಗಿದೆ. ಜೊತೆಗೆ ಪ್ರಜ್ವಲ್ ವಿರುದ್ಧದ ಪ್ರಕರಣಗಳ ಮಾಹಿತಿಯನ್ನೂ ವಿದೇಶಾಂಗ ಇಲಾಖೆಗೆ ಎಸ್ಐಟಿ ನೀಡಿದೆ. ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾನೆ ಎನ್ನುವ ಬಗ್ಗೆ ಮಾಹಿತಿ ಪಡೆಯುವಂತೆ ಸಿಎಂ ಈಗಾಗಲೇ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ, ನ್ಯಾಯಾಲಯ ವಾರಂಟ್ ಕೊಟ್ಟಿದೆ. ಅದೇ ವಾರಂಟ್ ಇಟ್ಟುಕೊಂಡು ಪ್ರಜ್ವಲ್ ಪಾಸ್ ಪೋರ್ಟ್ ರದ್ದಿಗೆ ಕೋರಿದ್ದೇವೆ ಅಂತ ಪರಮೇಶ್ವರ್ ಹೇಳಿದ್ದಾರೆ.