ಬೆಂಗಳೂರು: ಹಾಸನ ಕಾಮಕಾಂಡದ ಆರೋಪಿ, ಹಾಸನ ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಎಸ್ ಐಟಿ ವಿಚಾರಣೆಗೆ ಹಾಜರಾಗಲು ಒಂದು ವಾರ ಸಮಯವನ್ನು ವಕೀಲರ ಮೂಲಕ ಕೇಳಿದ್ದಾರೆ. ಹಾಗೆ ಸಮಯವನ್ನು ತೆಗೆದುಕೊಳ್ಳಲು ಬರೋದಿಲ್ಲ. ಸೆಕ್ಷನ್ 41ಎನಲ್ಲಿ ಸಮಯವನ್ನು ಕೊಡಲು ಬರುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ, SIT ಗೆ ತನಿಖೆ ವಹಿಸಿರುವುದರಿಂದ ಹೆಚ್ಚು ಚರ್ಚೆ ಮಾಡಲು ಹೋಗಲ್ಲ. ಗೃಹ ಸಚಿವನಾಗಿ ನನ್ನ ಹೇಳಿಕೆಗಳು ಅಧಿಕೃತವಾಗುತ್ತವೆ. ಹೀಗಾಗಿ ಹೆಚ್ಚಾಗಿ ಮಾತಾಡಲ್ಲ. SITಯವರು ನೋಟಿಸ್ ನೀಡಿದ್ದಾರೆ. ಎಚ್.ಡಿ.ರೇವಣ್ಣ ಇಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿಕೊಂಡಿದ್ದಾರೆ. ಪ್ರಜ್ವಲ್, ಒಂದು ವಾರ ಸಮಯವನ್ನು ವಕೀಲರ ಮೂಲಕ ಕೇಳಿದ್ದಾರೆ. ಹಾಗೆ ಸಮಯವನ್ನು ತೆಗೆದುಕೊಳ್ಳಲು ಬರೋದಿಲ್ಲ. ಸೆಕ್ಷನ್ 41ಎನಲ್ಲಿ ಸಮಯವನ್ನು ಕೊಡಲು ಬರುವುದಿಲ್ಲ. SIT ಅಧಿಕಾರಿಗಳು , ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಮುಂದುವರೆಯುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಘಟನೆಯ ಬಗ್ಗೆ ವಿವರಿಸಿ, ರಾಜತಾಂತ್ರಿಕ ವೀಸಾ ರದ್ದು ಮಾಡಿ, ಆದಷ್ಟು ಬೇಗ ಕರೆದುಕೊಂಡು ಬರುವುದಕ್ಕೆ ಸಹಕರಿಸಬೇಕೆಂದು ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದರು.