ಪ್ರಬುದ್ಧಾಳ ಕೇಸ್‌ ಸಿಐಡಿಗೆ ಹಸ್ತಾಂತರ

Most read

ಬೆಂಗಳೂರಿನಲ್ಲಿ ಕೊಲೆಯಾಗಿದ್ದ ಪ್ರಬುದ್ಧಾಳ ಕೇಸ್ ಸದ್ಯ ಸಿಐಡಿ ತನಿಖೆಗೆ ನೀಡಲಾಗಿದೆ. ಹೌದು, ಮೃತಳ ತಾಯಿ ಸೌಮ್ಯಾ ಅವರು ಖುದ್ದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಅವರ ಮನವಿ ಮೇರೆಗೆ ಸಿಐಡಿಗೆ ವಹಿಸಲು ಸಿಎಂ ಡಿಜಿ & ಐಜಿಪಿ ಅಲೋಕ್ ಮೋಹನ್‌ಗೆ ಸೂಚನೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತಾಯಿ ಸೌಮ್ಯಾ ಅವರು, ಡಿಗ್ರಿ ಓದುತ್ತಿದ್ದ ನನ್ನ ಮಗಳನ್ನು ಯುವಕನೊಬ್ಬ ಕೊಲೆ ಮಾಡಿದ್ದಾನೆ. ಕೆಲವು ಅನುಮಾನಗಳಿದ್ದವು, ಆ ಯುವಕನಿಗೆ ಬೇಲ್ ಕೂಡ ಸಿಕ್ಕಿತ್ತು. ಆರೋಪಿಗೆ ಬೇಲ್ ಸಿಕ್ಕಿದೆ ಅಂತಾ ನಾವು ಸುಮ್ಮನಿದ್ದರೆ ಸರಿ ಹೋಗಲ್ಲ. ಹಾಗಾಗಿ ಸಿಐಡಿಗೆ ಕೊಡಬೇಕು ಅಂತಾ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆವು ಎಂದು ಹೇಳಿದ್ದಾರೆ.

ಹೆಣ್ಣು ಮಕ್ಕಳು ನಿರಾಕರಿಸಿದರೆ ಅವರನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆ ಎಂದಾದರೆ ಸಮಾಜಕ್ಕೆ ಯಾವ ಸಂದೇಶ ಸಿಗುತ್ತಿದೆ ಅಂತಾ ನನಗೆ ಗೊತ್ತಾಗುತ್ತಿಲ್ಲ ಎಂದು ತಮ್ಮ ಮಗಳನ್ನು ನೆನದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ (20) ಕೊಲೆ ಪ್ರಕರಣವನ್ನು ಬೆಂಗಳೂರಿನ ಸುಬ್ರಮಣ್ಯಪುರ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಬುದ್ಧಾಳನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಆಕೆಯ ತಮ್ಮನ ಸ್ನೇಹಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆತನಿಗೆ ಬೇಲ್‌ ಸಿಕ್ಕಿ ಆರಾಮವಾಗಿ ಓಡಾಡಿಕೊಂಡಿದ್ದು ಈ ತನಿಖೆಯನ್ನು ಚುರುಕುಗೊಳಿಸಲು ಸಿಐಡಿಗೆ ಕೊಡುವಂತೆ ತಾಯಿ ಸೌಮ್ಯ ಅವರು ಒತ್ತಾಯಿಸಿದ ಹಿನ್ನೆಲೆ ಸಿಎಂ ಸಿಐಡಿಗೆ ಹಸ್ತಾಂತರಿಸಿದ್ದಾರೆ.

More articles

Latest article