ಪ್ರಭಾಸ್ ಇಷ್ಟದ ಬುಜ್ಜಿ ಬೆಂಗಳೂರಿಗೆ ಬರ್ತಿದ್ದಾಳೆ : ನೀವೂ ಸೆಲ್ಫಿ ತೆಗೆದುಕೊಳ್ಳಬಹುದು..!

Most read

ಇತ್ತಿಚೆಗಷ್ಟೇ ನಟ ಪ್ರಭಾಸ್ ತನ್ನ ನೆಚ್ಚಿನ ಬುಜ್ಜಿಯನ್ನು ಪರಿಚಯ ಮಾಡಿಕೊಟ್ಟಿದ್ದರು. ಈ ಬುಜ್ಜಿ ಕಲ್ಕಿ 2898 ಸಿನಿಮಾದಲ್ಲಿ ಅತ್ಯಾಕಾರ್ಷಣೀಯವಾಗಿದೆ. ಜೂನ್ 27ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಅಭಿನಯಿಸಿದ್ದಾರೆ.

ಪ್ರಭಾಸ್ ಇಲ್ಲಿ ಭೈರವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೈರವನಿಗೆ ಸಾಥ್ ಕೊಡುವುದೇ ಈ ಬುಜ್ಜಿ ಎಂಬ ರೋಬೋ ವಾಹನ. ಈ ರೋಬೋ ವಾಹನಕ್ಕೆ ಕೀರ್ತಿ ಸುರೇಶ್ ವಾಯ್ಸ್ ಕೊಟ್ಟಿದ್ದಾರೆ. ಈಗಾಗಲೇ ಈ ಬುಜ್ಜಿಯನ್ನು ಎಲ್ಲರಿಗೂ ಪರಿಚಯ ಮಾಡಿಕೊಡಲಾಗಿದೆ. ಸುಮಾರು ಐದು ಕೋಟಿ ವೆಚ್ಚದಲ್ಲಿ ಈ ಬುಜ್ಜಿಯನ್ನು ತಯಾರು ಮಾಡಲಾಗಿದೆ. ಆಟೋಮೊಬೈಲ್ ಬಳಕೆದಾರರು ಈ ಬುಜ್ಜಿಯನ್ನು ರಿವ್ಯೂ ಮಾಡಿದ್ದಾರೆ. ಮಹಿಂದ್ರಾ ರಿಸರ್ಚ್ ವ್ಯಾಲಿಯ ಚೆನ್ನೈ ತಂಡ ಈ ಬುಜ್ಜಿ ತಯಾರಿಸಲು ಸಾಕಷ್ಟು ಸಹಾಯ ಮಾಡಿದೆ.

ಈ ಬುಜ್ಜಿಯನ್ನು ನೇರವಾಗಿ ನೋಡುವ ಕೌತುಕವೇ ಬೇರೆ. ಜನರಿಗೆ ಇನ್ನಷ್ಟು ಖುಷಿ ಕೊಡಲು ಬುಜ್ಜಿ ಕೂಡ ರೆಡಿಯಾಗಿದೆ. ಅನೇಗ ನಗರಗಳಿಗೆ ಸುತ್ತು ಹೊಡೆಯಲು ರೆಡಿಯಾಗಿದೆ. ಚೆನ್ನೈ, ಮುಂಬೈ ಸೇರಿದಂತೆ ಬೆಂಗಳೂರಿಗೂ ಬುಜ್ಜಿ ಬರಲಿದ್ದು, ಇದರ ಜೊತೆಗೆ ಸೆಲ್ಫಿ ವಿಡಿಯೋ ಕ್ಲಿಕ್ಕಿಸಿಕೊಳ್ಳಬಹುದು. ಇನ್ನು ಯಾವಾಗ ಬರಲಿದೆ ಎಂಬ ಡೇಟ್ ತಿಳಿದಿಲ್ಲ. ಸಿನಿಮಾ ರಿಲೀಸ್ ಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇರುವ ಕಾರಣ, ಬುಜ್ಜಿ ಕೂಡ ಅತಿ ಶೀಘ್ರದಲ್ಲಿಯೇ ಬೆಂಗಳೂರು ತಲುಪಲಿದೆ. ಪ್ರಭಾಸ್ ಸಿಕ್ಕಾಪಟ್ಟೆ ಇಷ್ಟಪಟ್ಟಿರುವ ವಾಹನ ಇದು. ಅವರ ಅಭಿಮಾನಿಗಳಿಗೆ ಖಂಡಿತ ಇದು ಸ್ಪೆಷಲ್ ಅಂತಾನೆ ಹೇಳಬಹುದು.

More articles

Latest article