ಬಾಗಲಕೋಟೆ: ಬಡವರು, ಮಹಿಳೆಯರು, ಯುವಕರು ರೈತರು ಈ ನಾಲ್ಕು ವರ್ಗದ ಜನರು ಬಿಜೆಪಿ ಡಿಕ್ಷನರಿಯಲ್ಲೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿಯ ಸಂಕಲ್ಪ ಪತ್ರವನ್ನು ಲೇವಡಿ ಮಾಡಿದ್ದಾರೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ರೈತರ ಬಗ್ಗೆ ಏನು ಹೇಳ್ತಾರೆ ಇವರು? ಪಂಜಾಬ್ ನ ರೈತರು ಮೂರು ವರ್ಷಗಳ ಕಾಲ ಹೋರಾಟ ಮಾಡಿದರು. 50 ಮಂದಿ ಸತ್ತರೂ ಪಕ್ಕದಲ್ಲೇ ಇದ್ದ ಒಬ್ಬರೂ ಭೇಟಿ ಆಗಲಿಲ್ಲ. ಇವರು(ಬಿಜೆಪಿ) ರೈತರ ಬಗ್ಗೆ ಹೇಗೆ ಮಾತಾಡುತ್ತಾರೆ? ಮಹಿಳೆಯರ ಬಗ್ಗೆಯೂ ಬಿಜೆಪಿ ಮಾತಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಏನೇನು ಆಗುತ್ತಿದೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ ಎಂದರು.
2014ರ ಚುನಾವಣೆ ಸಂದರ್ಭದಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಇದ್ದ ಉದ್ಯೋಗಗಳನ್ನೇ ಕಿತ್ತುಕೊಂಡರು. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನೇ ಮುಚ್ಚಿದರು. ಬಡತನ ನಿವಾರಣೆಗೆ ಇದ್ದ ಕಾರ್ಯಕ್ರಮಗಳನ್ನು ಬಂದ್ ಮಾಡಿದರು ಎಂದರು ಅವರು ಹೇಳಿದರು.
2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ತಂದಿದ್ದ ಕಾರ್ಯಕ್ರಮಗಳನ್ನು ನಂತರ ಬಂದ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತು. ಎಸ್ಸಿ-ಎಸ್ಟಿಗೆ ಕೊಡುವ ಕಾರ್ಯಕ್ರಮಗಳು ಸ್ಥಗಿತ ಆದವು. 2013-18 ರಲ್ಲಿ ಸಿದ್ದರಾಮಯ್ಯನವ್ರು 5 ಲಕ್ಷ ಮನೆ ಕೊಟ್ಟಿದ್ರು. ನಂತರ ಬಿಜೆಪಿಯವರು ನಾಲ್ಕು ವರ್ಷದಲ್ಲಿ ಎಷ್ಟು ಮನೆ ಕೊಟ್ಟರು ಎಂದ ಅವರು ನಾಲ್ಕು ವರ್ಷಗಳಲ್ಲಿ ಇವರು ಕೊಟ್ಟಿದ್ದೇನು ಇಲ್ಲ. ಈಗ ಮತ್ತೆ ಬಡವರಿಗೆ ಮೂರು ಲಕ್ಷ ಮನೆ ಘೋಷಣೆ ಮಾಡಿದ್ದಾರೆ. ಸಾಕಷ್ಟು ಸುಳ್ಳು ಹೇಳಿದ್ದಾರೆ ಅವ್ರು,ಒಂದಲ್ಲ, ಎರಡಲ್ಲ, ನೂರಾರು ಎಂದರು ಅವರು ಟೀಕಿಸಿದರು.