ವಿಮಾನ ಅಪಘಾತ: ಗುಜರಾತ್‌ ಮಾಜಿ ಸಿಎಂ ಬಿಜೆಪಿ ಮುಖಂಡ ವಿಜಯ್‌ ರೂಪಾನಿ ಸಾವು

Most read

ಅಹಮದಾಬಾದ್‌: ಗುಜರಾತ್‌ ಮಾಜಿ ಮುಖ್ಯಮಂತ್ರಿ ಬಿಜೆಪಿ ಮುಖಂಡರಾದ ಇಂದು ಅಹಮದಾಬಾದ್‌ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಲಂಡನ್‌ ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12ನೇ ಆಸನದಲ್ಲಿ  ಕುಳಿತಿದ್ದರು. ಇವರು ಲಂಡನ್‌ ನಲ್ಲಿರುವ ಮಗಳ ಮನೆಗೆ ಹೊರಟಿದ್ದರು. ಇದೇ ತಿಂಗಳ 30ರಂದು ಮರಳುವವರಿದ್ದರು. ವಿಮನ ಅಪಘಾತದಲ್ಲಿ ಮರಣ ಹೊಂದಿದ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.

ಬಿಜೆಪಿ ಮುಖಂಡರಾದ 68 ವರ್ಷದ ರೂಪಾನಿ ಅವರು ಗುಜರಾತ್‌ ರಾಜ್ಯದ ಹದಿನಾರನೇ ಮುಖ್ಯಮಂತ್ರಿಯಾಗಿ 2016 ರಿಂದ 2021ರವೆಗೆ ಕರ್ತವ್ಯ ನಿರ್ವಹಿಸಿದ್ದರು. ಆರು ದಶಕಗಳ ಹಿಂದೆ ಗುಜರಾತ್‌ ನ ಎರಡನೇ ಮುಖ್ಯಮಂತ್ರಿಯಾಗಿದ್ದ ಬಲವಂತರಾಯ್‌ ಮೆಹ್ತಾ ಅವರು 1965 ರಲ್ಲಿ ಇದೇ ರೀತಿ ವಿಮಾನ ದುರಂತದಲ್ಲಿ ಅಸು ನೀಗಿದ್ದರು.

ದುರಂಕ್ಕೀಡಾದ ಏರ್‌ ಇಂಡಿಯಾ ವಿಮಾನದಲ್ಲಿ10 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆಗೆ ಸೇರಿರುವವರಲ್ಲಿ ಬಹುತೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನವು ಮೆಡಿಕಲ್‌ ಕಾಲೇಜಿನ ಹಾಸ್ಟೆಲಿನ ಅಡುಗೆ ಮನೆ ಮೇಲೆ ಬಿದ್ದಿದೆ. ಮಧ್ಯಾಹ್ನ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲೇ ಪತನಗೊಂಡಿರುವ ಕಾರಣ ಅನೇಕ ವಿದ್ಯಾರ್ಥಿಗಳೂ ಮೃತಪಟ್ಟಿರುವ ಶಂಕೆಇದೆ.

More articles

Latest article