ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ಸಿಇಒ ಸಮೀರ್ ವಿರುದ್ಧ ವ್ಯಾಪಕ ಆಕ್ರೋಶದ ನಂತ. ಫೋನ್ ಪೇ ಬಾಯ್ಕಾಟ್ ಅಭಿಯಾನಗಳೂ ಶುರುವಾಗಿವೆ. ಫೋನ್ ಪೇ ರಾಯಭಾರಿಯಾಗಿದ್ದ ಕಿಚ್ಚ ಸುದೀಪ್ ಕೂಡಾ ಈಗ ಕನ್ನಡಿಗರ ಪರ ನಿಂತು ಆ ಸ್ಥಾನದಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ.
ಫೋನ್ ಪೇ ಇನ್ನು ಒಂದು ದಿನದ ಒಳಗಾಗಿ ಕನ್ನಡಿಗರ ಕ್ಷಮೆ ಕೋರಿ, ರಾಜ್ಯ ಸರ್ಕಾರದ ನಿಲುವಿಗೆ ಬದ್ದವಾಗದಿದ್ದರೆ ತಾವು ಫೋನ್ ಪೇ ಬ್ರಾಂಡ್ ಅಂಬಾಸಡರ್ ಆಗಿ ಮುಂದುವರೆಯದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗ ಫೋನ್ ಪೇ ನಿಲುವಿಗೆ ಸುದೀಪ ಅವರ ಮುಂದಿನ ನಿರ್ಧಾರ ಏನಾಗುತ್ತದೆ ಅನ್ನೋದು ಈಗ ಎಲ್ಲರ ಪ್ರಶ್ನೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ನಾಡು-ನುಡಿಯ ವಿಚಾರ ಬಂದಾಗ ಸದಾ ಮುಂದಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ʻʻಕಂಪನಿ, ಹಣಕ್ಕಿಂತಾ ಕನ್ನಡಿಗನಾಗಿ ನನ್ನ ಸ್ವಾಭಿಮಾನ ಮುಖ್ಯʼʼ ಎನ್ನುವುದು ಸುದೀಪ್ ಅವರ ನಿರ್ಧಾರವಾಗಿದೆ. ಈ ಕಾರಣದಿಂದ ಒಂದು ದಿನದ ಒಳಗಾಗಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.