ಕರ್ನಾಟಕದಲ್ಲಿನ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೀಡಲು ಉದ್ದೇಶಿಸಿರುವ ಮೀಸಲಾತಿಯನ್ನು ಪ್ರಶ್ನಿಸಿರುವ ಫೋನ್‌ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಫೋನ್‌ಪೇ ಅನ್‌ಇನ್‌ಸ್ಟಾಲ್ ಅಭಿಮಾಯಾನ ಶುರುವಾದ ಬೆನ್ನಲ್ಲೇ ಹೆಚ್ಚೆತ್ತ ಫೋನ್ ಪೇ ಸಿಇಒ ಕನ್ನಡಿಗರಿಗೆ ಕ್ಷಮೆಯಾಚಿಸಿದ್ದಾರೆ.
ಕನ್ನಡಿಗರ ಮೀಸಲಾತಿಗೆ ವಿರೋಧಿಸುತ್ತಿರುವ ಫೋನ್‌ಪೇ ಸಿಇಒ ಸಮೀರ್‌ಗೆ ಬುದ್ದಿ ಕಲಿಸಬೇಕು ಎಂದು ಕರವೇ ಸೇರಿ ಅನೇಕ ಕನ್ನಡ ಪರ ಯುವಜನತೆ ಆಪ್ ಬಳಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದರು. ಇದರ ನಡುವೆ ಫೋನ್ ಪೇ ಆಪ್ ಅನ್‌ಇನ್‌ಸ್ಟಾಲ್ ಮಾಡಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇದರ ಪರಿಣಾಮದಿಂದ ಕಿಚ್ಚ ಸುದೀಪ್ ಕೂಡ ಫೋನ್ ಪೇ ರಾಯಭಾಗಿತ್ವದಿಂದ ಹೊರಬರುವ ಮುನ್ಸೂಚನೆ ಕೂಡ ನೀಡಿದ್ದರು. ಇದರ ಬೆನ್ನಲ್ಲೇ ಈಗ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಟ್ವೀಟ್ ಮಾಡಿರುವ ಫೋನ್ ಪೇ, ಕ್ಷಮೆಯಾಚಿಸಿದೆ.
ಹೇಳಿಕೆಯಲ್ಲಿ, “ಕರ್ನಾಟಕ ಮತ್ತು ಕನ್ನಡಿಗರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಹೇಳಿಕೆಯಿಂದಾಗಿ ಯಾರೊಬ್ಬರ ಭಾವನೆಗಳನ್ನು ನೋಯಿಸಿದರೆ, ನಾನು ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಮತ್ತು ನಿಮಗೆ ಬೇಷರತ್ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಸಮೀರ್ ಅವರು ಹೇಳಿಕೆಯನ್ನು ಟ್ವೀಟ್ ಮಾಡಿರುವ ಫೋನ್ ಪೇ, ವಿಶ್ವ ದರ್ಜೆಯ ತಂತ್ರಜ್ಞಾನ ಪ್ರತಿಭೆ ಮತ್ತು ರೋಮಾಂಚಕ ವೈವಿಧ್ಯತೆಗೆ ಹೆಸರುವಾಸಿಯಾಗಿರುವ ಬೆಂಗಳೂರು ನಗರದಲ್ಲಿ ನಮ್ಮ ಫೊನ್ ಪೇ ಸಂಸ್ಥೆ ಹುಟ್ಟಿ, ಬೇರೂರಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ಕಳೆದ ದಶಕದಲ್ಲಿ ಮಾವು ಬೆಂಗಳೂರಿನಿಂದ ಇಡೀ ಭಾರತದ ಉದ್ದಗಲಕ್ಕೂ ವ್ಯಾಪಿಸಿದ್ದೇವೆ. ಇದರಿಂದಾಗಿ ಸರಿಸುಮಾರು 55 ಕೋಟಿಗೂ ಹೆಚ್ಚು ಭಾರತೀಯರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಪಾವತಿಗಳನ್ನು ನೀಡಲು ಸಾಧ್ಯವಾಗಿದೆ.
“ಭಾರತದ ಸಿಲಿಕಾನ್ ವ್ಯಾಲಿ” ಎಂಬ ಬೆಂಗಳೂರಿನ ಖ್ಯಾತಿಯು ಅಕ್ಷರಶಃ ಸತ್ಯ. ನಗರದ ನಾವೀನ್ಯತೆಯು ಅದ್ಭುತ ಸಂಸ್ಕೃತಿಯ ಮೇಲೆ ಅಭಿವೃದ್ಧಿ ಹೊಂದುತ್ತದೆ. ಕರ್ನಾಟಕವು ಭಾರತದ ಉಳಿದ ಭಾಗಗಳಿಂದ ಅತ್ಯಂತ ಪ್ರತಿಭಾವಂತ ಯುವ ಮನಸ್ಸುಗಳನ್ನು ಆಕರ್ಷಿಸುತ್ತದೆ. ಒಂದು ಕಂಪನಿಯಾಗಿ, ಅತ್ಯಂತ ದೊಡ್ಡ ಮಟ್ಟದ ಬೆಂಬಲ ನೀಡಿ ವ್ಯಾಪಾರ ಮಾಡಲು ಅವಶ್ಯ ವಾತಾವರಣ ನೀಡಿದ ಕರ್ನಾಟಕದ ಸರ್ಕಾರ ಮತ್ತು ಸ್ಥಳೀಯ ಕನ್ನಡಿಗರು ನಾವು ಆಳವಾಗಿ ಕೃತಜ್ಞರಾಗಿರುತ್ತೇವೆ. ಅಂತಹ ಅಧ್ಬುತ ಪರಿಸರ ವ್ಯವಸ್ಥೆ ಮತ್ತು ಪ್ರಗತಿಪರ ನೀತಿಗಳಿಲ್ಲದಿದ್ದರೆ, ಬೆಂಗಳೂರು ಜಾಗತಿಕ ತಂತ್ರಜ್ಞಾನದ ಸೂಪರ್ ಪವರ್ ಆಗುತ್ತಿರಲಿಲ್ಲ ಎಂದು ಟ್ವೀಟ್ ಮಾಡಿದೆ.
ಕರಡು ಉದ್ಯೋಗ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕಳೆದ ವಾರ ನಾನು ಮಾಡಿದ ಕೆಲವು ವೈಯಕ್ತಿಕ ಕಾಮೆಂಟ್‌ಗಳಿಗೆ ಸಂಬಂಧಿಸಿದ ಕೆಲವು ಇತ್ತೀಚಿನ ಮಾಧ್ಯಮ ಲೇಖನಗಳನ್ನು ನಾನು ಓದಿದ್ದೇನೆ. ಕರ್ನಾಟಕ ಮತ್ತು ಜನರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುದನ್ನು ನಾನು ಮೊದಲು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಕಾಮೆಂಟ್‌ಗಳು ಯಾರದ್ದಾದರೂ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಮತ್ತು ನಿಮಗೆ ಬೇಷರತ್ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ಮತ್ತು ಇತರ ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ವಾಸ್ತವವಾಗಿ, ಭಾಷಾ ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಎಲ್ಲಾ ಭಾರತೀಯರು ಹೆಮ್ಮೆಪಡಬೇಕಾದ ರಾಷ್ಟ್ರೀಯ ಆಸ್ತಿಯಾಗಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ; ಮತ್ತು ಎಲ್ಲಾ ಭಾರತೀಯರು ಸ್ಥಳೀಯ ಸಾಂಸ್ಕೃತಿಕ ರೂಢಿಗಳನ್ನು ಗೌರವಿಸಬೇಕು ಮತ್ತು ಆಚರಿಸಬೇಕು.
ಬೆಂಗಳೂರಿನ ಭಾರತೀಯ ಸ್ಟಾರ್ಟ್‌ಅಪ್‌ಗಳು ಗೂಗಲ್, ಆಪಲ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಂತಹ ಟ್ರಿಲಿಯನ್ ಡಾಲರ್ ದೈತ್ಯರ ವಿರುದ್ಧ ನಾವು ಸ್ಪರ್ಧಿಸುತ್ತಿದ್ದೇವೆ. ಸಮರ್ಥವಾಗಿ ಸ್ಪರ್ಧಿಸಲು ಈ ಕಂಪನಿಗಳು ಕೋಡಿಂಗ್, ಡಿಸೈನ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ಡೇಟಾ ಸೈನ್ಸಸ್, ಮೆಷಿನ್ ಲರ್ನಿಂಗ್, AI ಮತ್ತು ಅದರಾಚೆಗಿನ ಕ್ಷೇತ್ರಗಳಲ್ಲಿ ಉತ್ತಮ ಕುಶಲತೆ ಹಾಗೂ ಪ್ರಾವೀಣ್ಯತೆ ಹೊಂದಿರುವುದರ ಆಧಾರದ ದೇಶದಲ್ಲಿರುವ ಅತ್ಯುತ್ತಮ ಪ್ರತಿಭೆಗಳಿಗೆ ಅವಕಾಶ ಕೊಡಬೇಕಾಗುತ್ತದೆ. ಇದರ ಮೂಲಕವೇ ಇಂದಿನ ಗ್ಲೋಬಕ್ ವಿಲೇಜ್ ನಲ್ಲಿ ಒಂದು ರಾಷ್ಟ್ರವಾಗಿ ನಾವು ವಿಶ್ವರ್ಜೆಯ ಕಂಪನಿಗಳನ್ನು ಕಟ್ಟಿ ಪೈಪೋಟಿ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ಬೆಂಗಳೂರು ಮತ್ತು ಕರ್ನಾಟಕಕ್ಕೆ ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸಲು ನಾನು ಬಯಸುತ್ತೇನೆ. ಮತ್ತು, ಹೆಚ್ಚು ಸಂವಾದ ಮತ್ತು ಚರ್ಚೆಯೊಂದಿಗೆ ಇದನ್ನು ಸಮರ್ಪಕವಾಗಿ ಸರಿಪಡಿಸೋಣ ಎಂದು ಹೇಳಿದ್ದಾರೆ.
ಅದರ ಲಿಂಕ್ ಇಲ್ಲಿದೆ:-