ಕೊಳತ್ತೂರು ಕ್ಷೇತ್ರದ ಶಾಸಕ ವಿ.ಎಸ್.ಬಾಬು ಗೆಲುವು ಪ್ರಶ್ನಿಸಿ ಎಂ.ಕೆ. ಸ್ಟಾಲಿನ್ ಸಲ್ಲಿಸಿದ್ದ ಅರ್ಜಿ ವಜಾ

ಚೆನ್ನೈ : ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ‘ತಮಿಳಗ ವೆಟ್ರಿ ಕಳಗಂ’  ಅಭ್ಯರ್ಥಿ ವಿ.ಎಸ್. ಬಾಬು ಅವರ ಗೆಲುವನ್ನು ಪ್ರಶ್ನಿಸಿ, ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಎಂ.ಕೆ. ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು, ಈ ಅರ್ಜಿಯು ವಿಚಾರಣೆಗೆ ಅರ್ಹವಲ್ಲ ಎಂದು ಅಭಿಪ್ರಾಯಪಟ್ಟು ಅದನ್ನು ವಜಾಗೊಳಿಸಿತು. ಅರ್ಜಿಯು ವಿಚಾರಣೆಗೆ ಅರ್ಹವಾಗಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ ನ್ಯಾಯಾಲಯವು ಸೋಮವಾರವಷ್ಟೇ ಸೂಚಿಸಿತ್ತು.

ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ‘ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್’  ಸ್ಲಿಪ್‌ಗಳನ್ನು ಶೇಕಡಾ 100ರಷ್ಟು ಎಣಿಕೆ ಮಾಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸ್ಟಾಲಿನ್ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೆ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಲಿ ಬಳಸಲಾದ ಎಲ್ಲಾ 286 ಯಂತ್ರಗಳನ್ನು ಪರಿಶೀಲಿಸಿ ದೃಢೀಕರಿಸುವಂತೆಯೂ ಅವರು ಕೋರಿದ್ದರು.

ಮೇ 7 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ಕೆಲವೇ ದಿನಗಳಲ್ಲಿ, 14 ಇವಿಎಂ ಗಳಲ್ಲಿನ ‘ಬರ್ನ್ಟ್ ಮೆಮೊರಿ ಅಥವಾ ಮೈಕ್ರೋಕಂಟ್ರೋಲರ್‌ನಲ್ಲಿ ಯಾವುದೇ ರೀತಿಯ ಅಕ್ರಮ ಬದಲಾವಣೆ ಅಥವಾ ತಿರುಚುವಿಕೆ ನಡೆದಿದೆಯೇ ಎಂದು ಪತ್ತೆಹಚ್ಚಲು, ಅಗತ್ಯ ಶುಲ್ಕದೊಂದಿಗೆ ತಾವು ಅರ್ಜಿಯನ್ನು ಸಲ್ಲಿಸಿದ್ದಾಗಿ ಸ್ಟಾಲಿನ್ ನ್ಯಾಯಾಲಯಕ್ಕೆ ತಿಳಿಸಿದರು.

More articles

Latest article

Most read