ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಆದೇಶಿಸಿದೆ, ಜಿಲ್ಲಾವಾರು ಹಂಚಿಕೆಯನ್ನು ಮಾಡಿದೆ.
ಈ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಚಿತ್ರದುರ್ಗ, ವಿಜಯಪುರ, ಚಾಮರಾಜನಗರ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಇವರಿಗೆ ಪತ್ರವನ್ನು ಬರೆಯಲಾಗಿದೆ.
“ರಾಜ್ಯದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಗಣನೀಯ ಮಟ್ಟದಲ್ಲಿ ಲಿಪಿಕ ವೃಂದದ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಈ ಹಿಂದೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.”
ಆರ್ಥಿಕ ಇಲಾಖೆಯು ದಿನಾಂಕ 02/11/2023ರ ಪತ್ರದಲ್ಲಿ 100 ಪ್ರಥಮ ದರ್ಜೆ ಸಹಾಯಕ ಹಾಗೂ 200 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿ ಮುಖೇನ ಭರ್ತಿ ಮಾಡಲು ಸಹಮತಿ ನೀಡಿದ್ದು, ಈ ಹುದ್ದೆಗಳನ್ನು ಜಿಲ್ಲಾ ಪಂಚಾಯತಿಯಲ್ಲಿ ನೇರ ನೇಮಕಾತಿ ಕೋಟಾದಡಿ ಮಂಜೂರಾದ/ ಖಾಲಿ ಇರುವ ಹುದ್ದೆಗಳ ಆಧಾರದಲ್ಲಿ ಹಂಚಿಕೆ ಮಾಡಲಾಗಿರುತ್ತದೆ ಎಂದು ಆದೇಶ ತಿಳಿಸಿದೆ.
ಹುದ್ದೆಗಳ ಸಂಖ್ಯೆ
ಪ್ರಥಮ ದರ್ಜೆ ಸಹಾಯಕ 100
ದ್ವಿತೀಯ ದರ್ಜೆ ಸಹಾಯಕ 200
ಜಿಲ್ಲಾವಾರು ವಿವರ:
ಬಾಗಲಕೋಟೆ ಪ್ರ.ದ.ಸ 1 ಹಾಗೂ ದ್ವಿ.ದ.ಸ 6.
ಬೆಂಗಳೂರು ಗ್ರಾಮಾಂತರ ಪ್ರ.ದ.ಸ 0 ಹಾಗೂ ದ್ವಿ.ದ.ಸ 3.
ಬೆಂಗಳೂರು ನಗರ ಪ್ರ.ದ.ಸ 1 ಹಾಗೂ ದ್ವಿ.ದ.ಸ 5.
ದಕ್ಷಿಣ ಕನ್ನಡ ಪ್ರ.ದ.ಸ 6 ಹಾಗೂ ದ್ವಿ.ದ.ಸ 13.
ಬೆಳಗಾವಿ ಪ್ರ.ದ.ಸ 1 ಹಾಗೂ ದ್ವಿ.ದ.ಸ 4.
ಚಿಕ್ಕಮಗಳೂರು ಪ್ರ.ದ.ಸ 6 ಹಾಗೂ ದ್ವಿ.ದ.ಸ 13.
ಚಿತ್ರದುರ್ಗ ಪ್ರ.ದ.ಸ 4 ಹಾಗೂ ದ್ವಿ.ದ.ಸ 4.
ವಿಜಯಪುರ ಪ್ರ.ದ.ಸ 4 ಹಾಗೂ ದ್ವಿ.ದ.ಸ 13.
ಚಾಮರಾಜನಗರ ಪ್ರ.ದ.ಸ 4 ಹಾಗೂ ದ್ವಿ.ದ.ಸ 9.
ದಾವಣಗೆರೆ ಪ್ರ.ದ.ಸ 2 ಹಾಗೂ ದ್ವಿ.ದ.ಸ 7.
ಧಾರವಾಡ ಪ್ರ.ದ.ಸ 1 ಹಾಗೂ ದ್ವಿ.ದ.ಸ 7.
ಗದಗ ಪ್ರ.ದ.ಸ 4 ಹಾಗೂ ದ್ವಿ.ದ.ಸ 10.
ಹಾಸನ ಪ್ರ.ದ.ಸ 4 ಹಾಗೂ ದ್ವಿ.ದ.ಸ 16.
ಹಾವೇರಿ ಪ್ರ.ದ.ಸ 7 ಹಾಗೂ ದ್ವಿ.ದ.ಸ 10.
ಕೊಡಗು ಪ್ರ.ದ.ಸ 4 ಹಾಗೂ ದ್ವಿ.ದ.ಸ 7.
ಕೋಲಾರ ಪ್ರ.ದ.ಸ 4 ಹಾಗೂ ದ್ವಿ.ದ.ಸ 6.
ಮಂಡ್ಯ ಪ್ರ.ದ.ಸ 4 ಹಾಗೂ ದ್ವಿ.ದ.ಸ 9.
ಮೈಸೂರು ಪ್ರ.ದ.ಸ 4 ಹಾಗೂ ದ್ವಿ.ದ.ಸ 9.
ಶಿವಮೊಗ್ಗ ಪ್ರ.ದ.ಸ 7 ಹಾಗೂ ದ್ವಿ.ದ.ಸ 9.
ತುಮಕೂರು ಪ್ರ.ದ.ಸ 7 ಹಾಗೂ ದ್ವಿ.ದ.ಸ 12.
ಉಡುಪಿ ಪ್ರ.ದ.ಸ 4 ಹಾಗೂ ದ್ವಿ.ದ.ಸ 9.
ಚಿಕ್ಕಬಳ್ಳಾಪುರ ಪ್ರ.ದ.ಸ 4 ಹಾಗೂ ದ್ವಿ.ದ.ಸ 5.
ರಾಮನಗರ ಪ್ರ.ದ.ಸ 6 ಹಾಗೂ ದ್ವಿ.ದ.ಸ 3.
ಉತ್ತರ ಕನ್ನಡ ಪ್ರ.ದ.ಸ 11 ಹಾಗೂ ದ್ವಿ.ದ.ಸ 11.