ತನಗೆ ಒಲಿದ ಕೆ ಪಿ ಸಿ ಸಿ ಕಾರ್ಯದರ್ಶಿ ಹುದ್ದೆಯ ಬಳಿಕ ಈ ಬಾರಿ ಲೋಕಸಭಾ ಚುನಾವಣಾ ಅಭ್ಯರ್ಥಿ ಯಾಗಿ ಆಯ್ಕೆ ಆದಾಗ ಸರಿ ಎಂದು ಒಪ್ಪಿ, ಉಳ್ಳಾಲ ಶ್ರೀನಿವಾಸ ಮಲ್ಯರಂತಹ, ಜನಾರ್ದನ ಪೂಜಾರಿ ಅವರಂತಹ ಪಕ್ಷದ ಹಿರಿಯರ ಜನ ಸೇವೆಯ ಪರಂಪರೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯ ಬೇಕು ಎಂಬ ಸಂಕಲ್ಪದಿಂದ ದ. ಕ. ಕ್ಷೇತ್ರದ ಮತದಾರರ ಸಂಪೂರ್ಣ ಬೆಂಬಲದ ನಿರೀಕ್ಷೆ ಯಲ್ಲಿದ್ದಾರೆ ಸಮನ್ವಯ ನಾಡಿನ ಕನಸಿನ ದಕ್ಷ ಉತ್ಸಾಹೀ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ – ಮುದ್ದು ಮೂಡುಬೆಳ್ಳೆ, ಸಾಹಿತಿಗಳು.
ಸದಾ ನಗುಮುಖದ ಉತ್ಸಾಹೀ, 52 ರ ಹರೆಯದ ಮಂಗಳೂರಿನ ಸಮಾಜಮುಖಿ ನ್ಯಾಯವಾದಿ ಶ್ರೀ ಪದ್ಮರಾಜ್ ಆರ್. ಪೂಜಾರಿ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರ ಚುನಾವಣಾ ಅಜೆಂಡಾಗಳು ಸರಳ ಹಾಗೂ ವಸ್ತುನಿಷ್ಟವಾಗಿರುವುದು ಗಮನ ಸೆಳೆದಿವೆ. ಅವು ಕೆಲವರಂತೆ ಕಾರ್ಯಸಾಧ್ಯವಲ್ಲದ ಉದ್ದುದ್ದ ಬಾಯಿಬಡುಕ ತನದ್ದಲ್ಲ. ಬದಲಾಗಿ ಈ ಲೋಕಸಭಾ ಕ್ಷೇತ್ರ ವನ್ನು ಮೂಲ ಪರಂಪರೆಯ ಸಾಮರಸ್ಯದ, ಸಹೋದರತ್ವದ ನಾಡಾಗಿ ಪರಿವರ್ತಿಸಲು ಶ್ರಮಿಸುವೆ” ಎಂಬ ಮಾನವೀಯ ಹಂಬಲ ಪದ್ಮರಾಜ್ ರದು.
ಕಡಲ ತೀರದ ತುಳುನಾಡಿನ ಈ ಜಿಲ್ಲೆಯ ಚರಿತ್ರೆಯನ್ನು ಅವಲೋಕಿಸಿದರೆ ಕಳೆದ ಶತಮಾನದ ಕಾಲಘಟ್ಟದಲ್ಲಿ ಜಾತಿ ತಾರತಮ್ಯ, ಶೈಕ್ಷಣಿಕ ಸಾಮಾಜಿಕ, ಧಾರ್ಮಿಕ ಅಸಮಾನತೆಯಿಂದ ಕಂಗೆಟ್ಟಿದ್ದ ಈ ನೆಲಕ್ಕೆ 1908 ರಲ್ಲಿ ಸಮಾನತೆಯ ಹರಿಕಾರ ಸಂತ ಶ್ರೀ ನಾರಾಯಣಗುರು ಭೇಟಿ ನೀಡಿ, 1912 ರಲ್ಲಿ ಸರ್ವ ಸಮಾನತಾ ನೆಲೆಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಉದ್ಘಾಟಿಸಿ ಹೋದದ್ದೊಂದು ಹೊಸ ಬೆಳಕಾಗಿತ್ತು. ಅದೇ ಮಾದರಿಯಲ್ಲಿ ನಡೆದುಕೊಂಡು ಬಂದ ಗೋಕರ್ಣನಾಥ ಕ್ಷೇತ್ರದ ವಿಶ್ವಸ್ತರಾಗಿ 28 ವರ್ಷಗಳ ಹಿಂದೆ ಸೇರಿದ್ದ ಕಿರಿಯ ವಯಸ್ಸಿನ ಪದ್ಮರಾಜ್, ಕ್ಷೇತ್ರದ ಪರಂಪರೆ ಮತ್ತು ಆಡಳಿತ ಮಂಡಳಿ ಹಿರಿಯರ ಮಾರ್ಗದರ್ಶನ ಪಡೆದು ಕ್ಷೇತ್ರದ ಆಗುಹೋಗುಗಳು, ವಾರ್ಷಿಕ ದಸರಾ ಮಹೋತ್ಸವ ಮುಂತಾಗಿ ತನಗೆ ಒದಗಿದ ಜವಾಬ್ದಾರಿ ಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಯಶಸ್ವಿಯಾದವರು.
ನ್ಯಾಯವಾದಿಯಾಗಿ ಸಂವಿಧಾನದ ಘನತೆಯನ್ನು ಅರಿತು ವ್ಯವಹರಿಸುವ ಪ್ರಜ್ಞೆ ಯೊಂದಿಗೆ ಜನಸಾಮಾನ್ಯರ ಜೊತೆಗೆ ಬೆರೆಯುತ್ತಾ, ಈ ಜಿಲ್ಲೆಯ ಎಲ್ಲ ಮತ ಧರ್ಮಗಳ ವೈವಿಧ್ಯಮಯ ಧಾರ್ಮಿಕತೆ, ಕಲೆ, ಶೈಕ್ಷಣಿಕ, ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಬಂದವರು. ಕೊರೋನಾ ಮಹಾಮಾರಿಯ ಸಂಕಷ್ಟದ 40 ದಿನಗಳ ಲಾಕ್ ಡೌನ್ ಸಂದರ್ಭದಲ್ಲಿ ” ಗುರು ಬೆಳದಿಂಗಳು ” ಎಂಬ ತನ್ನ ಸಂಘಟನೆಯ ಮೂಲಕ ನೊಂದವರಿಗೆ ಆಹಾರ, ವೈದ್ಯಕೀಯ ನೆರವು, ಮನೆ ಆಸರೆ, ತುರ್ತು ಸಹಾಯ, ಮದುವೆ ಗೆ ನೆರವು, ಆಯ್ದ ಶೈಕ್ಷಣಿಕ ಸಂಸ್ಥೆಗಳಿಗೆ ನೆರವು ಮುಂತಾಗಿ ಎಡೆಬಿಡದೆ ಸದ್ದಿಲ್ಲದೆ ತನ್ನ ತಂಡ ಮುನ್ನಡೆಸಿ ದುಡಿದವರು. ಕಳೆದ ವರ್ಷ ಮಂಗಳೂರಿನ ಕುಕ್ಕರ್ ಬಾಂಬ್ ದುರಂತ ಸಂದರ್ಭ ಅಸಹಾಯಕತೆಯಲ್ಲಿದ್ದ ಸಂತ್ರಸ್ತ ವ್ಯಕ್ತಿ ಯ ಬಳಿಗೆ ಹೋಗಿ ಆಸರೆ ಯಾದವರು ಇದೇ ಪದ್ಮರಾಜ್.
ಲಲಿತಾ -ರಾಮಯ್ಯ ದಂಪತಿಯ ಪುತ್ರ ಪದ್ಮರಾಜ್ ಪೂಜಾರಿ ಯವರು ಮಡಂತ್ಯಾರಿನಲ್ಲಿ (ಬಿ ಎ ) ಪದವಿ ಶಿಕ್ಷಣ, ಮಂಗಳೂರು ಎಸ್ ಡಿ ಎಂ ಲಾ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದು 1995 ರಿಂದ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಕೈಕೆಳಗೆ ವಕೀಲ ವೃತ್ತಿ ತರಬೇತಿ ಪಡೆದು ನ್ಯಾಯವಾದಿ ಯಾಗಿ ಮಂಗಳೂರಿನಲ್ಲಿ ವಕಾಲತ್ತು ಆರಂಭಿಸಿದವರು.
ಒಂದು ವರ್ಷದ ಹಿಂದೆಯೇ ಚುನಾವಣಾ ಸೀಟ್ ಆಫರ್ ಬಂದಿತ್ತು. ರಾಜಕೀಯ ದಲ್ಲಿ ಆಸಕ್ತಿ ಇರಲಿಲ್ಲ. ಆದರೆ ಗುರುವಿನ ಇಚ್ಛೆ ಇರಬಹುದು ಎಂದು ಒಲಿದ ಕೆ ಪಿ ಸಿ ಸಿ ಕಾರ್ಯದರ್ಶಿ ಹುದ್ದೆಯ ಬಳಿಕ ಈ ಬಾರಿ ಲೋಕಸಭಾ ಚುನಾವಣಾ ಅಭ್ಯರ್ಥಿ ಯಾಗಿ ಆಯ್ಕೆ ಆದಾಗ ಸರಿ ಎಂದು ಒಪ್ಪಿ, ಉಳ್ಳಾಲ ಶ್ರೀನಿವಾಸ ಮಲ್ಯ ರಂತಹ, ಜನಾರ್ದನ ಪೂಜಾರಿ ಯವರಂತಹ ಪಕ್ಷ ದ ಹಿರಿಯರ ಜನ ಸೇವೆಯ ಪರಂಪರೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯ ಬೇಕು ಎಂಬ ಸಂಕಲ್ಪ ದಿಂದ ದ. ಕ. ಕ್ಷೇತ್ರದ ಮತದಾರರ ಸಂಪೂರ್ಣ ಬೆಂಬಲದ ನಿರೀಕ್ಷೆ ಯಲ್ಲಿದ್ದಾರೆ ಸಮನ್ವಯ ನಾಡಿನ ಕನಸಿನ ದಕ್ಷ ಉತ್ಸಾಹೀ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ.
ಮುದ್ದು ಮೂಡುಬೆಳ್ಳೆ
ಸಾಹಿತಿಗಳು
ಇದನ್ನೂ ಓದಿ-http://“ಬಿಲ್ಲವರು ಕೊಲ್ಲುವವರೂ, ಕೊಲ್ಲಲ್ಪಡುವವರೂ ಅಲ್ಲ. ಈ ನೆಲವನ್ನು ಆಳುವವರು” https://kannadaplanet.com/billavas-are-the-rulers-of-this-land/