Sunday, September 8, 2024

ರಾಜ್ಯದ ಸೋಮಣ್ಣ ಸೇರಿದಂತೆ 132 ಸಾಧಕರಿಗೆ ಪದ್ಮ ಪ್ರಶಸ್ತಿ

Most read

ಕೇಂದ್ರ ಸರ್ಕಾರವು ಕೊಡಮಾಡುವ ಅತ್ಯುನ್ನತ ನಾಗರೀಕ ಸೇವಾ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣ ಹಾಗು ಪದ್ಮ ಶ್ರೀ ಗಳನ್ನು ಘೋಷಣೆಮಾಡಿದೆ. ಪುರಸ್ಕೃತರ ಹೆಸರುಗಳನ್ನು ಗುರುವಾರ ರಾತ್ರಿ ಬಿಡುಗಡೆಮಾಡಿದ್ದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಆಯ್ಕೆ ಮಾಡಲಾಗಿದೆ.

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರಧಾನ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಮಂದಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಹಾಗು 110 ಮಂದಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಉದ್ಯಮಿ ಸೀತಾರಾಮ್ ಜಿಂದಾಲ್ ಸೇರಿದಂತೆ ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ ದೊರೆತಿದ್ದು, 25 ಸಾವಿರ ಜನರಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಮಾಡಿರುವ ಪ್ರೇಮಾ ಧನರಾಜ್, ಮೈಸೂರಿನ ಜೇನುಕುರುಬ ಹಾಡಿಯ ಸೋಮಣ್ಣ, ಕಾಸರಗೋಡಿನ ಭತ್ತದ ರೈತ ಸತ್ಯನಾರಾಯಣ ಬೇಲೇರಿ ಹಾಗೂ  ರೋಹನ್ ಬೋಪಣ್ಣ ಸೇರಿದಂತೆ 7 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಈ ಬಾರಿಯ ಪ್ರಶಸ್ತಿ ಪುರಸ್ಕೃತರಲ್ಲಿ, 30 ಮಹಿಳೆಯರು ಮತ್ತು ವಿದೇಶಿ/NRI ವರ್ಗದಿಂದ 8 ವ್ಯಕ್ತಿಗಳು ಮತ್ತು 9 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.

2024ರ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು

ವೈಜಯಂತಿಮಾಲಾ ಬಾಲಿ (ಕಲೆ) – ತಮಿಳುನಾಡು

ಕೊನಿಡೆಲಾ ಚಿರಂಜೀವಿ (ಕಲೆ) – ಆಂಧ್ರ ಪ್ರದೇಶ

ಎಂ ವೆಂಕಯ್ಯ ನಾಯ್ಡು (ಸಾರ್ವಜನಿಕ ವ್ಯವಹಾರಗಳು) – ಆಂಧ್ರ ಪ್ರದೇಶ

ಬಿಂದೇಶ್ವರ ಪಾಠಕ್ (ಸಮಾಜ ಕೆಲಸ) – ಬಿಹಾರ

ಪದ್ಮಾ ಸುಬ್ರಮಣ್ಯಂ (ಕಲೆ) – ತಮಿಳುನಾಡು

2024ರ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು

ಎಂ ಫಾತಿಮಾ ಬೀವಿ (ಸಾರ್ವಜನಿಕ ವ್ಯವಹಾರಗಳು) – ಕೇರಳ

ಹೊರ್ಮುಸ್ಜಿ ಎನ್ ಕಾಮಾ (ಸಾಹಿತ್ಯ ಮತ್ತು ಶಿಕ್ಷಣ) – ಮಹಾರಾಷ್ಟ್ರ

ಮಿಥುನ್ ಚಕ್ರವರ್ತಿ (ಕಲೆ) – ಪಶ್ಚಿಮ ಬಂಗಾಳ

ಸೀತಾರಾಮ್ ಜಿಂದಾಲ್ (ವ್ಯಾಪಾರ ಮತ್ತು ಕೈಗಾರಿಕೆ) – ಕರ್ನಾಟಕ

ಯುವ ಲಿಯು (ವ್ಯಾಪಾರ ಮತ್ತು ಕೈಗಾರಿಕೆ) – ತೈವಾನ್

ಅಶ್ವಿನ್ ಬಾಲ್ಚಂದ್ ಮೆಹ್ತಾ (ಔಷಧ) – ಮಹಾರಾಷ್ಟ್ರ

ಸತ್ಯಬ್ರತ ಮುಖರ್ಜಿ (ಸಾರ್ವಜನಿಕ ವ್ಯವಹಾರಗಳು) – ಪಶ್ಚಿಮ ಬಂಗಾಳ

ರಾಮ್ ನಾಯಕ್ (ಸಾರ್ವಜನಿಕ ವ್ಯವಹಾರಗಳು) – ಮಹಾರಾಷ್ಟ್ರ

ತೇಜಸ್ ಮಧುಸೂದನ್ ಪಟೇಲ್ (ವೈದ್ಯಕೀಯ) – ಗುಜರಾತ್

ಓಲಂಚೇರಿ ರಾಜಗೋಪಾಲ್ (ಸಾರ್ವಜನಿಕ ವ್ಯವಹಾರಗಳು) – ಕೇರಳ

ದತ್ತಾತ್ರೇಯ ಅಂಬಾದಾಸ್ ಮಾಯಾಲು ಅಲಿಯಾಸ್ ರಾಜ್ದತ್ (ಕಲೆ) – ಮಹಾರಾಷ್ಟ್ರ

ಟೊಗ್ಡಾನ್ ರಿಂಪೋಚೆ (ಇತರೆ – ಆಧ್ಯಾತ್ಮಿಕತೆ) – ಲಡಾಖ್

ಪ್ಯಾರೇಲಾಲ್ ಶರ್ಮಾ (ಕಲೆ) – ಮಹಾರಾಷ್ಟ್ರ

ಚಂದ್ರೇಶ್ವರ ಪ್ರಸಾದ್ ಠಾಕೂರ್ (ವೈದ್ಯಕೀಯ)-ಬಿಹಾರ

ಉಷಾ ಉತ್ತುಪ್ (ಕಲೆ) – ಪಶ್ಚಿಮ ಬಂಗಾಳ

ವಿಜಯಕಾಂತ್ (ಕಲೆ) – ತಮಿಳುನಾಡು

ಕುಂದನ್ ವ್ಯಾಸ್ (ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ)-ಮಹಾರಾಷ್ಟ್ರ

More articles

Latest article