ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಕಮಲ್‌ ಹಾಸನ್‌ ಹೇಳಿಕೆಗೆ ಆಕ್ರೋಶ; ಕನ್ನಡ ಸ್ವತಂತ್ರ ಭಾಷೆ ಎಂದ ಕನ್ನಡಿಗರು

Most read

ಬೆಂಗಳೂರು: ಖ್ಯಾತ ಚಿತ್ರನಟ ಕಮಲ್ ಹಾಸನ್ ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ತಮ್ಮ ನಟನೆಯ ಥಗ್ ಲೈಫ್ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮದಲ್ಲಿ ಈ ಮಾತುಗಳನಾಡಿದ್ದಾರೆ. ಚೆನ್ನೈ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜಕುಮಾರ್ ಅವರೂ ಭಾಗಿಯಾಗಿದ್ದರು. ಶಿವರಾಜ್ಕುಮಾರ್ ಅವರನ್ನು ಉದ್ದೇಶಿಸಿಯೇ ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಕಮಲ್‌ ಹಾಸನ್ ಹೇಳಿದ್ದಾರೆ. ಜತೆಗೆ ಕನ್ನಡಿಗರ ಪ್ರೀತಿ, ಗೌರವಕ್ಕೆ ವಂದಿಸುತ್ತೇನೆ ಎಂದೂ ಹೇಳಿದ್ದಾರೆ.

ಕಮಲ್ ಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಸಾಮಾಜಿಕ ಜಾಲತಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ‘ರಾಜ ಪಾರ್ವೈ’ ಚಿತ್ರಕ್ಕೆ ಕ್ಲಾಪ್ ಮಾಡಿ ರಾಜ್ಕುಮಾರ್ ಅವರು ಶುಭ ಕೋರಿದ್ದರು. ಬಳಿಕ ಬೆಂಗಳೂರಿನಲ್ಲಿ ‘ಪುಷ್ಪಕ ವಿಮಾನ’ ಸಿನಿಮಾ ಆರಂಭಿಸಿದಾಗಲೂ ಅವರೇ ಕ್ಲಾಪ್ ಮಾಡಿದ್ದರು. ಇಂದು ಅವರ ಪುತ್ರ ಶಿವಣ್ಣ ಇಲ್ಲಿ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದು ನಿಮ್ಮ ಭಾಷೆ(ಕನ್ನಡ). ಹಾಗಾಗಿ ನೀವು ಅದರಲ್ಲಿ ಒಂದು ಎಂದು ಕಮಲ್ ಹಾಸನ್ ಹೇಳಿದ್ದಾರೆ.

ರಾಜಕುಮಾರ್ ಅವರ ಕುಟುಂಬದ ಮೇಲಿನ ಕಮಲ್ ಹಾಸನ್ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವುದರ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಕನ್ನಡಕ್ಕೆ ತಮಿಳು ಮೂಲ ಅಲ್ಲ. ತಮಿಳಿಗಿಂತಲೂ ಕನ್ನಡ ಬಹಳ ಹಳೆಯ ಭಾಷೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಮಲ್ ಹೇಳಿಕೆ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದೆ.

More articles

Latest article