Saturday, July 27, 2024

OPS ಹಕ್ಕೊತ್ತಾಯ : H C ಮಹದೇವಪ್ಪ ಸೇರಿದಂತೆ ಹಲವು ಸಚಿವರುಗಳಿಗೆ ಮನವಿ

Most read

ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ  ಮಹಾತ್ಮಗಾಂಧಿ, ಅಂಬೇಡ್ಕರ್, ಬಸವ, ಇತರೆ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ಎದುರು OPS ಹಕ್ಕೊತ್ತಾಯದ ಚಿಂತನಾ ಸಭೆ ನಡೆಸಲಾಗಿದೆ.

2006ರ ನಂತರ ಸರಕಾರಿ ಕೆಲಸಕ್ಕೆ ನೇಮಕವಾದ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘವು ರಾಜ್ಯದ ಹಲವು ಕಡೆ ಇಂದು ಶಾಸಕರಿಗೆ ಮತ್ತು ಸಚಿವರುಗಳಿಗೆ ಮನವಿ ಕೊಟ್ಟಿದ್ದಾರೆ.

ಉಡುಪಿಯಲ್ಲಿ ಸಮಾಜಕಲ್ಯಾಣ ಇಲಾಖೆಯ ಸಚಿವರಾಗಿರುವ H C ಮಹಾದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ  ಜಯಪ್ರಕಾಶ್ ಹೆಗ್ಡೆ ಹಾಗು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಕಿರಣ್ ಕುಮಾರ್ ಕೊಡ್ಗಿ ಹೀಗೆ ರಾಜ್ಯದ ಹಲವು ಕಡೆ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟು ಹಳೆಯ ಪಿಂಚಣಿಯನ್ನು ಜಾರಿಗೆ ತರಲು ಒತ್ತಾಯ ಮಾಡಿದರು.

OPS ಹಕ್ಕೊತ್ತಾಯದ ಹೋರಾಟ ಸುಮಾರು 10 ವರ್ಷಗಳಿಂದಲೂ ನಡೆಯುತ್ತಿದೆ. ಈಗಾಗಲೇ ಹಲವು ಹೋರಾಟಗಳ ನಂತರ ರಾಜಸ್ತಾನ, ಪಂಜಾಬ್, ಜಾರ್ಖಾಂಡ್, ಛತ್ತೀಸಗಡ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಎಸ್ ಪಿ ಎಸ್ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಮಾಡಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ 2 ಲಕ್ಷ 65ಸಾವಿರ ನೌಕರರು ಎನ್ ಪಿ ಎಸ್ ರದ್ದತಿಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 14 ರಿಂದ ಜನವರಿ 21ರ ತನಕ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗಿತ್ತು. ಕರ್ನಾಟಕ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೇ ಹಳೆ ಪಿಂಚಣಿಯನ್ನು ಜಾರಿಗೊಳಿಸುತ್ತೇವೆ ಎಂದಿದ್ದರು ಎಂದು ಎನ್ ಪಿ ಎಸ್ ನೌಕರರು ಹೇಳಿದರು.

NPS ರದ್ದು ಮಾಡಿ OPS ಜಾರಿ ಮಾಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ಚುನಾವಣಾ ಪೂರ್ವದಲ್ಲಿ NPS ನೌಕರರು ಶಾಂತಾರಾಂ ಅವರ ನಾಯಕತ್ವದಲ್ಲಿ ಬೃಹತ್ ಹೋರಾಟ ನಡೆಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ OPS ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದರು. ಸರ್ಕಾರ ರಚನೆಯಾಗಿ ಆರು ತಿಂಗಳಾದರೂ OPS ಜಾರಿಯಾಗದ ಹಿನ್ನೆಲೆಯಲ್ಲಿ ನೌಕರರು ಮತ್ತೆ ಶಾಂತಾರಾಂ ನೇತೃತ್ವದಲ್ಲಿ ಹಕ್ಕೊತ್ತಾಯ ಮುಂದಿಟ್ಟಿದ್ದಾರೆ.

More articles

Latest article