ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆತದ ಪ್ರಕರಣದ ನಂತರ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ಮತ್ತೊಬ್ಬ ವಕೀಲ ತಿರುಗಿ ಬಿದ್ದಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್ ಹೈಕೋರ್ಟಿನ ವಕೀಲರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಮಿಶ್ರ. ಗ್ವಾಲಿಯರ್ ನ್ಯಾಯಾಲಯದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಮಿಶ್ರ ನೇತೃತ್ವದಲ್ಲಿ ಕಳೆದ ಹಲವಾರು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಇದು ಅಂಬೇಡ್ಕರ್ ಮತ್ತು ಸಂವಿಧಾನದ ವಿರುದ್ಧ ಬಿಜೆಪಿ ಬೆಂಬಲಿತ ಸನಾತನಿ ಉಗ್ರರ ವ್ಯವಸ್ಥಿತ ದಾಳಿ ಎಂದೇ ಬಣ್ಣಿಸಲಾಗುತ್ತಿದೆ.
ಅನಿಲ್ ಮಿಶ್ರ ಎಂಬಾತ “….ಅಂಬೇಡ್ಕರ್ ಕೊಳಕು ಮನುಷ್ಯ. ಸುಳ್ಳುಗಾರ . ಬ್ರಿಟಿಷ್ ಎಜೇಂಟ್,. ಯಾವ ಕಾರಣಕ್ಕೂ ಗ್ವಾಲಿಯರ ಹೈಕೋರ್ಟಿನ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಬಿಡುವುದಿಲ್ಲ. ಇವತ್ತು ಸವರ್ಣೀಯರ ಮೇಲೆ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಅನ್ಯಾಯಗಳಿಗೆ ರಕ್ತಪಾತಗಳಿಗೆ ಅಂಬೇಡ್ಕರ್ ಕಾರಣ. ಸಂವಿಧಾನ ಬರೆದದ್ದು ಬಿ.ಎನ್. ರಾವ್. ಅವರು. ಅಂಬೇಡ್ಕರ್ ಅಲ್ಲ. ಅಂಬೇಡ್ಕರ್ ಅನ್ನು ಕಿತ್ತು ಹಾಕಿ ಬಿ.ಎನ್ ರಾವ್ ಅವರನ್ನು ಸ್ಥಾಪಿಸುತ್ತೇವೆ. ನಾನು ಯಾವ ಕೇಸುಗಳಿಗೂ ಹೆದರುವುದಿಲ್ಲ” ಎಂದು ಹೇಳಿಕೆ ನೀಡಿದ್ದಾನೆ.
ಮುಖ್ಯ ನ್ಯಾಯಾಧೀಶ ಗವಾಯಿ ಅವರ ಮೇಲೆ ಮತ್ತೊಬ್ಬ ಸವರ್ಣೀಯ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ದಿನವೇ ಗ್ವಾಲಿಯರ್ ನಲ್ಲಿ ಈತ ಈ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಮಿಶ್ರ ವಿರುದ್ಧ ಈಗಾಗಲೇ ಹಲವಾರು ಎಫ್ ಐಆರ್ ಗಳು ದಾಖಲಾಗಿವೆ. ಆದರೆ ಮಧ್ಯಪ್ರದೇಶದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಆತ ಶಿಕ್ಷೆಯಿಂದ ಪಾರಾಗುತ್ತಿದ್ದಾನೆ.
ಇದು ಸವರ್ಣೀಯ ಸನಾತನಿ ಉಗ್ರರು ಬಿಜೆಪಿ ಸರ್ಕಾರಗಳ ಬೆಂಬಲದೊಂದಿಗೆ ಅಂಬೇಡ್ಕರ್ , ಸಂವಿಧಾನ ಮತ್ತು . ಸಾಮಾಜಿಕ ನ್ಯಾಯದ ನಡೆಸಿರುವ ವ್ಯವಸ್ಥಿತ ದಾಳಿ. ಇದನ್ನು ಅಷ್ಟೇ ತೀವ್ರವಾಗಿ ಮತ್ತು ಒಗ್ಗಟ್ಟಿನಿಂದ ಹಿಮ್ಮೆಟ್ಟಿಸಲೇ ಬೇಕು ಎಂದು ಪ್ರಜ್ಞಾವಂತರು ಮನವಿ ಮಾಡಿಕೊಂಡಿದ್ದಾರೆ.