11, ಎಪ್ರಿಲ್ 2025ಕ್ಕೆ ಬಿಡುಗಡೆಯಾಗಬೇಕಿದ್ದ ‘ಫುಲೆ’ ಹಿಂದಿ ಸಿನೆಮಾಗೆ ಬ್ರಾಹ್ಮಣರು, ಸಂಘಿಗಳು ಆಕ್ಷೇಪಣೆ ವ್ಯಕ್ತಪಡಿಸಿದ ಕಾರಣ ಬಿಡುಗಡೆ ಎಪ್ರಿಲ್ 25ಕ್ಕೆ ಮುಂದಕ್ಕೆ ಹೋಗಿದೆ.
ಈ ಮನುವಾದಿ, ಜಾತಿವಾದಿಗಳ ಒತ್ತಡಕ್ಕೆ ಮಣಿದ ಸೆನ್ಸಾರ್ ಬೋರ್ಡಿನವರು 12 ಬದಲಾವಣೆಗಳನ್ನು ಸೂಚಿಸಿದ್ದಾರೆ.
(ಬೋರ್ಡಿನ ಮುಖ್ಯ ಸದಸ್ಯರು: ವಿದ್ಯಾ ಬಾಲನ್, ವಿವೇಕ್ ಅಗ್ನಿಹೋತ್ರಿ, ನಾಗಾಭರಣ, ವಾಮನ ಕೇಂದ್ರೆ, ಜೀವಿತ ರಾಜಶೇಖರ್ ಮುಂತಾದವರು)
ಬದಲಾವಣೆಗಳಲ್ಲಿ ಪ್ರಮುಖವಾದವು(ಕನ್ನಡ ಅನುವಾದ)
ಮೂಲ: ಶೂದ್ರರು ಪೊರಕೆ ಕಟ್ಟಿಕೊಂಡು ಅಡ್ಡಾಡಿ ಬೇಕಿದ್ದರೆ..
ಬದಲಾವಣೆ: ಇದರಿಂದ ನಮ್ಮನ್ನು ದೂರವಿಡಬೇಕಾಗಿದೆ…
ಮೂಲ: 3000 ವರ್ಷಗಳ ಗುಲಾಮಗಿರಿ
ಬದಲಾವಣೆ: ಕೆಲವು ವರ್ಷಗಳ ಹಿಂದಿನ…
ಮೂಲ: ಪೇಶ್ವೆಗಳು ಇದ್ದಿದ್ದರೆ ತಲೆ, ಕೈ, ಕಾಲು ಬೇರೆ ಬೇರೆ ಮಾಡುತ್ತಿದ್ದರು…
ಬದಲಾವಣೆ: ನಿಮ್ಮ ಅದೃಷ್ಟ ಚೆನ್ನಾಗಿದೆ… ರಾಜರು ಇದ್ದಿದ್ದರೆ ಕೈ, ಕಾಲು ಬೇರೆ ಬೇರೆ ಮಾಡುತ್ತಿದ್ದರು…
ಮೂಲ: ಮಹರ್, ಮಾಂಗ್..
ಬದಲಾವಣೆ: ಇಂತಹ ಸಣ್ಣ ಸಣ್ಣ… (ಮುಂದಿನ ಪದಗಳು ಕೇಳಿಸುವುದಿಲ್ಲ)
ಮೂಲ: ಮನುವಾದದ ಜಾತಿ ಪದ್ಧತಿ ಮಾತುಗಳು ಇಲ್ಲ..
ಇಲ್ಲಿ ಮುಖ್ಯ ಪ್ರಶ್ನೆಗಳು:
ಬ್ರಾಹ್ಮಣರು ಚಾತುರ್ವರ್ಣ ಪದ್ಧತಿ ಪಾಲಿಸುತ್ತಾರೆ. ಫುಲೆ ದಂಪತಿಗಳ ಕಾಲದಲ್ಲಿ ಬ್ರಾಹ್ಮಣ ಸಮಾಜ ಅವರ ಮೇಲೆ ದೈಹಿಕ ಹಲ್ಲೆ ಮಾಡಿದೆ. ಇದು ಇತಿಹಾಸದಲ್ಲಿ ದಾಖಲಾಗಿದೆ. ಸಿನಿಮಾದಲ್ಲಿ ಇದನ್ನು ವಿರೋಧಿಸುವ ಯಾವುದೇ ಹಕ್ಕು, ನೈತಿಕತೆ ಬ್ರಾಹ್ಮಣರಿಗಿಲ್ಲ.
ಆರೆಸ್ಸೆಸ್ -ಬಿಜೆಪಿಯವರು ಬ್ರಾಹ್ಮಣ – ಬನಿಯಾ ರಾಜಕಾರಣದಿಂದ ಅಧಿಕಾರಕ್ಕಾಗಿ ಇಂದು ಹಿಂದುಳಿದ – ದಲಿತ ರಾಜಕಾರಣಕ್ಕೆ ವಿಸ್ತರಿಸಿಕೊಂಡಿದ್ದಾರೆ.
ಆದರೆ ಫುಲೆ ದಂಪತಿಗಳ ಆಧಾರಿತ ಸಿನೆಮಾವನ್ನು ವಿರೋಧಿಸುತ್ತಾರೆ.
ಯಾವುದೇ ನೈತಿಕತೆ, ಮೌಲ್ಯಗಳಿಲ್ಲದ ಇವರ double standard ಬಯಲಾಗಿದೆ.
ಮುಂದುವರಿದ ಪ್ರಶ್ನೆ:
ಫುಲೆ ಹೋರಾಟದ ಕುರಿತು ಬೆಂಬಲಿಸಿ ಮಾತನಾಡುವ ಪ್ರಜಾಪ್ರಭುತ್ವವಾದಿಗಳು ಈಗ ಮೌನದಿಂದ ಇರಬಾರದಲ್ಲವೇ?
ಚಾತುರ್ವರ್ಣವನ್ನು ಬೆಂಬಲಿಸಿ ‘ಫುಲೆ’ ಸಿನಿಮಾದ ದೃಶ್ಯಗಳಿಗೆ ಮಾಡಿರುವ ಸೆನ್ಸಾರ್ ನ್ನು ಖಡಾಖಂಡಿತವಾಗಿ ವಿರೋಧಿಸಬೇಕಲ್ಲವೇ?
ಇದು ‘ಫುಲೆ’ ಲೆಗಸಿಯನ್ನು ರಕ್ಷಿಸುವ ಹೊಣೆಗಾರಿಕೆಯಲ್ಲವೇ?
(ಕಡೆಗೂ ನಿರ್ದೇಶಕ, ನಿರ್ಮಾಪಕರ ನಿರ್ಧಾರ ಅಂತಿಮ ಎಂದು ಗೊತ್ತಿದ್ದೂ ನಮ್ಮ ಹೊಣೆಗಾರಿಕೆ ಪ್ರಶ್ನೆ ಸಹ ಮುಖ್ಯ ಅಲ್ಲವೇ?)
ಬಿ. ಶ್ರೀಪಾದ ಭಟ್