ಕರ್ನಾಟಕ SSLC ಪರೀಕ್ಷೆ-1 ಫಲಿತಾಂಶ ಇಂದು ಗುರುವಾರ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಶೇಕಡಾ 94ರೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ (92.12%), ಶಿವಮೊಗ್ಗ ತೃತೀಯ ಸ್ಥಾನ (88.67%) ಗಳಿಸಿವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ಎಲ್ಲಾ ಮೂವರು ಟಾಪರ್‌ಗಳು ಹುಡುಗಿಯರಾಗಿದ್ದು, ಅಂಕಿತಾ 625ಕ್ಕೆ 625 ಪಡೆದ ರಾಜ್ಯಕ್ಕೆ ಏಕೈಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮೇಧಾ, ಹರ್ಷಿತಾ 625 ರಲ್ಲಿ ಕ್ರಮವಾಗಿ 624 ಮತ್ತು 624 ಅಂಕಗಳನ್ನು ಗಳಿಸಿದ್ದಾರೆ. ಉತ್ತೀರ್ಣರಾದವರಲ್ಲಿ ಶೇಕಡಾ 81.11 ಹುಡುಗಿಯರು, ಶೇಕಡಾ 65.90 ಹುಡುಗರಾಗಿದ್ದಾರೆ.
ಈ ಬಾರಿಯ ಫಲಿತಾಂಶ ಪ್ರಮಾಣ ಶೇ 73.40 ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು. 2024ರ ಈ ಫಲಿತಾಂಶದಲ್ಲಿ ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಜಿಲ್ಲಾವಾರು ಪಟ್ಟಿ
- ಚಿಕ್ಕಮಗಳೂರು – 83%
- ವಿಜಯಪುರ- 80%
- ಬೆಂಗಳೂರು ದಕ್ಷಿಣ- 79%
- ಬಾಗಲಕೋಟೆ- 78%
- ಬೆಂಗಳೂರು ಉತ್ತರ- 77%
- ಹಾವೇರಿ – 75%
- ತುಮಕೂರು-75%
- ಗದಗ- 74%
- ಚಿಕ್ಕಬಳ್ಳಾಪುರ- 73%
- ಉಡುಪಿ- 94%
- ದಕ್ಷಿಣ ಕನ್ನಡ- 92%
- ಶಿವಮೊಗ್ಗ- 88.67%
- ಕೊಡಗು- 88.67%
- ಉತ್ತರ ಕನ್ನಡ- 86.54%
- ಹಾಸನ- 86.28%
- ಮೈಸೂರು-85.5%
- ಶಿರಸಿ-84.64%
- ಬೆಂಗಳೂರು ಗ್ರಾ- 83.57%