ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ಟಾರ್ಗೆಟ್ ಮಾಡ್ತಿದೆ, ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ಜೆಡಿಎಸ್ ರಾಜ್ಯ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಆದ ಮೇಲೆ ಕಾಂಗ್ರೆಸ್ ನಾಯಕರು ಟಾರ್ಗೆಟ್ ಮಾಡೋದಾದ್ರೆ, ಕುಮಾರಸ್ವಾಮಿ ಅವರನ್ನ ಮಾಡೋಣ ಅಂತ ಮಾಡ್ತಿದ್ದಾರೆ.ಕಾಂಗ್ರೆಸ್ ನವರಿಗೆ ಕುಮಾರಸ್ವಾಮಿ ಅವರ ಬಗ್ಗೆ ಭಯ ಇದೆ ಎಂದು ವಾಗ್ದಾಳಿ ನಡೆಸಿದರು.
ಇದು ಟಾರ್ಗೆಟ್ ರಾಜಕಾರಣ
ಕುಮಾರಸ್ವಾಮಿ ಅವರು ವಾಸ್ತವ ಮಾತಾಡ್ತಾರೆ. ಎಲ್ಲವನ್ನು ಜನರ ಮುಂದೆ ತೆರೆದಿಡುತ್ತಾರೆ.ಇದರಿಂದ ಪಾಪ ಅವರಿಗೆ ಭಯ ಶುರುವಾಗಿದೆ.. ಹೀಗಾಗಿ ಕುಮಾರಸ್ವಾಮಿ ಅವರ ಮೇಲೆ ನಿತ್ಯ ದಾಖಲಾತಿ ಹುಡುಕುತ್ತಿದ್ದಾರೆ. ದಾಖಲಾತಿ ರೆಡಿ ಮಾಡಿ ಅಂತ ಸಿಎಂ, ಡಿಸಿಎಂ, ಸಚಿವ ಸಂಪುಟ ಕುಮಾರಸ್ವಾಮಿ ತೇಜೋವಧೆ ಮಾಡಬೇಕು ಪ್ರಯತ್ನ ಮಾಡ್ತಿದೆ ಎಂದು ಕಿಡಿಕಾರಿದರು.
ಮುಡಾ ಕೇಸ್, ಗಂಗೇನಹಳ್ಳಿ ಕೇಸ್ ಗೂ ಸಂಬಂಧವೇ ಇಲ್ಲ
ಕುಮಾರಸ್ವಾಮಿ ಅವರನ್ನ ತಪ್ಪಿತಸ್ಥರಾಗಿ ಮಾಡಬೇಕು ಅಂತ ಕಾಂಗ್ರೆಸ್ ಸರ್ಕಾರ ಹೊರಟಿದೆ.. ಡಿನೋಟಿಫಿಕೇಶನ್ ವಿಚಾರ ವಾಗಿ ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ..2015 ರಲ್ಲಿ ಈ ಪ್ರಕರಣ ಆಗಿದೆ. ಇದಕ್ಕೂ ಕುಮಾರಸ್ವಾಮಿ ಅವರಿಗೂ ಸಂಬಂಧವಿಲ್ಲ,ಮುಡಾ ಕೇಸ್ ಗೂ, ಗಂಗೇನಹಳ್ಳಿ ಕೇಸ್ ಗೂ ಸಂಬಂಧವೇ ಇಲ್ಲ. ಸುಮ್ಮನೆ ಅವರ ತಪ್ಪು ಮುಚ್ಚಿಕೊಳ್ಳಲು ತಿರುಚೋ ಕೆಲಸ ಆಗ್ತಿದೆ.
ಡಿನೋಟಿಫಿಕೇಶನ್ ಆಗಿರೋದು ಯಡಿಯೂರಪ್ಪ ಅವರ ಕಾಲದಲ್ಲಿ. ಇದಕ್ಕೂ ಕುಮಾರಸ್ವಾಮಿ ಅವರಿಗೆ ಏನ್ ಸಂಬಂಧ..? ಕುಮಾರಸ್ವಾಮಿ ಅವರ ಕಾಲದಲ್ಲಿ ಫೈಲ್ ರಿಜೆಕ್ಟ್ ಮಾಡಿದ್ರು. ಅವರು ಸಹಿ ಹಾಕಿದ್ರಾ? ಅವರು ಡಿನೋಟಿಫಿಕೇಶನ್ ಮಾಡಿದ್ರಾ..? ಎಂದು ಕಿಡಿಕಾರಿದರು.
ರಾಜಕೀಯವಾಗಿ ಜೆಡಿಎಸ್ ಪಕ್ಷ ಬಿಜೆಪಿ, ಕಾಂಗ್ರೆಸ್ ವಿರುದ್ದ ಹೋರಾಟ ಮಾಡಿಕೊಂಡು ಬರುತ್ತಿದೆ ಇಷ್ಟು ವರ್ಷಗಳಿಂದ. ಲೋಕಸಭೆ ಚುನಾವಣೆಯಲ್ಲಿ ನಾವು ಒಂದಾಗಿರೋದು.. ಕುಮಾರಸ್ವಾಮಿ ಅವರು ಎಂದೂ ಕೂಡಾ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶಾಸಕ ಮುನಿರತ್ನ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು; ಮುನಿರತ್ನ ಕೇಸ್ ತನಿಖೆ ಆಗ್ತಿದೆ..ತನಿಖೆ ನಡೆಯೋ ಸಮಯದಲ್ಲಿ ಮಾತಾಡೋದು ಸರಿಯಲ್ಲ..ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಲಿ ಎಂದರು. ಮುನಿರತ್ನ ವಿಚಾರದಲ್ಲಿ FSL ವರದಿ ಬರಬೇಕು. ಅವರ ಧ್ವನಿಯೋ ಅಲ್ಲವೋ, ಅಂತ ಸತ್ಯ ಹೊರಗೆ ಬರಬೇಕು ಎಂದರು.
ಕಾನೂನಿಗಿಂತ ಯಾರು ದೊಡ್ಡವರು
ಕಾನೂನಿಗಿಂತ ಯಾರು ದೊಡ್ಡವರು ಅಲ್ಲ. ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು.. ಯಾದಗಿರಿ ಪಿಎಸ್ಐ ಪರಶುರಾಮ್ ಕೇಸ್ ಸರ್ಕಾರ ಹೇಗೆ ಮುಚ್ಚಿ ಹಾಕಲು ಪ್ರಯತ್ನ ಮಾಡಿತ್ತು ಅಂತ ಎಲ್ಲರಿಗೂ ಗೊತ್ತಿದೆ.. ವಾಲ್ಮೀಕಿ ಹಗರಣ ಕೇಸ್ ನಲ್ಲಿ ನಾಗೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಈ ಸರ್ಕಾರ ಹೇಗೆ ತನಿಖೆ ಮಾಡಿತು ಅಂತ ಜಗತ್ ಜಾಹೀರಾಗಿದೆ.
ಟಾರ್ಗೆಟ್ ರಾಜಕೀಯ ಮಾಡ್ತಿದೆ
ಶಾಸಕ ಮುನಿರತ್ನ ಅವರನ್ನ ತರಾತುರಿಯಲ್ಲಿ ಬಂಧನ ಮಾಡಿದ್ದಾರೆ. ಇದನ್ನ ನೋಡಿದ್ರೆ ರಾಜ್ಯ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡ್ತಿದೆ ಅಂತ ಅನ್ನಿಸುತ್ತಿದೆ.ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಬೇರೆ ಅವರ ಮೇಲೆ ತಪ್ಪು ಹೊರಿಸೋ ಕೆಲಸ ಮಾಡ್ತಿರೋದು ಜಗತ್ ಜಾಹೀರಾಗಿದೆ.ಸ್ವಾತಂತ್ರ್ಯ ಬಂದಾಗಿನಿಂದ ಅನೇಕ ಸರ್ಕಾರ ಕೆಲಸ ಮಾಡಿದೆ. ಆದರೆ ಈ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡಿಕೊಂಡು, ದ್ವೇಷದ ರಾಜಕೀಯ ಮಾಡಿಕೊಂಡು ಹೊರಟಿದ್ದಾರೆ.ಇದನ್ನ ರಾಜ್ಯದ ಜನರು ಮೆಚ್ಚುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಜಾತಿ ಆಧಾರದಲ್ಲಿ ರಾಜಕೀಯ ಮಾಡ್ತಿದೆ
ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಜಾತಿ ಆಧಾರದಲ್ಲಿ ರಾಜಕೀಯ ಮಾಡೋ ಪ್ರಯತ್ನ ಮಾಡ್ತಿದೆ. ಇಲ್ಲಿ ಒಕ್ಕಲಿಗ ಟ್ಯಾಗ್, ಓಬಿಸಿ ಟ್ಯಾಗ್, ಲಿಂಗಾಯತರ ಟ್ಯಾಗ್, ಮುಸ್ಲಿಂ ಟ್ಯಾಗ್ ಹಾಕಿ ರಾಜಕೀಯ ಮಾಡೋದು ಸೂಕ್ತ ಅಲ್ಲ, ಯಾವುದೋ ಸಮುದಾಯ ಒಲೈಕೆ ಮಾಡಿಕೊಳ್ಳಲು ಈ ರೀತಿ ಟಾರ್ಗೆಟ್ ರಾಜಕೀಯ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಬಂದು ಒಂದೂವರೆ ಆಗಿದೆ.ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ ಶುರುವಾಗಿದೆ ಎಂದು ಕಿಡಿಕಾರಿದರು.ನಾಳೆ ಚುನಾವಣೆ ನಡೆದರು, ಕಾಂಗ್ರೆಸ್ ಸರ್ಕಾರವನ್ನ ರಾಜ್ಯದ ಜನ ತಿರಸ್ಕಾರ ಮಾಡ್ತಾರೆ.
ಅ ಮಟ್ಟದ ವಾತಾವರಣ ಸರ್ಕಾರದ ವಿರುದ್ದ ಇದೆ. ಅವರ ತಪ್ಪು ಮುಚ್ಚಿಕೊಳ್ಳಲು ನಿತ್ಯ ಹಗರಣಗಳು, ಅಕ್ರಮಗಳು ನಡೆಯುತ್ತಿವೆ..ನಾವು ವಿರೋಧ ಪಕ್ಷವಾಗಿ ಪ್ರಜಾಪ್ರಭುತ್ವದಲ್ಲಿ ನಮಗೆ ಹಕ್ಕು ಕೊಟ್ಟಿದ್ದಾರೆ..ಅದನ್ನ ಬಯಲಿಗೆ ಎಳೆಯೋದೇ ತಪ್ಪಾ..? ಎಂದು ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ NDA ಅಭ್ಯರ್ಥಿ
ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಮಾತನಾಡಿದ ಅವರು; ಟಿಕೆಟ್ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಬಿಜೆಪಿ-ಜೆಡಿಎಸ್ ನಾಯಕರು ದೆಹಲಿಯಲ್ಲಿ ಮಾತಾಡಿದ್ದಾರೆ. ಇನ್ನು ಚುನಾವಣೆ ಘೋಷಣೆ ಆಗಿಲ್ಲ. ಉಪ ಚುನಾವಣೆ ದಿನಾಂಕ ಘೋಷಣೆ ಆಗಲಿ..NDA ಅಭ್ಯರ್ಥಿ ಚನ್ನಪಟ್ಟಣದ ಕ್ಷೇತ್ರದಲ್ಲಿ ಅಭ್ಯರ್ಥಿ ಆಗ್ತಾರೆ ಎಂದು ತಿಳಿಸಿದರು.
ಸಿಪಿ ಯೋಗೇಶ್ವರ್ ಅವರು ಕೂಡಾ ಹೇಳಿದ್ದಾರೆ. ಅವರ ಬೆಂಬಲಿಗರ ಜೊತೆ ಸಭೆ ಮಾಡಿ NDA ಅಭ್ಯರ್ಥಿಗೆ ಶಕ್ತಿ ತುಂಬಬೇಕು ಅಂತ ಅವರು ಕೆಲಸ ಮಾಡ್ತಿದ್ದಾರೆ.ನಾವು ನಮ್ಮ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು.
ಅತಿ ಶೀಘ್ರದಲ್ಲೇ ಗುಡ್ ನ್ಯೂಸ್
ಚನ್ನಪಟ್ಟಣದಲ್ಲಿ ಜೆಡಿಎಸ್ ನಗರಸಭೆ ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆ ಆಗಿರೋ ವಿಚಾರಕ್ಕೆ ಮಾತನಾಡಿದ ಅವರು, ನಿನ್ನೆ (ಶುಕ್ರವಾರ) ನಾನು ನಗರಪಾಲಿಕೆ ಸದಸ್ಯರ ಜೊತೆ ಮಾತುಕತೆ ಮಾಡಿದ್ದೇನೆ..ಸಾಕಷ್ಟು ಜನ ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ.. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಆಮಿಷ ಒಡ್ಡಿ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇವೆಲ್ಲವನ್ನು ಸರಿ ಮಾಡೋಕೆ ನಿನ್ನೆ ತೋಟದ ಮನೆಯಲ್ಲಿ ಸಭೆ ಮಾಡಿದ್ದೇನೆ..ಅತಿ ಶೀಘ್ರದಲ್ಲೇ ಕೆಲವು ಗುಡ್ ನ್ಯೂಸ್ ಕೊಡ್ತೀನಿ. ತಲೆ ಕೆಡಿಸಿಕೊಳ್ಳಬೇಡಿ ಎಂದರು