ಹೊಸ ವರ್ಷಕ್ಕೆ ಶುಭಾಶಯ ಕೋರಿದ ಕೈ ಮುಖಂಡರು; ಪ್ರಜಾಪ್ರಭುತ್ವ ರಕ್ಷಿಸಲು ಕರೆ

Most read

ಬೆಂಗಳೂರು: ಹೊಸ ವರ್ಷಕ್ಕೆ ಕಾಂಗ್ರೆಸ್‌ ವರಿಷ್ಠರಾದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೇರಿದಂತೆ ಅನೇಕ ಗಣ್ಯರು ದೇಶ ಮತ್ತು ಮಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

ರಾಹುಲ್ ಗಾಂಧಿ ಅವರು ತಮ್ಮ ಸಂದೇಶದಲ್ಲಿ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ ಹೊಸ ವರ್ಷ ದೇಶದ ಜನತೆಗೆ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸು ಲಭಿಸಲು ಎಂದು ಹಾರೈಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ  ಅವರು ತಮ್ಮ ಶುಭಾಶಯದಲ್ಲಿ ಹೊಸ ವರ್ಷದಲ್ಲಿ ದುರ್ಬಲರ ಹಕ್ಕು, ಉದ್ಯೋಗದ ಹಕ್ಕು, ಮತದಾನದ ಹಕ್ಕು ಮತ್ತು ಘನತೆಯಿಂದ ಬದುಕುವ ಹಕ್ಕನ್ನು ರಕ್ಷಿಸಲು ಸಾಮೂಹಿಕ ಚಳವಳಿಯನ್ನು ಸಂಘಟಿಸೋಣ. ಸಬಲೀಕರಣ ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಬಲಪಡಿಸುವ ಪಣ ತೊಡೋಣ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸೋಣ ಎಂದಿಉ ಹೇಳಿದ್ದಾರೆ.

ದೇಶದ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸುರಕ್ಷತೆ, ರೈತರಿಗೆ ಸಮೃದ್ಧಿ, ಕಟ್ಟಕಡೆಯ ಸ್ಥಾನದಲ್ಲಿರುವವರಿಗೆ ಘನತೆಯ ಬದುಕು ಮತ್ತು ಗುಣಮಟ್ಟದ ಜೀವನ ಒದಗಿಸುವುದು ನಮ್ಮ ಹಂಚಿಕೆಯ ಸಂಕಲ್ಪವಾಗಿರಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರುತ್ತಾ ಈ ವರ್ಷ ಉತ್ತಮ ಮಳೆ – ಬೆಳೆಯಾಗಿ ರಾಜ್ಯ ಸಮೃದ್ಧಿಯಾಗಲಿ, ಸಮಾಜದಲ್ಲಿ ದ್ವೇಷ, ಅಸೂಯೆ ಅಳಿದು ಪ್ರೀತಿ – ಶಾಂತಿ – ಸೌಹಾರ್ದತೆ ನೆಲೆಸಲಿ, ಶಿಕ್ಷಣ, ಉದ್ಯೋಗ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವ ನಾಡಿನ ಪ್ರತಿಯೊಬ್ಬರ ಬದುಕು ಉನ್ನತಿಯೆಡೆಗೆ ಸಾಗಲಿ ಎಂದು ಮನದುಂಬಿ ಹಾರೈಸುತ್ತೇನೆ. ನಾವೆಲ್ಲರೂ ಕೂಡಿ  ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಭರವಸೆಗಳೊಂದಿಗೆ ಬರಮಾಡಿಕೊಳ್ಳೋಣ.  ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ಗುರಿಗಳತ್ತ ಸಾಗೋಣ, ಕನಸುಗಳನ್ನು ನನಸಾಗಿಸೋಣ ಮತ್ತು ನಾವೆಲ್ಲರೂ ಜೊತೆಯಾಗಿ ಸಮೃದ್ಧ ಕರ್ನಾಟಕ ಕಟ್ಟೋಣ! ಎಂದು ಹಾರೈಸಿದ್ದಾರೆ.

ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ವರ್ಷವು ನಿಮ್ಮೆಲ್ಲರ ಜೀವನದಲ್ಲಿ ಅಪಾರ ಸುಖ, ಶಾಂತಿ, ಆರೋಗ್ಯ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

More articles

Latest article