ಹೊಸ ಆಸ್ತಿ ತೆರಿಗೆ (New Property Tax) ಹಾಗೂ ಖಾತಾ ವ್ಯವಸ್ಥೆಗೆ (Khata System) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakukmar) ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.
ಪ್ರಸ್ತುತ ಯುನಿಟ್ ವಿಸ್ತೀರ್ಣ ಮೌಲ್ಯ ಆಸ್ತಿತೆರಿಗೆ ಪದ್ದತಿಯನ್ನು 2008 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಯಿತು. ಈ ಪದ್ದತಿಯಲ್ಲಿ ಆಸ್ತಿಗಳನ್ನು 18 ವಿವಿಧ ವರ್ಗಗಳಾಗಿ ಹಾಗೂ ಇಡೀ ನಗರದ ಪ್ರದೇಶಗಳನ್ನು 6-ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿ ವಲಯವು ಅಂದಿನ ಮಾರ್ಗಸೂಚಿ ಮೌಲ್ಯದ ಪ್ರಕಾರ ವಿವಿಧ ತೆರಿಗೆ ದರವನ್ನು ಹೊಂದಿರುತ್ತದೆ. ಈ 18 ವರ್ಗಗಳು ಆಸ್ತಿಗಳನ್ನು ಒಂದರ ಮೇಲೆ ಒಂದಾಗಿ ವ್ಯಾಪಿಸುತ್ತಾ, ಅಧಿಕಾರಿಗಳು ಮತ್ತು ನಾಗರಿಕರಲ್ಲಿಯೂ ಸಹ ಗೊಂದಲವನ್ನು ಉಂಟುಮಾಡಿತ್ತು.
ಈ ಹಿಂದೆ ನಾಗರಿಕರು ಸ್ವಯಂ-ಘೋಷಣೆಯನ್ನು ಸಲ್ಲಿಸಲು 7 ವಿವಿಧ ಕ್ಲಿಷ್ಟಕರವಾದ ನಮೂನೆಗಳಿತ್ತು. ಲಕ್ಷಾಂತರ ಮಂದಿ ನಾಗರಿಕರು ತಮ್ಮ ವರ್ಗಗಳನ್ನು, ವಲಯಗಳನ್ನು ತಪ್ಪಾಗಿ ಘೋಷಿಸಿ, ದಂಡದ ವಸೂಲಾತಿಗೆ ಗುರಿಯಾಗಿದ್ದರು. ಇದಲ್ಲದೆ, 2008 ರಿಂದ ಮತ್ತು 2016 ರಲ್ಲಿ ಕೊನೆಯ ಪರಿಷ್ಕರಣೆ ಮಾಡಿದಾಗ ಮಾರ್ಗಸೂಚಿ ದರಗಳು ಬಹಳಷ್ಟು ಬದಲಾಗಿದ್ದು, ಆದ್ದರಿಂದ ಇಂದು ಕಡಿಮೆ ಮಾರ್ಗಸೂಚಿ ದರಗಳನ್ನು ಹೊಂದಿರುವ ನಾಗರಿಕರು ಹೆಚ್ಚಿನ ತೆರಿಗೆ ದರದ ವಲಯಗಳಲ್ಲಿ ವರ್ಗೀಕರಿಸಲಾಗಿದೆ ಹಾಗೂ ಪ್ರತಿಕ್ರಮವಾಗಿ. ಹೆಚ್ಚಿನ ತೆರಿಗೆ ದರದ ವಲಯದಲ್ಲಿನ ಸ್ವತ್ತುಗಳು (ಅಂದರೆ ಎ ಅಥವಾ ಬಿ ವಲಯ) ಕಡಿಮೆ ಮಾರ್ಗಸೂಚಿ ಮೌಲ್ಯವನ್ನು, ಕಡಿಮೆ ತೆರಿಗೆ ದರದ ವಲಯದಲ್ಲಿ ಸ್ವತ್ತುಗಳು (ಅಂದರೆ ಡಿ, ಇ ಅಥವಾ ಎಫ್ ವಲಯದಲ್ಲಿ) ಹೆಚ್ಚಿನ ಮಾರ್ಗಸೂಚಿ ಮೌಲ್ಯದ ಆಸ್ತಿಗಿಂತ ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಈ ವ್ಯವಸ್ಥೆಯನ್ನು ಸರಳೀಕರಿಣಗೊಳಿಸುವುದು, ತರ್ಕಬದ್ಧಗೊಳಿಸುವುದು ಮತ್ತು ನ್ಯಾಯಯುತವಾದ ಆಸ್ತಿ ತೆರಿಗೆ ವ್ಯವಸ್ಥೆಯನ್ನು ತರುವುದು ಹೊಸ ಆಸ್ತಿತೆರಿಗೆ ವ್ಯವಸ್ಥೆಯ ಉದ್ದೇಶವಾಗಿದ್ದು, ಹೊಸ ಆಸ್ತಿತೆರಿಗೆ ಪದ್ದತಿಯು ಈ ಕೆಳಗಿನ ಸ್ಪಷ್ಟವಾದ 6 ವರ್ಗದ ಆಸ್ತಿಗಳನ್ನು ಹೊಂದಿದೆ.
(i) ವಸತಿ (ಸ್ವಂತ ಮತ್ತು ಬಾಡಿಗೆ ಬಳಕೆ)
(ii) ವಾಣಿಜ್ಯ.
(iii) ಕೈಗಾರಿಕಾ.
(iv) ಸ್ಟಾರ್ ಹೋಟೆಲ್‌ಗಳು.
(v) ವಿನಾಯಿತಿ ನೀಡಲಾಗಿರುವ ಜಾಗ.
(vi) ಸಂಪೂರ್ಣವಾಗಿ ಖಾಲಿ ಜಮೀನುಗಳು.
ನಾಗರಿಕರು ಆನ್‌ಲೈನ್‌ನಲ್ಲಿ ಸರಳವಾಗಿ ತಮ್ಮ ಸ್ವತ್ತಿಗೆ ಸಂಬಂಧಿಸಿದಂತೆ ಕೇವಲ (i) ಪ್ಲಾಟ್ ಅಥವಾ ನಿವೇಶನ ವಿಸ್ತೀರ್ಣ. (ii) ಕಟ್ಟಡದ ಪ್ರದೇಶ. (iii) ಸ್ವತ್ತಿನ ಬಳಕೆ. ವಿವರವನ್ನು ನಮೂದಿಸುವ ಮೂಲಕ ಹೊಸ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ.