ರಾಜ್ಯದಲ್ಲಿ 3 ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ: ರಾಮನಗರ ಜಿಲ್ಲೆಗಿಲ್ಲ ಮೆಡಿಕಲ್‌ ಕಾಲೇಜು!

Most read

ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷ ಹೊಸ 3 ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಮಾತ್ರ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅನುಮತಿ ನೀಡಿದ್ದು, ಈ 3 ಕಾಲೇಜುಗಳಿಂದ 350 ಸೀಟುಗಳು ಲಭ್ಯವಾಗಲಿವೆ. ಇದರಿಂದಾಗಿ ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. .

ಬೆಂಗಳೂರಿನ BGS ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ-150, PES ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆ-100, ಬಾಗಲಕೋಟೆಯ ಎಸ್‌‍ಆರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 100 ಸೀಟುಗಳ ಭರ್ತಿಗೆ ಎನ್‌ಎಂಸಿ ಅವಕಾಶ ನೀಡಿದೆ.

NMC ನಿಗದಿಪಡಿಸಿರುವ ಮಾನದಂಡಕ್ಕಿಂತ ಹೆಚ್ಚಿನ ಸೌಲಭ್ಯಗಳು, ವಿಶಾಲ ಕ್ಯಾಂಪಸ್‌ ತನ್ನಲ್ಲಿ ಇರುವುದರಿಂದ ಹೆಚ್ಚಿನ ಸೀಟು ನೀಡಬೇಕೆಂದು BGS ಪ್ರಸ್ತಾವನೆ ಸಲ್ಲಿಸಿತ್ತು. ಹಾಗಾಗಿ ಈ ಸಂಸ್ಥೆಗೆ 150 ಸೀಟುಗಳಿಗೆ ಅನುಮತಿ ಸಿಕ್ಕಿದೆ. PES ಈ ಬಾರಿ 100 ಸೀಟುಗಳಿಗೆ ಮಾತ್ರ ಪ್ರಸ್ತಾವನೆ ಸಲ್ಲಿಸಿತ್ತು ಕೇಳಿದಷ್ಟು ಸೀಟುಗಳಿಗೆ ಅನುಮತಿ ಸಿಕ್ಕಿದೆ.

ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕೆಂಬ ಬೇಡಿಕೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೆಲವು ತಾಂತ್ರಿಕ ಕಾರಣಗಳಿಂದ ಅನುಮೋದನೆ ನೀಡಿಲ್ಲದಿರುವುದು ತಿಳಿದುಬಂದಿದೆ. ಸದ್ಯ 11,745 ವೈದ್ಯಕೀಯ ಸೀಟುಗಳು ಲಭ್ಯವಾಗುತ್ತಿದ್ದು, 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಸೀಟುಗಳ ಸಂಖ್ಯೆ 12,095ಕ್ಕೆ ಏರಿಕೆಯಾಗಲಿದೆ

More articles

Latest article