ನೇಪಾಳ ಚುನಾವಣೆ : ಹಳೆ ಹುಲಿಗಳಿಗೂ ಸವಾಲಾದ ‘ಜೆನ್-ಜಿ’ ಕ್ರಾಂತಿ!

ನೇಪಾಳದಲ್ಲಿ ಮಾರ್ಚ್ 5ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ, ದೇಶದಲ್ಲಿ ರಾಜಪ್ರಭುತ್ವದ ಮರುಸ್ಥಾಪನೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. 2008ರಲ್ಲಿ 239 ವರ್ಷಗಳ ಸುದೀರ್ಘ ರಾಜಪ್ರಭುತ್ವ ಅಂತ್ಯಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಗಿದ್ದರೂ, ಪ್ರಸ್ತುತ ರಾಜಕೀಯ ಅಸ್ಥಿರತೆಯು ಜನರಲ್ಲಿ ಹಳೆಯ ಆಡಳಿತದ ಬಗ್ಗೆ ಕುತೂಹಲ ಮೂಡಿಸಿದೆ. ಎರಡು ದಶಕಗಳಿಂದ ದೇಶದ ಅಧಿಕಾರವನ್ನು ಹಿಡಿದಿಟ್ಟುಕೊಂಡಿರುವ ಹಳೆಯ ರಾಜಕೀಯ ಪಕ್ಷಗಳು ಮತ್ತು ಬದಲಾವಣೆ ಬಯಸುತ್ತಿರುವ ‘ಜೆನ್-ಜಿ’ (Gen Z) ಯುವ ಸಮೂಹದ ನಡುವಿನ ನೇರ ಹಣಾಹಣಿಯಾಗಿದೆ.

ಈ ಬಾರಿಯ ಚುನಾವಣೆಯ ಅತ್ಯಂತ ಆಕರ್ಷಕ ಮತ್ತು ಕುತೂಹಲಕಾರಿ ಬೆಳವಣಿಗೆಯೆಂದರೆ ಅದು ಬಾಲೆಂದ್ರ ಶಾ ಅವರ ರಾಜಕೀಯ ಪ್ರವೇಶ. ಕಠ್ಮಂಡುವಿನ ಮೇಯರ್ ಆಗಿ ಜನಪ್ರಿಯತೆ ಗಳಿಸಿರುವ 35 ವರ್ಷದ ಬಾಲೆನ್ ಶಾ, ಇದೀಗ ರಾಷ್ಟ್ರೀಯ ರಾಜಕಾರಣಕ್ಕೆ ಧುಮುಕಿದ್ದಾರೆ. ತಮ್ಮ ನೇರ ನುಡಿ ಮತ್ತು “ಮಾತಿಗಿಂತ ಕೆಲಸಕ್ಕೆ ಆದ್ಯತೆ” ಎಂಬ ಕಾರ್ಯವೈಖರಿಯಿಂದಾಗಿ ಅವರು ನೇಪಾಳದ ಯುವಜನತೆಯ ಅಚ್ಚುಮೆಚ್ಚಿನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ರಾಜಕಾರಣದ ದಿಗ್ಗಜ, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ವಿರುದ್ಧವೇ ಝಾಪಾ-5 (Jhapa-5) ಕ್ಷೇತ್ರದಿಂದ ಬಾಲೆನ್ ಶಾ ಅವರು ಸ್ಪರ್ಧಿಸುತ್ತಿರುವುದು ಈ ಬಾರಿಯ ಚುನಾವಣೆಯನ್ನು ರಾಷ್ಟ್ರಮಟ್ಟದ ಹೈ-ವೋಲ್ಟೇಜ್ ಕದನವನ್ನಾಗಿ ಮಾರ್ಪಡಿಸಿದೆ. ಹಳೆಯ ತಲೆಮಾರಿನ ರಾಜಕೀಯ ಸಿದ್ಧಾಂತಗಳನ್ನು ಸವಾಲು ಮಾಡುತ್ತಿರುವ ಶಾ, ಆಧುನಿಕ ನೇಪಾಳದ ಆಶೋತ್ತರಗಳ ಪ್ರತಿರೂಪವಾಗಿ ಕಣಕ್ಕಿಳಿದಿದ್ದು, ಇಡೀ ದೇಶದ ಗಮನ ಈ ಕ್ಷೇತ್ರದ ಫಲಿತಾಂಶದತ್ತ ನೆಟ್ಟಿದೆ.

ಯುವ ಅಲೆಯ ಬಗ್ಗೆ ‘ಹಳೆ ಹುಲಿ’ಗಳ ಅಭಿಪ್ರಾಯವೇನು?

ಆರಂಭದಲ್ಲಿ ಪ್ರತಿಭಟನೆಯನ್ನು ‘ಅರಾಜಕತೆ’ ಎಂದು ಕರೆದಿದ್ದ ಓಲಿ, ಈಗ ಯುವಜನತೆಯನ್ನು “ದೇಶದ ನಿರ್ಮಾಣದ ಶಕ್ತಿ” ಎಂದು ಬಣ್ಣಿಸುತ್ತಿದ್ದಾರೆ. ಪ್ರಮುಖ ಯುವ ಅಭ್ಯರ್ಥಿ ಬಾಲೆಂದ್ರ ಶಾ ಅವರಂತಹ ಹೊಸಬರನ್ನು “ಸಿದ್ಧಾಂತ ರಹಿತರು” ಎಂದು ಲೇವಡಿ ಮಾಡಿರುವ ಅವರು, ರಾಷ್ಟ್ರವನ್ನು ಮುನ್ನಡೆಸಲು ಕೇವಲ ಜನಪ್ರಿಯತೆ ಸಾಕಾಗದು, ರಾಜಕೀಯ ಅನುಭವ ಮತ್ತು ಬಲಿಷ್ಠ ಸಿದ್ಧಾಂತದ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಹಿರಿಯ ಮುತ್ಸದ್ದಿ ಮಿನೇಂದ್ರ ರಿಜಾಲ್ ಅವರು “ಯುವಜನರ ಆಕ್ರೋಶವು ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧದ ಕರೆಯಾಗಿದೆ, ನಾವು ಇದರಿಂದ ಕಲಿಯುವುದು ಸಾಕಷ್ಟಿದೆ” ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಪಕ್ಷವು 49 ವರ್ಷದ ಗಗನ್ ಥಾಪಾ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಮೂಲಕ “ಹಳೆಯ ಪದ್ಧತಿಗಳ ನಿರ್ಮೂಲನೆ”ಗೆ ಮುಂದಾಗಿದೆ ಎಂದಿದ್ದಾರೆ.

More articles

Latest article

Most read