Sunday, September 8, 2024

ನೀಟ್ ವಿರುದ್ಧ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರ ಸಿದ್ದತೆ: ಕರ್ನಾಟಕದಲ್ಲಿ ರದ್ದಾಗತ್ತಾ ನೀಟ್ ಪರೀಕ್ಷೆ?

Most read

ನೀಟ್ ರದ್ದುಗೊಳಿಸಬೇಕು ಹಾಗೂ ವೈದ್ಯಕೀಯ ಆಕಾಂಕ್ಷಿಗಳಿಗೆ ಹೊಸ ಪ್ರವೇಶ ಪರೀಕ್ಷೆ ತರಬೇಕು ಎಂದು ಪಶ್ಚಿಮ ಬಂಗಾಳದ ವಿಧಾನಸಭೆಯು ಬುಧವಾರ ನಿರ್ಣಯ ಅಂಗೀಕರಿಸಿದೆ. ಕರ್ನಾಟಕ ಸರ್ಕಾರವು ನೀಟ್ ವಿರೋಧಿಸಿ ನಿರ್ಣಯ ಕೈಗೊಳ್ಳಲು ಮುಂದಾಗಿದೆ.

ನೀಟ್ ಪತ್ರಿಕೆ ಸೋರಿಕೆ ವಿಚಾರ ದೇಶವನ್ನೇ ಬೆಚ್ಚಿಬೀಳಿಸಿದ ನಂತರ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ರದ್ದುಗೊಳಿಸಲು ಸಜ್ಜಾಗಿದೆ. ಈ ಕುರಿತು ಇಂದು ನಿರ್ಣಯ ಕೈಗೊಳ್ಳವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.

ಕರ್ನಾಟಕ‌ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಿ ಸಾವಿರಾರು ಸೀಟುಗಳನ್ನು ನೀಡಿದೆ. ಆದರೆ ನೀಟ್ ಪರೀಕ್ಷೆಯು ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತಿದೆ ಮತ್ತು ಮಕ ಕರ್ನಾಟಕದ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದ್ದು, ಈ ಅನ್ಯಾಯದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ನಿನ್ನೆ ಡಿಕೆ ಶಿವಕುಮಾರ್ ಕರೆ ನೀಡಿದ್ದರು.

ಈಗಾಗಲೇ ನೀಟ್ ಪರೀಕ್ಷೆ ರದ್ದು ಪಡಿಸಿ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ತಮ್ಮದೇ ಪರೀಕ್ಷೆ ವ್ಯವಸ್ಥೆಯಲ್ಲಿ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟ್ ದೊರಕಿಸಿಗೊಡಲು ಸಿದ್ದತೆ ಮಾಡಿಕೊಂಡಿದೆ. ತಮ್ಮದೇ ಪರೀಕ್ಷೆ ನಡೆಸಲು ಈಗ ತಮಿಳುನಾಡು ತೆಗೆದುಕೊಂಡ ನಿರ್ಣಯವನ್ನು ಕೇಂದ್ರ ಸರ್ಕಾರ ಅನುಮೋದಿಸಬೇಕಿದೆ. ಕರ್ನಾಟಕದಲ್ಲಿ ಮಸೂದೆ ಅಂಗೀಕಾರವಾದರೆ, ಕರ್ನಾಟಕ ತನ್ನದೇ ಆದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ.

ನೀಟ್ ಪರೀಕ್ಷೆ ರದ್ದಾಗಿ ನಾಡಿನಲ್ಲಿ ತಮ್ಮದೇ ಪರೀಕ್ಷೆ ವ್ಯವಸ್ಥೆ ಅಸ್ತಿತ್ವಕ್ಕೆ ಬಂದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಅವಕಾಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಮತ್ತು ನಾಡಿನ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಿಸಲು ಸುಲಭವಾಗುತ್ತದೆ.

More articles

Latest article