Wednesday, December 10, 2025

ನಂದಿನಿ ಹಾಲಿನ ದರ ಹೆಚ್ಚಳ ಮಾಡಿ ಕೆಎಂಎಫ್ ಆದೇಶ: ಪ್ಯಾಕೆಟ್‌ನಲ್ಲಿ ಇನ್ಮುಂದೆ ಐವತ್ತು ಮಿಲಿ ಹೆಚ್ಚಳ ಹಾಲು!

Most read

ರಾಜ್ಯದಲ್ಲಿ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಈಗ ನಂದಿನಿ ಹಾಲಿನ ದರವನ್ನು ಹೆಚ್ಚಿಸದೆ. ಕರ್ನಾಟಕ ಹಾಲು ಮಂಡಳಿ ಲೀಟರ್‌ ಹಾಲಿಗೆ 2.10 ರೂ ಬೆಲೆ ಹೆಚ್ಚಳ ಮಾಡಿ ಆದೇಶಿಸಿದೆ.

ಹಾಲಿನ ದರದ ಜೊತೆ ಪ್ರತೀ ಪ್ಯಾಕೆಟ್‌ನಲ್ಲಿ 50ml ಹಾಲು ಕೂಡ ಹೆಚ್ಚಳ ಮಾಡಲಿದೆ. ಹೀಗಾಗಿ ಇನ್ನು ಮುಂದೆ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ನಲ್ಲಿ 50ml ಹೆಚ್ಚು ಇರಲಿದ್ದು, ಒಟ್ಟು 550 ml ಹಾಲು ಸಿಗಲಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.

ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ಸದ್ಯ 98 ಲಕ್ಷ 17ಸಾವಿರ ಲೀ ಹಾಲು ಸಂಗ್ರಹ ಆಗುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಲೀಟರ್ ಸಂಗ್ರಹ ಗುರಿ ಮುಟ್ಟಲಿದೆ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಲೀಟರ್‌ ಅನ್ನು ಹಾಲಿನ ಪೌಡರ್ ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ. 27 ಲಕ್ಷ ಹಾಲು ಉತ್ಪಾದಕರು ಮತ್ತು ಗ್ರಾಹಕರು ಇಬ್ಬರಿಗೂ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದ ಹಾಗೆ. ಲೀ ಗೆ ಸದ್ಯ ಗ್ರಾಹಕರಿಗೆ 42 ರೂ ಇದೆ ಎಂದಿದ್ದಾರೆ.

ಸಾವಿರ ಮಿಲಿಲೀಟರ್ ಬರ್ತಿದ್ದ ಹಾಲು ಇನ್ಮೇಲೆ ಸಾವಿರದ ಐವತ್ತು ಮಿಲಿಲೀಟರ್ ಗೆ ಏರಿಕೆಯಾಗಲಿದೆ. ಅಂದರೆ 1ಲೀಟರ್ ಹಾಲಿನ ಪ್ಯಾಕೆಟ್ನಲ್ಲಿ 50ml ಹೆಚ್ಚಳ ಸೇರ್ಪಟೆಯಾಗಲಿದೆ. ಹಾಗಾಗಿ ಹೆಚ್ಚುವರಿ ಹಾಲಿಗೆ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಹಾಲು ಹೆಚ್ಚಳ ಮಾಡಿದ್ದಕ್ಕೆ 2ರೂ ದರ ಏರಿಕೆ ಮಾಡಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷರು ತಿಳಿಸಿದ್ದಾರೆ. ಹಾಲಿನ ದರ ಮಾತ್ರ ಹೆಚ್ಚಳ ಮಾಡಲಾಗಿದೆ. ಮೊಸರಿಗೆ ಈ ಹಿಂದಿನ ದರವೇ ಅನ್ವಯವಾಗಲಿದೆ.

More articles

Latest article