ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎರಡು ಹಂತದಲ್ಲಿ ಭದ್ರತೆ ಕಲ್ಪಿಸಲಾಗುತ್ತಿದೆ. 4999 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ ಬಂದಿರುವ ಸಾವಿರಾರು ಪೊಲೀಸರಿಗೆ ಗುಣಮಟ್ಟದ ಆಹಾರ ಕೊಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇನ್ನು ಎರಡನೇ ಹಂತದ ಪೊಲೀಸರು ಜಂಬೂಸವಾರಿ ದಿನ ಬಂದಿಳಿಯಲಿದ್ದು ಅಂದು ಪರಿಸ್ಥಿತಿ ಯಾವ ರೀತಿ ಇರುತ್ತದೆ ಕಾದು ನೋಡಬೇಕಿದೆ.
ಬಂದೋಬಸ್ತ್, ಭದ್ರತೆ ಮೊದಲಾದ ಕಾರಣಗಳಿಗಾಗಿ ಕರ್ತವ್ಯಕ್ಕಾಗಿ ನಿಯೋಜಿಸಲ್ಪಡುವ ಪೊಲೀಸರಿಗೆ ಅವರಿರುವ ಸ್ಥಳಕ್ಕೆ ತಿಂಡಿ ಊಟವನ್ನು ಸರಬರಾಜು ಮಾಡಲಾಗುತ್ತದೆ. ಆದರೆ ಆ ಊಟವನ್ನು ಪ್ರಾಣಿಗಳೂ ತಿನ್ನಲಾರವು ಎನ್ನುವುದು ಕಟುಸತ್ಯ.
ವರ್ಷದಲ್ಲಿ ಹತ್ತಾರು ಬಾರಿ ವಿಶೇಷ ಕರ್ತವ್ಯದ ಮೇಲೆ ಸಾವಿರಾರು ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸುತ್ತಾರೆ. ಇದರ ಜೊತೆಗೆ ದಸರಾ ಹಬ್ಬ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ನಾಡ ಹಬ್ಬದ ಸಂದರ್ಭದಲ್ಲಿಯೂ ಅವರಿಗೆ ಸ್ವಚ್ಛ ಮತ್ತು ರುಚಿಕರ ಊಟ ನೀಡುವುದಿಲ್ಲ. ಇದರ ಹೊರೆಯನ್ನು ಯಾರೂ ಹೊರದಿರುವುದು ಕಂಡುಬಂದಿದೆ.
ದಸರಾ ಭದ್ರತೆಗೆ ನಿಯೋಜನೆಗೊಂಡ ದಿನದಿಂದ ಕಳಪೆ ಊಟ ಸರಬರಾಜು ಮಾಡುತ್ತಿದೆ. ಹಲವು ಪೊಲೀಸರು ತಮ್ಮ ನೋವನ್ನು ನುಂಗಿಕೊಂಡೆ ಕೊಟ್ಟ ಊಟವನ್ನು ತಿಂದರೆ. ಉಳಿದ ಪೊಲೀಸರು ಊಟವನ್ನು ದಾರಿಯ ಬದಿಯಲ್ಲೇ ಬಿಟ್ಟು ಹೋಟೆಲ್ಗಳಿಗೆ ತೆರಳುತ್ತಿರುವ ಘಟನೆ ಬೆಳಕಿಗೆ ಬಂದಿವೆ.
ಊಟದ ಪೊಟ್ಟಣದಲ್ಲಿ ಬೆಳಗ್ಗೆ ಬಿಸಿಬೇಳೆ ಬಾತ್ ಅನ್ನಾಸಾಂಬರ್ ಇದ್ದಾಗೆ, ಊಟದಲ್ಲಿನ ಜಪಾತಿ ಒಣಗಿ ಹೋಗಿರುವುದು, ಅನ್ನ ಬೆಂದೇ ಇಲ್ಲದಿರುವುದು, ಜೊತೆಗೆ ಅರ್ಧ ಲೀಟರ್ ಬಾಟಲ್ ಮಾತ್ರ ನೀಡಿ ಮತ್ತೊಂದ ಕೇಳಿದರು ಕೊಡದೆ ಇರುವುದು ಕೂಡ ನಡೆದಿದೆ. ಮೂರು ದಿನದಿಂದ ಮೈಸೂರಿನಲ್ಲಿ ಬಂದೋಬಸ್ತಿಗೆ ನಿಯೋಜನೆಗೊಂಡಿರುವ ಪೋಲೀಸರ ಊಟದ ಬಗ್ಗೆ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದನ್ನು ಗೃಹ ಇಲಾಖೆ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆಯೆ ಕಾದು ನೋಡಬೇಕಿದೆ.
ದಸರಾ ಪ್ರಯಕ್ತ ಅರಮನೆ ಸೇರಿದಂತೆ 45 ಕಡೆ ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ಮೊದಲ ಹಂತದಲ್ಲಿ 2996 ಮಂದಿ ಬಂದಿಳಿದಿದ್ದಾರೆ, ಎರಡನೇ ಹಂತದಲ್ಲಿ 4999 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಅವರು ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ನಡೆಯಲಿರುವ ಅ. 12ರಂದು ಬಂದಿಳಿಯಲಿದ್ದು, ಶೀಘ್ರದಲ್ಲೇ ಈ ಕುರಿತು ಕ್ರಮ ಕೈಗೊಂಡರೆ ಪೊಲೀಸರು ನಿರರ್ಗಳವಾಗಿ ಕರ್ತವ್ಯ ನಿರ್ವಹಿಸಲು ನೆರವು ಮಾಡಿಕೊಟ್ಟಂತಾಗುತ್ತದೆ.